EBM News Kannada
Leading News Portal in Kannada

ವಾಟ್ಸ್​ಆ್ಯಪ್​ನಲ್ಲಿ ನಮಗೆ ಬೇಕಾದ ಸ್ವಂತ ಸ್ಟಿಕ್ಕರ್​​ ತಯಾರಿಸುವುದು ಹೇಗೆ?; ಇಲ್ಲಿದೆ ಟ್ರಿಕ್ಸ್​

0

ವಿಶ್ವದ ಜನಪ್ರಿಯ ವಾಟ್ಸ್​ಆ್ಯಪ್​ ಅಪ್ಲಿಕೇಷನ್​ನಲ್ಲಿ ಸ್ವಂತ ಸ್ಟಿಕ್ಕರ್​​ ಉಪಯೋಗಿಸುವ ಆಯ್ಕೆ ತಿಳಿದಿದೆಯಾ?. ನೀವು ಬಳಸುವ ವಾಟ್ಸ್​ಆ್ಯಪ್​ ಅಪ್ಲಿಕೇಷನ್​ನಲ್ಲಿ ನಿಮ್ಮ ನೆಚ್ಚಿನ ಫೋಟೊವನ್ನು ಸ್ಟಿಕ್ಕರ್​ಗೆ ರೂಪಾಂತರಿಸಿ ಬಳಸಿಕೊಳ್ಳುವ ಆಯ್ಕೆಯಿದೆ.

ಎಮೋಜಿ, ಫೋಟೊ, ವೀಡಿಯೋ, ಜಿಫ್​ ಪೈಲ್​ಗಳನ್ನು ಶೇರ್​ ಮಾಡುವ ಆಯ್ಕೆಯ ಜೊತೆಗೆ ವಾಟ್ಸ್​ಆ್ಯಪ್​ ಅಪ್ಲಿಕೇಶನ್​ನಲ್ಲಿ ಸ್ವಂತ ಸ್ಟಿಕ್ಕರ್​ ತಯಾರಿಸುವ ಆಯ್ಕೆ ನೀಡಲಾಗಿದೆ. ಆದರೆ, ಇದು ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಿದ್ದರೆ ವಾಟ್ಸ್​ಆ್ಯಪ್​ ಅಪ್ಲಿಕೇಶನ್​ನಲ್ಲಿ ಸ್ವಂತ ಸ್ಟಿಕ್ಕರ್​ ತಯಾರಿಸುವುದು ಹೇಗೆ? ಇಲ್ಲಿದೆ ಮಾಹಿತಿ.

ವಾಟ್ಸ್​ಆ್ಯಪ್​​ ಜಾಲತಾಣದಲ್ಲಿ ಸ್ಟಿಕ್ಕರ್​ ತಯಾರಿಸಲು ಪ್ಲೇ-ಸ್ಟೋರ್​ನಲ್ಲಿ ಲಭ್ಯವಾಗುವ ಬ್ಯಾಗ್​​ಗ್ರೌಂಡ್​ ಎರೇಸ್​ ಆ್ಯಪ್​ ಅನ್ನು ಡೌನ್​ಲೋಡ್​ ಮಾಡಬೇಕು. ಬ್ಯಾಗ್​​ಗ್ರೌಂಡ್​ ಆ್ಯಪ್​ನಲ್ಲಿರುವ ಲೋಡ್​ ಎ ಫೋಟೊ ಆಯ್ಕೆ ಮಾಡಿ ನಿಮ್ಮ ಅನುಕೂಲತೆಗೆ ತಕ್ಕಂತೆ ಫೋಟೊವನ್ನು ಎಡಿಟ್​ ಮಾಡಿಕೊಂಡು ಸೇವ್​ ಮಾಡಿ.

ಗೂಗಲ್​ನಲ್ಲಿ ದೊರೆಯುವ ಮತ್ತೊಂದು ಅಪ್ಲಿಕೇಶನ್​ ‘ಪರ್ಸನಲ್​ ಸ್ಟಿಕ್ಕರ್​ ಫಾರ್​ ವಾಟ್ಸ್​ ಆ್ಯಪ್’ ಡೌನ್​ ಲೋಡ್​ ಮಾಡಿಕೊಳ್ಳಿ. ಇದರ ಸಹಾಯದಿಂದ ಬ್ಯಾಕ್​ಗ್ರೌಂಡ್​ ಆ್ಯಪ್​ನಲ್ಲಿ ಎಡಿಟ್​ ಆದ ಫೋಟೊವನ್ನು ಪರ್ಸನಲ್​ ಸ್ಟಿಕ್ಕರ್​ ಆ್ಯಪ್​ ಮೂಲಕ ವಾಟ್ಸ್​ ಆ್ಯಫ್​ಗೆ ಶೇರ್​ ಮಾಡಿಕೊಳ್ಳಬಹುದು.

Leave A Reply

Your email address will not be published.