ಡಿಜಿಟಲ್ ಕ್ವಾಲಿಟಿ ಆಡಿಯೊ-ವಿಡಿಯೊ ರೆಕಾರ್ಡಿಂಗ್‌ಗೆ ‘ಡಾಲ್ಬಿ ಆನ್’ ಆಪ್ ಬೆಸ್ಟ್!
ಈಗಂತೂ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಉತ್ತಮ ಕ್ವಾಲಿಟಿಯ ವಿಡಿಯೊ, ಆಡಿಯೊ ರೆಕಾರ್ಡಿಂಗ್ ಮಾಡುವ ಸೌಲಭ್ಯಗಳಿವೆ. ಅದಾಗ್ಯೂ ಕೆಲವು ಬಳಕೆದಾರರು ಹಾಗೂ ವಿಡಿಯೊ ಕಂಟೆಂಟ್ ಕ್ರಿಯೆಟರ್‌ಗಳು ಗುಣಮಟ್ಟದಲ್ಲಿ ವಿಡಿಯೊ, ಆಡಿಯೊ ಕ್ವಾಲಿಟಿಯಲ್ಲಿ ವಿಡಿಯೊಗಳುನ್ನು ರಚಿಸಲು ಮಾಡಲು ಥರ್ಡ್‌ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಕೆಮಾಡುತ್ತಾರೆ. ಅದಕ್ಕಾಗಿಯೇ ಹಲವು ಅಪ್ಲಿಕೇಶನ್‌ಗಳಿ ಸಹ ಲಭ್ಯ ಇದ್ದು, ಸದ್ಯ ಡಾಲ್ಬಿ ಸಂಸ್ಥೆಯ ಆಪ್ ಅತ್ಯುತ್ತಮ ಎಂದು ಬಿಂಬಿತವಾಗಿದೆ.
ಹೌದು, ಹೆಸರಾಂತ ಆಡಿಯೊ ಕಂಪನಿ ಡಾಲ್ಬಿಯ ಸೌಂಡ್‌ಗೆ ಮ್ಯೂಸಿಕ್ ಪ್ರಿಯರಂತೂ ಸದಾ ಫಿದಾ. ಈ ಸಂಸ್ಥೆಯು ವಿಡಿಯೊ ಮತ್ತು ಆಡಿಯೊ ರೆಕಾರ್ಡಿಂಗ್‌ಗಾಗಿ ಆಪ್‌ವೊಂದನ್ನು ಅಭಿವೃದ್ಧಿಪಡಿಸಿದೆ. ಅದುವೇ ಡಾಲ್ಬಿ ಆನ್ (Dolby On) ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ಅತ್ಯುತ್ತಮ ಕ್ವಾಲಿಟಿಯಲ್ಲಿ ವಿಡಿಯೊ ಹಾಗೂ ಡಾಲ್ಬಿ ಸೌಂಡ್ ಕ್ವಾಲಿಟಿಯಲ್ಲಿ ಆಡಿಯೊ ರೆಕಾರ್ಡರ್ ಮಾಡಬಹುದಾಗಿದೆ.
ತಮ್ಮ ಸ್ಮಾರ್ಟ್‌ಫೋನ್ ಮೂಲಕವೇ ಮ್ಯೂಸಿಕ್ ಮತ್ತು ಕಂಟೆಂಟ್ ಕ್ರಿಯೆಟ್ ಮಾಡುವವರಿಗೆ ಅವರ ಆಲೋಚನೆಗಳನ್ನು ಅದ್ಭುತವಾಗಿ ಸೆರೆಹಿಡಿಯಲು ಡಾಲ್ಬಿ ಆನ್ ಆಪ್ ಒಂದು ಅತ್ಯುತ್ತಮ ಪ್ಲಾಟ್‌ಫಾರ್ಮ್ ಒದಗಿಸಲಿದೆ. ಹಾಗೆಯೇ ರೆಕಾರ್ಡ್ ಮಾಡಿರುವುದನ್ನು ಅವರ ಸ್ನೇಹಿತರು ಸುಲಭವಾಗಿ ಹಂಚಿಕೊಳ್ಳಬಹುದಾಗಿದೆ. ಇನ್ನು ಈ ಆಪ್ ಆಂಡ್ರಾಯ್ಡ್ ಹಾಗೂ ಐಓಎಸ್ ಮಾದರಿ ಎರಡು ಓಎಸ್‌ಗಳಿಗೂ ಸಫೋರ್ಟ್ ಒದಗಿಸಲಿದೆ. ಹೀಗಾಗಿ ಬಳಕೆದಾರರು ಅವರ ಫೋನ್‌ಗಳ ಮೂಲಕವೇ ಅತ್ಯುತ್ತಮ ಆಡಿಯೊ ಮತ್ತು ವಿಡಿಯೊ ಗುಣಮಟ್ಟದ ರೆಕಾರ್ಡಿಂಗ್ ಮಾಡಬಹುದು.
ಈ ಅಪ್ಲಿಕೇಶನ್ ಬರುವ ಧ್ವನಿಯನ್ನು ಆಲಿಸಿಕೊಂಡು ಆಟೋಮ್ಯಾಟಿಕ್ ಆಗಿ ಆಡಿಯೊಗೆ ಎಫೆಕ್ಟ್ ನೀಡುತ್ತದೆ. ಮುಖ್ಯವಾಗಿ ನಾಯಿಸ್ ಮಿತಿಗೊಳಿಸುವುದು, ಇಕ್ಯೂ, ಲಿಮಿಟಿಂಗ್, ಸ್ಟೀರಿಯೊ ವೈಡಿಂಗ್, ಡಿ-ಎಸ್ಸಿಂಗ್ ಸೇರಿದಂತೆ ಇನ್ನೂ ಹೆಚ್ಚಿನ ಆಡಿಯೊ ಎಫೆಕ್ಟ್‌ಗಳನ್ನು ಸ್ವಯಂಚಾಲಿತವಾಗಿ ಅನ್ವಯಿಸುತ್ತದೆ. ಹಾಗೆಯೇ ಬಳಕೆದಾರರಿಗೆ ಇನ್‌ಸ್ಟಾಗ್ರಾಂ ನಲ್ಲಿನ styles ಫೋಟೋ ಫಿಲ್ಟರ್‌ಗಳಂತೆ ಯೂನಿಕ್ ಸೌಂಡ್‌ನಂತೆ ಎಡಿಟ್ ಮಾಡಲು ಅವಕಾಶ ನೀಡುತ್ತದೆ. ರೆಕಾರ್ಡಿಂಗ್‌ಗೆ ಸೋನಿಕ್ ಪ್ರೊಫೈಲ್‌ಗಳನ್ನು ಅನ್ವಯಿಸಲು ಸಹ ಅವಕಾಶ ಮಾಡಿಕೊಡುತ್ತವೆ.
ಪ್ರಸ್ತುತ ಲಾಕ್‌ಡೌನ್ ಜಾರಿಯಿರುವುದರಿಂದ ಎಲ್ಲರು ಮನೆಯಲ್ಲಿಯೇ ಇರುವುದು ಅತೀ ಅವಶ್ಯವಾಗಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಲಭ್ಯ ಇರುವ ಸೌಕರ್ಯಗಳೊಂದಿಗೆ ಆಡಿಯೊ ಮತ್ತು ವಿಡಿಯೊ ಲೈವ್-ಸ್ಟ್ರೀಮ್ ರೆಕಾರ್ಡಿಂಗ್ ಮಾಡುವವರಿಗೆ ಈ ಡಾಲ್ಬಿ ಆಪ್ ಒಂದು ಅತ್ಯುತ್ತಮ ತಾಣವಾಗಿದೆ. ಇನ್ನು ಈ ಅಪ್ಲಿಕೇಶನ್ ಮೂಲಕವೇ ವಿಡಿಯೊಗಳನ್ನು ನೇರವಾಗಿ ಫೇಸ್‌ಬುಕ್‌ಗೂ ಶೇರ್/ಪೋಸ್ಟ್ ಮಾಡಬಹುದಾಗಿದೆ. ಈ ಅಪ್ಲಿಕೇಶನ್ ಅನ್ನು ಬಳಕೆದಾರರು ಆಪಲ್ ಆಪ್ ಸ್ಟೋರ್ ಮತ್ತು ಆಂಡ್ರಾಯ್ಡ್ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.