EBM News Kannada
Leading News Portal in Kannada

ಕಪ್ಪು ಸಮುದ್ರದಲ್ಲಿ ಮುಳುಗಿದ ಟರ್ಕಿಯ ಸರಕು ನೌಕೆ

0



ಅಂಕಾರ: ಟರ್ಕಿಯ ಸರಕು ನೌಕೆಯೊಂದು ಕಪ್ಪುಸಮುದ್ರದಲ್ಲಿ 12 ಸಿಬಂದಿಯೊಂದಿಗೆ ಮುಳುಗಿದ್ದು ತೀವ್ರ ಬಿರುಗಾಳಿ ರಕ್ಷಣೆ ಮತ್ತು ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಟರ್ಕಿಯ ಆಂತರಿಕ ಸಚಿವ ಆಲಿ ಎರ್ಲಿಕಯ ಸೋಮವಾರ ಹೇಳಿದ್ದಾರೆ.

ಇಸ್ತಾನ್‍ಬುಲ್‍ನಿಂದ ಪೂರ್ವಕ್ಕೆ ಸುಮಾರು 200 ಕಿ.ಮೀ ದೂರದಲ್ಲಿರುವ ಎರೆಗ್ಲಿ ನಗರದ ಬಂದರಿನ ಹೊರಗೆ ಬ್ರೇಕ್‍ವಾಟರ್ಗೆ ಅಪ್ಪಳಿಸಿದ ಬಳಿಕ ಹಡಗು ಮುಳುಗಿದೆ. ಹಡಗಿನಲ್ಲಿ 12 ಸಿಬಂದಿಗಳಿದ್ದು ಹವಾಮಾನ ಪರಿಸ್ಥಿತಿ ಸುಧಾರಿಸುವವರೆಗೆ ರಕ್ಷಣಾ ಕಾರ್ಯಾಚರಣೆಯನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಲಾಗಿದೆ ಎಂದವರು ಹೇಳಿದ್ದಾರೆ.

ಈ ಮಧ್ಯೆ, ಎರೆಗ್ಲಿ ಬಂದರು ಪ್ರದೇಶದಲ್ಲಿ ಸಮುದ್ರದ ನೀರು ಅಪಾಯಕಾರಿ ಮಟ್ಟದಲ್ಲಿ ಏರುತ್ತಿರುವುದರಿಂದ ಎರೆಗ್ಲಿ ಜೈಲಿನ ಕೈದಿಗಳನ್ನು ಸಮೀಪದ ಜೈಲುಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ನ್ಯಾಯ ಇಲಾಖೆಯ ಸಚಿವ ಯಿಲ್ಮಾಝ್ ಟಂಕ್ ಹೇಳಿದ್ದಾರೆ. ಆಗ್ನೇಯ ಪ್ರಾಂತಗಳಾದ ದಿಯರ್‍ಬಕಿರ್ ಮತ್ತು ಬಾಟ್ಮನ್‍ಗಳಲ್ಲಿ ಭಾರೀ ಮಳೆಯ ಕಾರಣ ಉಂಟಾದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಇಬ್ಬರು ಮೃತಪಟ್ಟಿದ್ದು ಕನಿಷ್ಟ 50 ಮಂದಿ ಗಾಯಗೊಂಡಿರುವುದಾಗಿ ಸರಕಾರ ಮಾಹಿತಿ ನೀಡಿದೆ.

Leave A Reply

Your email address will not be published.