EBM News Kannada
Leading News Portal in Kannada

ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿ, 500 ಕೋಟಿ ರೂ. ನೀಡಿದ ರಿಲಯನ್ಸ್​ ಪರಿವಾರಕ್ಕೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ

0

ನವದೆಹಲಿ: ಮಾರಕ ಮಹಾಮಾರಿ ಕೊರೋನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸುವುದರ ಜೊತೆಗೆ ಭಾರತದಲ್ಲೂ ಭೀತಿ ಹುಟ್ಟುಹಾಕಿದೆ. ಕೊರೋನಾ ಸೋಂಕು ನಿಯಂತ್ರಿಸುವ ಸಲುವಾಗಿ ಇಡೀ ದೇಶವನ್ನು 21 ದಿನಗಳ ಕಾಲ ಲಾಕ್​ಡೌನ್ ಮಾಡಲಾಗಿದೆ. ಮಾರಕ ಸೋಂಕು ಮಾನವನ ಆರೋಗ್ಯದ ಜೊತೆಗೆ ದೇಶದ ಅರ್ಥ ವ್ಯವಸ್ಥೆ ಮೇಲೂ ಗಂಭೀರ ಪರಿಣಾಮ ಬೀರಿದೆ. ಈ ನಿಟ್ಟಿನಲ್ಲಿ ಹಲವು ಉದ್ಯಮಿಗಳು, ಸಿನಿಮಾ ನಟರು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ನೆನ್ನೆ ಪ್ರಧಾನಮಂತ್ರಿ ಕೊರೋನಾ ಪರಿಹಾರ ನಿಧಿಗೆ 500 ಕೋಟಿ ಧನಸಹಾಯ ಘೋಷಿಸಿದ್ದ ರಿಲಯನ್ಸ್​ ಇಂಡಸ್ಟ್ರೀಸ್ ಲಿಮಿಟೆಡ್​ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಕೃತಜ್ಞತೆ ತಿಳಿಸಿದ್ದಾರೆ.

ಈ ಸಂಬಂಧ ಇಂದು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, “ಕೋವಿಡ್-19 ವಿರುದ್ಧ ಹೋರಾಟದಲ್ಲಿ ಇಡೀ ರಿಲಾಯನ್ಸ್​ ಪರಿವಾರ ಪರಿಣಾಮಕಾರಿಯಾಗಿ ಕೊಡುಗೆ ಸಲ್ಲಿಸುತ್ತಿದೆ. ಅದು ಆರೋಗ್ಯ ಸೇವೆಯಲ್ಲಾಗಿರಬಹುದು ಅಥವಾ ಜನರಿಗೆ ಸಹಾಯ ಮಾಡುವುದರಲ್ಲಿ ಸಕ್ರಿಯವಾಗಿದೆ. ಪ್ರಧಾನಮಂತ್ರಿ ಕೊರೋನಾ ನಿಧಿಗೆ ಕೊಡುಗೆ ನೀಡಿದ ಮತ್ತು ಕೊರೋನಾವೈರಸ್ ವಿರುದ್ಧ ಹೋರಾಟದಲ್ಲಿ ಕೈ ಜೋಡಿಸಿರುವ ರಿಲಯನ್ಸ್​ ಇಂಡಸ್ಟ್ರೀಸ್ ಲಿಮಿಟೆಡ್​ ಮುಖ್ಯಸ್ಥರಾದ ಮುಖೇಶ್ ಮತ್ತು ನೀತಾ ಅಂಬಾನಿ ಅವರಿಗೆ ಧನ್ಯವಾದಗಳು,” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

Leave A Reply

Your email address will not be published.