EBM News Kannada
Leading News Portal in Kannada

“ಈ ಸಂದೇಶ ನೋಡಿ ತಕ್ಷಣ ಕರೆ ಮಾಡಿ..”; ಹೆಚ್ಚುತ್ತಿರುವ ನಕಲಿ ವಾಟ್ಸ್ ಆ್ಯಪ್ ಉದ್ಯೋಗ ದಂಧೆ ಬಗ್ಗೆ ಇರಲಿ ಎಚ್ಚರ

0



ಅಮೆರಿಕದ ಉದ್ಯೋಗದಾತರು ಎಂದು ಸೋಗು ಹಾಕಿಕೊಂಡು ವಾಟ್ಸ್ ಆ್ಯಪ್ ಬಳಕೆದಾರರನ್ನು ವಂಚಿಸುತ್ತಿರುವ ವಾಟ್ಸ್ ಆ್ಯಪ್ ವಂಚನೆ ಜಾಲ ಹೆಚ್ಚುತ್ತಿದೆ. ಅಮೆರಿಕದ ಸುಳ್ಳು ಫೋನ್ ನಂಬರ್ಗಳನ್ನು ಬಳಸಿಕೊಂಡು ಜನರನ್ನು ವಂಚಿಸುತ್ತಿದ್ದಾರೆ. ಈ ವಂಚಕರು ದೊಡ್ಡ ಕಂಪನಿಗಳ ಬಾಸ್ಗಳು ಅಥವಾ ಅವರ ಸಹೋದ್ಯೋಗಿಗಳು, ಇಲ್ಲವೇ ಹಿರಿಯ ಎಕ್ಸಿಕ್ಯೂಟಿವ್ಗಳು ಎಂದು ಹೇಳಿಕೊಂಡು ವ್ಯವಸ್ಥಿತವಾಗಿ ವಂಚಿಸುತ್ತಿದ್ದಾರೆ.

ಐಎಎನ್ಎಸ್ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಪ್ರಮುಖ ನಗರಗಳ ದೊಡ್ಡ ಮಾಧ್ಯಮ ಸಂಸ್ಥೆಗಳ ಉದ್ಯೋಗಿಗಳಿಗೆ ಇಂಥ ನಕಲಿ ಅಂತರರಾಷ್ಟ್ರೀಯ ಕರೆಗಳು ಬಂದಿವೆ. ದೊಡ್ಡ ಕಂಪನಿಗಳ ಮುಖ್ಯಸ್ಥರು ಎಂದು ಹೇಳಿಕೊಂಡು ಮಾತನಾಡಲು ಆರಂಭಿಸುತ್ತಾರೆ. ನೀವು ಇದನ್ನು ನೋಡಿದ ತಕ್ಷಣ ಕರೆ ಮಾಡಿ ಎಂಬ ಸಂದೇಶಗಳನ್ನೂ ಕಳುಹಿಸುತ್ತಾರೆ. ಇದು ದೊಡ್ಡ ಕಂಪನಿಗಳ ಮುಖ್ಯಸ್ಥರ ಸಂದೇಶಗಳು ಎಂಬ ನಂಬಿಕೆ ಬರುವಂತೆ ವಂಚನ ಜಾಲ ಬೀಸುತ್ತಾರೆ. ಅಮೆರಿಕದ ನಂಬರ್ಗಳಿಂದ ಈ ಕರೆ ಅಥವಾ ಸಂದೇಶ ಬರುತ್ತಿದೆ.

ಇಂಥ ಕರೆಗಳನ್ನು ಸ್ವೀಕರಿಸುವವರು ತಮ್ಮ ಹಣ ಕಳೆದುಕೊಳ್ಳುವ ಅಥವಾ ತಮ್ಮ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವ ಅಪಾಯ ಇರುತ್ತದೆ. ಆಫ್ರಿಕಾ ಹಾಗೂ ಆಗ್ನೇಯ ಏಷ್ಯಾದಿಂದ ಕೂಡಾ ಇಂಥ ಕರೆಗಳು ಬರುತ್ತಿವೆ. ಇದರಿಂದಾಗಿ ವಾಟ್ಸ್ ಆ್ಯಪ್ ಬಳಕೆಯೇ ಅಪಾಯಕಾರಿ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಭಾರತದಲ್ಲಿ ಸುಮಾರು 50 ಕೋಟಿ ಮಂದಿ ವಾಟ್ಸ್ ಆ್ಯಪ್ ಬಳಸುತ್ತಿದ್ದಾರೆ. ವಾಟ್ಸ್ ಆ್ಯಪ್ ಮೂಲಕ ಕಾರ್ಯನಿರ್ವಹಿಸುವ ಇಂಥ ನಕಲಿ ಉದ್ಯೋಗ ವಂಚನೆ ಜಾಲದ ಬಗ್ಗೆ ಎಚ್ಚರ ವಹಿಸಬೇಕಾದ್ದು ಅಗತ್ಯ.

ಕೃಪೆ: indiatoday.in

Leave A Reply

Your email address will not be published.