EBM News Kannada
Leading News Portal in Kannada

ಟ್ರೂಡೊ ಆರೋಪದಿಂದ ಕೆನಡಾಕ್ಕೆ ಹೆಚ್ಚು ಅಪಾಯ

0


Photo:PTI

Photo:PTI

ವಾಷಿಂಗ್ಟನ್ : ಜಸ್ಟಿನ್ ಟ್ರೂಡೊ ಅವರ ಆರೋಪವು ಭಾರತಕ್ಕಿಂತ ಕೆನಡಾವನ್ನೇ ಹೆಚ್ಚು ಅಪಾಯಕ್ಕೆ ದೂಡಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿ ಮೈಕಲ್ ರೂಬಿನ್ ಅಭಿಪ್ರಾಯಪಟ್ಟಿದ್ದು, ಒಂದು ವೇಳೆ ಅಮೆರಿಕವು ಕೆನಡಾ ಮತ್ತು ಭಾರತದ ನಡುವೆ ಆಯ್ಕೆ ಮಾಡಬೇಕಾದರೆ ಖಂಡಿತಾ ಭಾರತವನ್ನೇ ಆಯ್ಕೆ ಮಾಡಲಿದೆ ಎಂದಿದ್ದಾರೆ.

ಕೆನಡಾಕ್ಕಿಂತ ಭಾರತವು ವ್ಯೂಹಾತ್ಮಕವಾಗಿ ಹೆಚ್ಚು ಮಹತ್ವ ಹೊಂದಿದೆ. ಭಾರತದ ಜತೆ ಕೆನಡಾ ಸಂಘರ್ಷ ಆರಂಭಿಸಿರುವುದು `ಆನೆಯ ಎದುರು ಇರುವೆ ಸಂಘರ್ಷ ಆರಂಭಿಸಿದಂತಾಗಿದೆ. ಪ್ರಧಾನಿ ಜಸ್ಟಿನ್ ಟ್ರೂಡೊ ಭಾರಿ ದೊಡ್ಡ ಪ್ರಮಾದ ಎಸಗಿದ್ದಾರೆ. ಸಮರ್ಥಿಸಿಕೊಳ್ಳಲು ಸಾಧ್ಯವಾಗದ ಆರೋಪ ಮಾಡಿದ್ದಾರೆ. ಜತೆಗೆ, ಭಯೋತ್ಪಾದಕನಿಗೆ ಯಾಕೆ ಆಶ್ರಯ ನೀಡಿದ್ದು ಎಂಬ ಪ್ರಶ್ನೆಗೆ ಉತ್ತರಿಸಬೇಕಾದ ಇಕ್ಕಟ್ಟಿಗೆ ಸಿಲುಕಿದ್ದಾರೆ’ ಎಂದು ರೂಬಿನ್ ಹೇಳಿದ್ದಾರೆ.

Leave A Reply

Your email address will not be published.