EBM News Kannada
Leading News Portal in Kannada

ಉತ್ತರ ಪ್ರದೇಶದ ಶ್ರಾವಸ್ತಿಯಲ್ಲಿ ಪ್ರಾಣಿಗಳನ್ನು ರಕ್ಷಿಸಲು ಹೋಗಿ, ಕಂದಕಕ್ಕೆ ಬಿದ್ದ ಕಾರು, 7 ಮಂದಿ ದುರ್ಮರಣ – Kannada News | Uttar Pradesh Accident: Car collided with tree in shravasti 7 people died and many injured

0


ಉತ್ತರ ಪ್ರದೇಶದ ಶ್ರಾಸವ್ತಿಯಲ್ಲಿ ಕಾರೊಂದು ಪ್ರಾಣಿಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಆಯತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದ್ದು 7 ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.

ಉತ್ತರ ಪ್ರದೇಶದ ಶ್ರಾಸವ್ತಿಯಲ್ಲಿ ಕಾರೊಂದು ಪ್ರಾಣಿಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಆಯತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದ್ದು 7 ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಉತ್ತರ ಪ್ರದೇಶದ ಶ್ರಾವಸ್ತಿಯಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ, ಬಲರಾಮ್​ಪುರದಿಂದ ಬಹ್ರೈಚ್​ಗೆ ಹೋಗುತ್ತಿದ್ದ ಬೊಲೆರೊ ಕಾರು ಬೌದ್ಧ ಸರ್ಕ್ಯೂಟ್​ನ ಇಕೌನಾ ಪೊಲೀಸ್ ಠಾಣೆಯ ಭಗವಾನ್​ಪುರ ಗ್ರಾಮದ ಘಟನೆ ನಡೆದಿದೆ.

ನಂತರ ಪಲ್ಟಿಯಾಗಿ ಕಂದಕಕ್ಕೆ ಹೋಗಿ ಬಿದ್ದಿದೆ, ಅಲ್ಲೇ ಇದ್ದ ಹಳ್ಳದಲ್ಲಿ ಮುಳುಗಿ 7 ಮಂದಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ನೇಪಾಲ್​ಗಂಜ್​ನ ತ್ರಿಭುವನ್ ಚೌಕದ ನಿವಾಸಿಗಳಾಗಿದ್ದರು. ನೇಪಾಲ್​ಗಂಜ್​ನ ತ್ರಿಭುವನ್ ಚೌಕದ ನಿವಾಸಿ ಸಂತೋಷ್ ಕುಮಾರ್ ಗುಪ್ತಾ ಅವರ ಪುತ್ರ ನೀಲಾಂಶ್ ಹಾಗೂ ವೈಭವ್, ಪತ್ನಿ ನಿತಿಯೊಂದಿಗೆ ನೇಪಾಲ್​ಗಂಜ್​ನಲ್ಲಿರುವ ಅತ್ತೆಯ ಮನೆಗೆ ಹೋಗಿದ್ದರು.

ಅಪಘಾತದಲ್ಲಿ ಇಬ್ಬರು ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಒಟ್ಟು 5 ಜನರು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಟ್ರಾಮಾ ಸೆಂಟರ್‌ಗೆ ಕಳುಹಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

ಮತ್ತಷ್ಟು ಓದಿ: ಮಂಡ್ಯ: ಎರಡು ಕಾರುಗಳ ನಡುವೆ ಭೀಕರ ಅಪಘಾತ: ನಾಲ್ವರ ಸಾವು

ಒಳಗೆ ಕುಳಿತಿದ್ದವರೂ ಬಹಳ ಹೊತ್ತಿನವರೆಗೆ ಕಾರಿನಲ್ಲೇ ಸಿಲುಕಿಕೊಂಡಿದ್ದರು. ಕಾರನ್ನು ಕತ್ತರಿಸಿ ಹಲವು ಶವಗಳನ್ನು ಹೊರ ತೆಗೆಯಲಾಗಿದೆ.
ಮತ್ತೊಂದೆಡೆ, ಯುಪಿಯ ಫರೂಕಾಬಾದ್‌ನಿಂದ ದೆಹಲಿಗೆ ಹೋಗುತ್ತಿದ್ದ ಡಬಲ್ ಡೆಕ್ಕರ್ ಖಾಸಗಿ ಬಸ್ ನವಾಬ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಲ್ಟಿಯಾಗಿದೆ. ಬಸ್ಸಿನಲ್ಲಿ ಕನಿಷ್ಠ 50 ಪ್ರಯಾಣಿಕರಿದ್ದರು.

ಅಪಘಾತದಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿರುವ ಸುದ್ದಿಯೂ ಇದೆ. ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ರವಾನಿಸಿದ್ದಾರೆ. ಫರೂಕಾಬಾದ್‌ನಿಂದ ದೆಹಲಿಗೆ ಚಲಿಸುವ ಅಭಯ್ ಟ್ರಾವೆಲ್ಸ್‌ಗೆ ಸೇರಿದ ಬಸ್ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿ

Leave A Reply

Your email address will not be published.