EBM News Kannada
Leading News Portal in Kannada

ಜಮ್ಮು ಮತ್ತು ಕಾಶ್ಮೀರ: ಕೋಕರ್​ನಾಗ್​ನಲ್ಲಿ ಗ್ರೆನೇಡ್ ದಾಳಿ, ಓರ್ವ ಯೋಧ, ಇಬ್ಬರು ನಾಗರಿಕರಿಗೆ ಗಾಯ – Kannada News | Jammu and Kashmir Two civilians, one soldier injured in Anantnag grenade attack

0


ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರ್‌ನಾಗ್‌ನಲ್ಲಿ ಗ್ರೆನೇಡ್ ದಾಳಿಯ ಸಂಭವಿಸಿದೆ. ಮೂಲಗಳ ಪ್ರಕಾರ ಗ್ರೆನೇಡ್ ಸ್ಫೋಟದಲ್ಲಿ ಓರ್ವ ಯೋಧ, ಇಬ್ಬರು ನಾಗರಿಕರು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರ್‌ನಾಗ್‌ನಲ್ಲಿ ಗ್ರೆನೇಡ್ ದಾಳಿಯ ಸಂಭವಿಸಿದೆ. ಮೂಲಗಳ ಪ್ರಕಾರ ಗ್ರೆನೇಡ್ ಸ್ಫೋಟದಲ್ಲಿ ಓರ್ವ ಯೋಧ, ಇಬ್ಬರು ನಾಗರಿಕರು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ದಾಳಿ ನಡೆಸಿದ ನಂತರ ಉಗ್ರರು ಸ್ಥಳದಿಂದ ಪರಾರಿಯಾಗಿದ್ದಾರೆ.
ಗಾಡೋಳೆ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ತಕ್ಷಣ ಭದ್ರತಾ ಪಡೆಗಳ ಜಂಟಿ ತಂಡ ಹುಡುಕಾಟ ಆರಂಭಿಸಿತು.

ಅಡಗಿಕೊಂಡಿದ್ದ ಉಗ್ರರು ಅವರ ಮೇಲೆ ಗ್ರೆನೇಡ್ ಎಸೆದರು. ಈ ವೇಳೆ ಇಬ್ಬರು ನಾಗರಿಕರು ಹಾಗೂ ಓರ್ವ ಸೇನಾ ಯೋಧನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಘೋಷಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಮೂವರು ಸೇನಾ ಯೋಧರು ಮತ್ತು ಐವರು ಉಗ್ರರು ಹತರಾಗಿದ್ದಾರೆ, ಈ ಪ್ರದೇಶದಲ್ಲಿ ಉಗ್ರರ ವಿರುದ್ಧ ಭದ್ರತಾ ಪಡೆಗಳು ಬಹು ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ.

ಮತ್ತಷ್ಟು ಓದಿ:Khalistan Terrorist: ಲಾಹೋರ್​ನಲ್ಲಿ ಖಲಿಸ್ತಾನಿ ಉಗ್ರ ಪರಮ್​ಜಿತ್ ಸಿಂಗ್​ನನ್ನು ಗುಂಡಿಕ್ಕಿ ಹತ್ಯೆ

ಈ ವರ್ಷ, ಇಬ್ಬರು ಪ್ಯಾರಾಟ್ರೂಪರ್‌ಗಳು ಸೇರಿದಂತೆ 14 ಸೈನಿಕರು ಜಮ್ಮು ಕಾಶ್ಮೀರದಲ್ಲಿ ಹತ್ಯೆಗೀಡಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಜಮ್ಮು ಪ್ರದೇಶದ ಗಡಿ ಪೂಂಚ್-ರಜೌರಿ ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿ

Leave A Reply

Your email address will not be published.