ದೆಹಲಿಯಲ್ಲಿ ಮದ್ಯ ಸಾಗಿಸುತ್ತಿದ್ದ ಕರ್ನಾಟಕ, ತೆಲಂಗಾಣದ ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ
ನವದೆಹಲಿ: ಲಾಕ್ ಡೌನ್ ಪಾಸ್ ಪಡೆದ ಅಕ್ರಮವಾಗಿ ಮದ್ಯ ಸಾಗಾಣಿಕ ಮಾಡುತ್ತಿದ್ದ ಯುವ ಕಾಂಗ್ರೆಸ್ನ ಇಬ್ಬರು ಕಾರ್ಯಕರ್ತರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಇವರಲ್ಲಿ ಒಬ್ಬರು ಕರ್ನಾಟಕದವರಾದರೆ ಮತ್ತೊಬ್ಬರು ತೆಲಂಗಾಣದ ಮೂಲದವರಾಗಿದ್ದಾರೆ.
ತುರ್ತು ವಸ್ತುಗಳ ಸಾಗಾಟಕ್ಕೆಂದು ಪಾಸ್ ಪಡೆದುಕೊಂಡು ಕಾರಿನಲ್ಲಿ ಹರಿಯಾಣದಿಂದ ದೆಹಲಿಗೆ ಮದ್ಯ ಸಾಗಾಟ ಮಾಡುತ್ತಿದ್ದ ಯುವ ಕಾಂಗ್ರೆಸ್ನ ಕರ್ನಾಟಕ ಕಾರ್ಯಕರ್ತ ಮನೀಶ್ ಬಸವರಾಜ್ ಹಾಗೂ ತೆಲಂಗಾಣದ ರಾಮಗಾಡು ಶ್ರವಣ್ ರಾವ್ ಅವರನ್ನು ಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 12 ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರ ವಿರುದ್ಧ ದೆಹಲಿ ಅಬಕಾರಿ ಕಾಯ್ದೆ ಸೆಕ್ಷನ್ 33 ಮತ್ತು 58ರ ಅನ್ವಯ ಎಫ್ಐಆರ್ ದಾಖಲಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.