1993 ಮುಂಬೈ ಸರಣಿ ಸ್ಫೋಟ ಪ್ರಕರಣ: ಆರೋಪಿ ಅಹ್ಮದ್ ಮೊಹಮ್ಮದ್ ಲಂಬು ಬಂಧನ
ಧರಿಯಾ (ಗುಜರಾತ್): 1993 ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಅಹ್ಮದ್ ಮೊಹಮ್ಮದ್ ಲಂಬು ಎಂಬಾತನನ್ನು ಗುಜರಾತ್ ಎಟಿಎಸ್ ಅಧಿಕಾರಿಗಳು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
ಗುಜರಾತ್ ರಾಜ್ಯದ ಧರಿಯಾ ಎಂಬ ಗ್ರಾಮದಲ್ಲಿ ಅಹ್ಮದ್ ಮೊಹಮ್ಮದ್ ಲಂಬುನನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆಂದು ವರದಿಗಳು ತಿಳಿಸಿವೆ.
1993ರ ಮಾರ್ಚ್ 12ರಂದು ಮುಂಬೈನಲ್ಲಿ ನಡೆದ ಸರಣಿ ಸ್ಫೋಟದಲ್ಲಿ 257 ಮಂದಿ ಸಾವನ್ನಪ್ಪಿ, 700 ಮಂದಿ ಗಾಯಗೊಂಡಿದ್ದರು. 27 ಕೋಟಿಗೂ ಹೆಚ್ಚು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾಗಿತ್ತು. ಪ್ರಕರಣದಲ್ಲಿ ಅಹ್ಮದ್ ಮೊಹಮ್ಮದ್ ಲಂಬು ಆರೋಪಿಯಾಗಿದ್ದಾನೆ.