EBM News Kannada
Leading News Portal in Kannada

ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನಕ್ಕೇರಿದ ಶುಭ್‌ಮನ್ ಗಿಲ್: ಟಾಪ್ 10 ರಲ್ಲಿ ಸ್ಥಾನ ಪಡೆದ ಕುಲ್ದೀಪ್ ಯಾದವ್ – Kannada News | Shubman Gill and Ishan Kishan have moved 2 and 9 spots in ICC ODI Rankings

0

Vinay Bhat |

Updated on: Aug 10, 2023 | 7:52 AM

ICC ODI Rankings: ಬುಧವಾರ ಐಸಿಸಿ ನೂತನ ಬ್ಯಾಟರ್‌ಗಳ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಗಿಲ್-ಕಿಶನ್ ವೃತ್ತಿಜೀವನದ ಉನ್ನತ ರೇಟಿಂಗ್‌ ಹೊಂದಿದರು. ಗಿಲ್ ಎರಡು ಸ್ಥಾನಗಳನ್ನು ಹೆಚ್ಚಿನ ಒಟ್ಟಾರೆಯಾಗಿ ಐದನೇ ಸ್ಥಾನಕ್ಕೆ ಏರಿದರೆ ಪಾಕಿಸ್ತಾನ ಬ್ಯಾಟರ್​ನ ಸಮೀಪ ತಲುಪಿದ್ದಾರೆ.

Aug 10, 2023 | 7:52 AM

ಐಸಿಸಿ ಏಕದಿನ ವಿಶ್ವಕಪ್ 2023 ಆರಂಭಕ್ಕೆ ಕೇವಲ ಎರಡು ತಿಂಗಳುಗಳಿರುವಾಗ, ಕೆಲ ಭಾರತೀಯ ಆಟಗಾರರು ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಗಮನಾರ್ಹ ಜಿಗಿತ ಕಂಡಿದ್ದಾರೆ. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಏಕದಿನ ಸರಣಿಯ ಮುಕ್ತಾಯದ ನಂತರ, ಆರಂಭಿಕರಾದ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಕ್ರಮವಾಗಿ 2 ಮತ್ತು 9 ಸ್ಥಾನಗಳನ್ನು ಹೆಚ್ಚಿಸಿದ್ದಾರೆ.

ಟೀಮ್ ಇಂಡಿಯಾದ ಯುವ ಜೋಡಿ ಶುಭ್​ಮನ್ ಗಿಲ್ ಮತ್ತು ಇಶಾನ್ ಕಿಶನ್ ಅವರು ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ಭಾರತ 2-1 ಅಂತರದಿಂದ ಏಕದಿನ ಸರಣಿ ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಜೋಡಿಯು ಮೂರು ಪಂದ್ಯಗಳಲ್ಲಿ ಒಟ್ಟು 310 ರನ್‌ ಕಲೆಹಾಕಿತ್ತು.

ಬುಧವಾರ ಐಸಿಸಿ ನೂತನ ಬ್ಯಾಟರ್‌ಗಳ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಗಿಲ್-ಕಿಶನ್ ವೃತ್ತಿಜೀವನದ ಉನ್ನತ ರೇಟಿಂಗ್‌ ಹೊಂದಿದರು. ಗಿಲ್ ಎರಡು ಸ್ಥಾನಗಳನ್ನು ಹೆಚ್ಚಿನ ಒಟ್ಟಾರೆಯಾಗಿ ಐದನೇ ಸ್ಥಾನಕ್ಕೆ ಏರಿದರೆ ಪಾಕಿಸ್ತಾನ ಬ್ಯಾಟರ್​ನ ಸಮೀಪ ತಲುಪಿದ್ದಾರೆ.

ಐಸಿಸಿ ಏಕದಿನ ಬ್ಯಾಟರ್ ಶ್ರೇಯಾಂಕದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ (886) ಮೊದಲ ಸ್ಥಾನದಲ್ಲಿದ್ದರೆ, ಆಫ್ರಿಕಾ ವಂಡರ್ ಡಸ್ಸೆನ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ 755 ಅಂಕ ಪಡೆದು ಫಖರ್ ಜಮಾನ್, ನಾಲ್ಕನೇ ಸ್ಥಾನದಲ್ಲಿ ಇಮಾಮ್ ಉಲ್ ಹಖ್ (745) ಮತ್ತು ಐದನೇ ಸ್ಥಾನದಲ್ಲಿ 743 ರೇಟಿಂಗ್ ಪಾಯಿಂಟ್‌ ಪಡೆದು ಶುಭ್​ಮನ್ ಗಿಲ್ ಇದ್ದಾರೆ.

ಕಿಶನ್ ಕೂಡ ಒಂಬತ್ತು ಸ್ಥಾನಗಳ ಜಿಗಿತದ ನಂತರ ಒಟ್ಟಾರೆಯಾಗಿ 36 ನೇ ಸ್ಥಾನಕ್ಕೆ ಏರಿದ್ದಾರೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ವೆಸ್ಟ್ ಇಂಡೀಸ್ ವಿರುದ್ಧ ಆಡಿದ ನಂತರ 10 ಸ್ಥಾನ ಮೇಲೇರಿ 71 ಶ್ರೇಯಾಂಕದಲ್ಲಿದ್ದಾರೆ.

ಟೀಮ್ ಇಂಡಿಯಾದ ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ಮತ್ತು ಕಡಿಮೆ ರೇಟಿಂಗ್ ಹೊಂದಿದ್ದ ಶಾರ್ದೂಲ್ ಠಾಕೂರ್ ಅವರು ಏಕದಿನ ಬೌಲರ್‌ಗಳ ಶ್ರೇಯಾಂಕದಲ್ಲಿ ಮೇಲೇರಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಏಳು ವಿಕೆಟ್‌ಗಳನ್ನು ಕಬಳಿಸಿದ ನಂತರ ಕುಲ್ದೀಪ್ ನಾಲ್ಕು ಸ್ಥಾನಗಳ ಮೇಲೇರಿ ಟಾಪ್ 10 ರೊಳಗೆ 10 ನೇ ಸ್ಥಾನದಲ್ಲಿದ್ದಾರೆ.

ಶಾರ್ದೂಲ್​ ಠಾಕೂರ್ ಸರಣಿಯಲ್ಲಿ ಸಾಮಾನ್ಯ ಪ್ರದರ್ಶನ ನೀಡಿದ್ದು ಮೂರು ಸ್ಥಾನಗಳನ್ನು ಸುಧಾರಿಸಿ 30ನೇ ಸ್ಥಾನಕ್ಕೆ ಬಂದಿದ್ದಾರೆ. ಉಳಿದಂತೆ, ಸಿರಾಜ್​ ನಾಲ್ಕನೇ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ. ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಕುಲ್ದೀಪ್ ಯಾದವ್ 36 ಸ್ಥಾನದ ಏರಿಕೆ ಕಂಡು 51ನೇ ರ್‍ಯಾಂಕ್​ ಹೊಂದಿದ್ದಾರೆ.

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ನಾಲ್ಕನೇ ಟಿ20 ಪಂದ್ಯ ಆಗಸ್ಟ್ 12 ಶನಿವಾರದಂದು ನಡೆಯಲಿದೆ. ಇದನ್ನು ಫ್ಲೋರಿಡಾದ ಸೆಂಟ್ರಲ್ ಬ್ರೊವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಭಾರತ ಸರಣಿಯಲ್ಲಿ 1-2 ಅಂತರದ ಹಿನ್ನಡೆಯಲ್ಲಿರುವ ಕಾರಣ ಮುಂದಿನ ಪಂದ್ಯ ರೋಚಕತೆ ಸೃಷ್ಟಿಸಿದೆ.

ತಾಜಾ ಸುದ್ದಿ

Leave A Reply

Your email address will not be published.