EBM News Kannada
Leading News Portal in Kannada

FACT CHEK | ಅದಾನಿ ಬಂದರಿನಲ್ಲಿ ವಿದೇಶಕ್ಕೆ ಸಾಗಿಸಲು ಸಾವಿರಾರು ಗೋವುಗಳು ಎಂಬ ವೀಡಿಯೋ ವೈರಲ್ ; ವಾಸ್ತವ ಏನು?

0


ಹೊಸದಿಲ್ಲಿ : ಗುಜರಾತ್‌ನ ಅದಾನಿ ಬಂದರಿನಲ್ಲಿ ವಿದೇಶಕ್ಕೆ ಸಾಗಿಸಲು ಸಾವಿರಾರು ಗೋವುಗಳು ಎಂಬ ವೀಡಿಯೊವೊಂದನ್ನು ಹಂಚಿಕೊಂಡು, ಅರಬ್ ದೇಶಗಳಿಗೆ ರಫ್ತಾಗಲಿರುವ ಗೋವುಗಳು ಎಂದು ವ್ಯಾಪಕವಾಗಿ ಶೀರ್ಷಿಕೆ ನೀಡಲಾಗಿದೆ. ವಾಸ್ತವವಾಗಿ ವೀಡಿಯೊ ತಪ್ಪುದಾರಿಗೆಳೆಯುತ್ತಿದೆ ಎಂದು groundreport.in ವರದಿ ಮಾಡಿದೆ.

ಗುಜರಾತ್‌ನ ಅದಾನಿ ಬಂದರಿನ ಮೂಲಕ ಸಾವಿರಾರು ಗೋವುಗಳನ್ನು ಮಾಂಸಕ್ಕಾಗಿ ಅರಬ್ ದೇಶಗಳಿಗೆ ಸಾಗಿಸಲಾಗುತ್ತಿದೆ ಎನ್ನುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೊವನ್ನು ಆರಂಭದಲ್ಲಿ ಸಂದೀಪ್ ವರ್ಮಾ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ, ನಂತರ ಇದನ್ನು ಸೂರ್ಯ ರಾಜ್ ನಾಗವಂಶಿ ಸೇರಿದಂತೆ ಅನೇಕ ಬಳಕೆದಾರರು ಮರುಹಂಚಿಕೊಂಡಿದ್ದಾರೆ.

ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 1 ಮಿಲಿಯನ್ ಜನರು ಈ ವೀಡಿಯೊ ವೀಕ್ಷಣೆ ಮಾಡಿದ್ದಾರೆ. 10,000 ಕ್ಕೂ ಜನರು ಅದನ್ನು ಹಂಚಿಕೆಕೊಂಡಿದ್ದಾರೆ. ವಾಟ್ಸ್ ಆ್ಯಪ್ ನಲ್ಲೂ ಈ ವೀಡಿಯೊ ಸಾಕಷ್ಟು ಹರಿದಾಡಿದೆ.

ವಾಸ್ತವವೇನು?

ಗೂಗಲ್ ಮೂಲಕ ವೀಡಿಯೊ ಮೂಲವನ್ನು ಪತ್ತೆಹಚ್ಚಿದಾಗ, ಸುಮಾರು ಐದು ದಿನಗಳ ಹಿಂದೆ ಟಿಕ್‌ಟಾಕ್‌ನಲ್ಲಿ ಹಂಚಿಕೊಂಡ ಈಜಿಪ್ಟ್ ನ ವೀಡಿಯೊ ತುಣುಕು ಇದಾಗಿದೆ ಎಂದು ತಿಳಿದುಬಂದಿದೆ. ಟಿಕ್‌ಟಾಕ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡ ಬಳಕೆದಾರರ Instagram ಮತ್ತು Facebook ಖಾತೆಗಳನ್ನು ನೋಡಿದಾಗ ಇದೇ ರೀತಿಯ ಹಲವಾರು ವೀಡಿಯೊಗಳನ್ನು ಪೋಸ್ಟ್ ಮಾಡಿರುವುದನ್ನು ಗಮನಿಸಬಹುದು.

ಈ ಕುರಿತು ಇಂಟರ್ ನೆಟ್ ನಲ್ಲಿ ಜಾಲಾಡಿದಾಗ, “سوق اللحوم” (ಮಾಂಸದ ಮಾರುಕಟ್ಟೆ) ಸೇರಿದಂತೆ ಹಲವಾರು ಈಜಿಪ್ಟಿನ ಫೇಸ್‌ಬುಕ್ ಪುಟಗಳು ಜಾನುವಾರುಗಳ ಸಾಗಣೆಯನ್ನು ಚಿತ್ರಿಸುವ ಇದೇ ರೀತಿಯ ವೀಡಿಯೊಗಳನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ಈ ಪುಟದಲ್ಲಿನ ವೀಡಿಯೊದ ಶೀರ್ಷಿಕೆಯು ಇಂಗ್ಲಿಷ್‌ನಲ್ಲಿ “ಈದ್ ಅಲ್ ಅದಾಗೆ ತಯಾರಿ” ಎಂದು ಹೇಳಿದೆ. ದೃಶ್ಯಾವಳಿಯು ಸಾಮಾನ್ಯವಾಗಿ ತ್ಯಾಗದ ಹಬ್ಬ ಎಂದು ಕರೆಯಲ್ಪಡುವ ಬಕ್ರೀದ್ ಹಬ್ಬಕ್ಕೆ ಸಂಬಂಧಿಸಿದೆ ಎಂದು ಸೂಚಿಸುತ್ತದೆ. ಈ ವೀಡಿಯೊ ಈಜಿಪ್ಟ್‌ನಲ್ಲಿನ ಸಾಂಸ್ಕೃತಿಕ ಆಚರಣೆಗಳ ಸಂದರ್ಭದಲ್ಲಿ ಅವುಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಈಜಿಪ್ಟ್ ನಲ್ಲಿ ಮಾಂಸದ ಸಗಟು ವ್ಯಾಪಾರಿ ಎಂದು ಗುರುತಿಸಲಾದ ಬಳಕೆದಾರರು ಮಾಂಸದ ಉತ್ಪನ್ನಗಳ ಚಿತ್ರಗಳನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಾರೆ. ಆ ಮೂಲಕ ಈಜಿಪ್ಟ್‌ನಲ್ಲಿ ಮಾಂಸದ ಉದ್ಯಮದ ಮಾರುಕಟ್ಟೆಯ ಜೊತೆ ನಿಕಟ ಸಂಪರ್ಕವಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಾರೆ.

ಫ್ಯಾಕ್ಟ್ ಚೆಕ್ ಮಾಡಿದ ನಂತರ, ವೀಡಿಯೊದ ಮೂಲವು ಈಜಿಪ್ಟ್‌ನ ದಮಿಯೆಟ್ಟಾ ಮೂಲದ ಮಾಂಸದ ಸಗಟು ವ್ಯಾಪಾರಿ ಹಮೇದ್ ಎಲ್ಹಗರಿ ಅವರದ್ದು ಎಂದು ತಿಳಿದುಬಂದಿದೆ. ಎಲ್ಹಗರಿ ಅವರು ಏಪ್ರಿಲ್ 19, 2024 ರಂದು ಈಜಿಪ್ಟ್‌ನ ರಾಸ್ ಎಲ್-ಬಾರ್, ದುಮ್ಯತ್, ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅವರ ಪ್ರೊಫೈಲ್‌ನಲ್ಲಿ ಇದೇ ರೀತಿಯ ವೀಡಿಯೊಗಳ ಸರಣಿಗಳಿವೆ. ಇಂತಹ ಇನ್ನೊಂದು ವೀಡಿಯೊವನ್ನು ಏಪ್ರಿಲ್ 22 ರಂದು ಟಿಕ್‌ಟಾಕ್‌ನಲ್ಲೂ ಅವರು ಪೋಸ್ಟ್ ಮಾಡಿದ್ದಾರೆ

ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಹಮೇದ್ ಅವರು ವೀಡಿಯೊವನ್ನು ಹಂಚಿಕೊಂಡು ಅರೇಬಿಕ್‌ನಲ್ಲಿ, “ಸರಕುಗಳ ಜೊತೆ ಮಲಗಿ ಅವುಗಳ ವಿಲೇವಾರಿಗೆ ಕಾಯುವವನು. ಇವು ಮೊದಲ 25000 ತಲೆಗಳು” ಎಂದು ಬರೆದಿದ್ದಾರೆ. ಈ ವೀಡಿಯೊ ಜಾನುವಾರು ಸಾಗಣೆಗೆ ಸಂಬಂಧಿಸಿದ್ದಾಗಿದೆ. ಎಲ್ಲೂ ವೀಡಿಯೊದಲ್ಲಿ ಮಾಂಸಕ್ಕಾಗಿ ಅರಬ್ ದೇಶಗಳಿಗೆ ರಫ್ತು ಮಾಡುವ ವಿಚಾರವನ್ನು ಅವರು ಉಲ್ಲೇಖಿಸಿಲ್ಲ.

ವೀಡಿಯೊ ದೃಶ್ಯಗಳನ್ನು ಸರಿಯಾಗಿ ಗಮನಿದರೆ, ಇದು ಭಾರತ ವೀಡಿಯೊದಂತೆ ಎಲ್ಲೂ ಕಾಣುವುದಿಲ್ಲ. ವೀಡಿಯೊದಲ್ಲಿ ಕಂಡುಬರುವ ಟ್ರಕ್ ಭಾರತೀಯ ಸಾರಿಗೆ ವಾಹನಗಳನ್ನು ಹೋಲುವುದಿಲ್ಲ. ಬದಲಾಗಿ, ಇದು ಈಜಿಪ್ಟ್‌ನಲ್ಲಿ ಸಾಮಾನ್ಯವಾಗಿ ಬಳಸುವಂತಹ ವಾಹನದಂತಿದೆ.

ಫ್ಯಾಕ್ಟ್ ಚೆಕ್ ಪ್ರಕ್ರಿಯೆಯ ಮೂಲಕ ಸಂಗ್ರಹಿಸಿದ ಪುರಾವೆಗಳ ಆಧಾರದ ಮೇಲೆ, ವೀಡಿಯೋ ಗುಜರಾತಿನ ಅದಾನಿ ಬಂದರಿನಿಂದ ಅರಬ್ ದೇಶಗಳಿಗೆ ಮಾಂಸಕ್ಕಾಗಿ ಗೋವುಗಳನ್ನು ರಫ್ತು ಮಾಡುತ್ತಿರುವುದನ್ನು ಚಿತ್ರಿಸಿಲ್ಲ. ಬದಲಾಗಿ, ಇದು ಈಜಿಪ್ಟ್‌ನಲ್ಲಿ ಜಾನುವಾರುಗಳನ್ನು ಸಾಗಿಸುತ್ತಿರುವುದನ್ನು ತೋರಿಸುತ್ತದೆ.

Leave A Reply

Your email address will not be published.