EBM News Kannada
Leading News Portal in Kannada

ಮಗಳು ಝೀವಾ ನನ್ನನ್ನು ಒಬ್ಬ ವ್ಯಕ್ತಿಯನ್ನಾಗಿ ಬದಲಿಸಿದಳು: ಎಂಎಸ್ ಧೋನಿ

0

ಮುಂಬೈ: ಕ್ರಿಕೆಟ್ ನಲ್ಲೇ ತಮ್ಮ ಹೆಚ್ಚಿನ ಸಮಯವನ್ನು ಕಳೆದಿದ್ದ ಟೀಂ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರು ಮಗಳು ಝೀವಾ ನನ್ನನ್ನು ಒಬ್ಬ ವ್ಯಕ್ತಿಯನ್ನಾಗಿ ಬದಲಿಸಿದಳು ಎಂದು ಹೇಳಿದ್ದಾರೆ.

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿದ್ದು ಹೊರಹೊಮ್ಮಿದ್ದು ಸದ್ಯ ಕುಟುಂಬಸ್ಥರ ಜತೆಗೆ ಕಾಲಕಳೆಯುತ್ತಿರುವ ಧೋನಿ ತಾವು ತಂದೆಯಾದ ಬಳಿಕ ತಮ್ಮ ಜೀವನದಲ್ಲಿ ಆದ ಬದಲಾವಣೆಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ ಝೀವಾ ಹುಟ್ಟಿದ್ದಾಗ ನಾನು ಅಲ್ಲಿ ಇರಲು ಸಾಧ್ಯವಾಗಿರಲಿಲ್ಲ. ಓರ್ವ ಕ್ರಿಕೆಟರ್ ಆಗಿ ನಾನು ಹೆಚ್ಚು ಕಾಲ ಕಳೆದಿದ್ದೇನೆ. ಇದೀಗ ನಾನು ನನ್ನ ಕುಟುಂಬದ ಜೊತೆಗೆ ಹೆಚ್ಚು ಕಾಲ ಕಳೆಯುತ್ತಿದ್ದು ಝೀವಾ ನನಗೆ ತುಂಬಾ ಹತ್ತಿರವಾಗಿದ್ದಾಳೆ ಎಂದು ಹೇಳಿದ್ದಾರೆ.

ಐಪಿಎಲ್ ಸಮಯದಲ್ಲಿ ಝೀವಾ ಹಲವು ಬಾರಿ ನನ್ನ ಜೊತೆ ಮೈದಾನದಲ್ಲಿ ಕಾಲ ಕಳೆದಿದ್ದಳು. ನಿಜಕ್ಕೂ ಆ ಕ್ಷಣಗಳು ನನ್ನ ಜೀವನದಲ್ಲಿ ಅವಿಸ್ಮರಣೀಯ. ಅವಳ ತುಂಟಾಟಗಳನ್ನು ನೋಡುತ್ತಾ ಸಂತೋಷ ಪಡುತ್ತಿದ್ದೆ. ಮಕ್ಕಳಾಟ ನಿಜಕ್ಕೂ ಮನಸ್ಸಿಗೆ ಮುದ ನೀಡುತ್ತದೆ ಎಂದರು.

Leave A Reply

Your email address will not be published.