EBM News Kannada
Leading News Portal in Kannada

ಚೀನಾದಲ್ಲಿ ಹೊಸದಾಗಿ ಪತ್ತೆಯಾದ ತಲೆಬುರುಡೆ ಕಂಡು ಗೊಂದಲಕ್ಕೊಳಗಾಗಿರುವ ವಿಜ್ಞಾನಿಗಳು; ಇದು ಮಾನವರ ಮತ್ತೊಂದು ವಂಶವೇ? – Kannada News | Ancient Skull Discovery in China Challenges Human Lineage Theories

0


ಚೀನಾದಲ್ಲಿ ಪತ್ತೆಯಾದ ತಲೆಬುರುಡೆಯ ಮುಖವು ನಮ್ಮಂತೆಯೇ ಕಾಣುತ್ತದೆ, ಆದರೆ ಅಂಗಗಳು ಮತ್ತು ದವಡೆಯಂತಹ ಇತರ ಭಾಗಗಳು ಹೆಚ್ಚು ಪ್ರಾಚೀನವಾಗಿವೆ. ಇದರ ಗಲ್ಲ ಡೆನಿಸೋವನ್‌ನಂತೆಯೇ ತೋರುತ್ತದೆ.

ಚೀನಾದಲ್ಲಿ ಹೊಸದಾಗಿ ಪತ್ತೆಯಾದ ತಲೆಬುರುಡೆ ಕಂಡು ಗೊಂದಲಕ್ಕೊಳಗಾಗಿರುವ ವಿಜ್ಞಾನಿಗಳು; ಇದು ಮಾನವರ ಮತ್ತೊಂದು ವಂಶವೇ?

ಚೀನಾದಲ್ಲಿ ಪತ್ತೆಯಾದ ತಲೆಬುರುಡೆ

ಯಾವುದೇ ತಿಳಿದಿರುವ ಮಾನವ ವಂಶವೃಕ್ಷಕ್ಕೆ (Human ancestry) ಹೊಂದಿಕೆಯಾಗದ ಪ್ರಾಚೀನ ತಲೆಬುರುಡೆ ಚೀನಾದಲ್ಲಿ (China) ಪತ್ತೆಯಾಗಿದ್ದು ವಿಜ್ಞಾನಿಗಳು ಗೊಂದಲಕ್ಕೊಳಗಾಗಿದ್ದಾರೆ. ಸುಮಾರು 300,000 ವರ್ಷಗಳ ಹಿಂದಿನ ಈ ತಲೆಬುರುಡೆಯು ವಿವಿಧ ಗುಂಪುಗಳ ವೈಶಿಷ್ಟ್ಯಗಳ ಮಿಶ್ರಣವನ್ನು ಹೊಂದಿದೆ, ಇದು ಏಷ್ಯಾದಲ್ಲಿ ಮೂರು ವಂಶಾವಳಿಗಳ ಸಹಬಾಳ್ವೆಯನ್ನು ಸೂಚಿಸುತ್ತದೆ: ಹೆಚ್. ಎರೆಕ್ಟಸ್, ಡೆನಿಸೋವನ್ ಮತ್ತು ಆಧುನಿಕ ಮಾನವ. ಆಶ್ಚರ್ಯಕರ ಸಂಗತಿಯೆಂದರೆ, ಇದು ನಿಯಾಂಡರ್ತಲ್​ಗಳು, ಡೆನಿಸೋವನ್​ಗಳು ಅಥವಾ ಆಧುನಿಕ ಮಾನವರಿಗೆ ಹೊಂದಿಕೆಯಾಗುವುದಿಲ್ಲ ಆದರೆ ಅವರೆಲ್ಲದರೊಂದಿಗೆ ಗುಣಲಕ್ಷಣಗಳನ್ನು ಹಂಚಿಕೊಳ್ಳುತ್ತದೆ.

ಇದು ಮಾನವ ಇತಿಹಾಸದ ಬಗ್ಗೆ ನಮಗೆ ತಿಳಿದಿರುವುವ ವೈಜ್ಞಾನಿಕ ಮಾಹಿತಿ ಸರಿಯೇ ಎಂಬುದನ್ನು ಪ್ರಶ್ನಿಸುತ್ತದೆ. 2019 ರಲ್ಲಿ ಪೂರ್ವ ಚೀನಾದ ಹುವಾಲಾಂಗ್‌ಡಾಂಗ್‌ನಲ್ಲಿ ದವಡೆ ಮತ್ತು ಕಾಲಿನ ಮೂಳೆಗಳು ವಿಜ್ಞಾನಿಗಳಿಗೆ ಸಿಕ್ಕಿತ್ತು, ಇದು ಸುಮಾರು 12-13 ವರ್ಷ ವಯಸ್ಸಿನ ಮಗುವಿನ ಮೂಳೆಗಳು ಎಂಬುದು ತಿಳಿದುಬಂದಿದೆ, ಇದರ ವೈಶಿಷ್ಟ್ಯಗಳು ಮಾನವ ಕುಟುಂಬ ವೃಕ್ಷದಲ್ಲಿ ಹೊಸ ಶಾಖೆಯನ್ನು ಸೂಚಿಸುತ್ತವೆ.

ಚೀನಾದಲ್ಲಿ ಪತ್ತೆಯಾದ ತಲೆಬುರುಡೆಯ ಮುಖವು ನಮ್ಮಂತೆಯೇ ಕಾಣುತ್ತದೆ, ಆದರೆ ಅಂಗಗಳು ಮತ್ತು ದವಡೆಯಂತಹ ಇತರ ಭಾಗಗಳು ಹೆಚ್ಚು ಪ್ರಾಚೀನವಾಗಿವೆ. ಇದರ ಗಲ್ಲ ಡೆನಿಸೋವನ್‌ನಂತೆಯೇ ತೋರುತ್ತದೆ.

ಈ ಆವಿಷ್ಕಾರವು ವಿಷಯಗಳನ್ನು ಸಂಕೀರ್ಣಗೊಳಿಸುತ್ತದೆ. ಏಷ್ಯಾದಲ್ಲಿ ಈ ವಂಶಗಳು ಪರಸ್ಪರ ಪ್ರಭಾವ ಬೀರಿರಬಹುದು ಎಂದು ಇದು ಸುಳಿವು ನೀಡುತ್ತದೆ. ಸದ್ಯಕ್ಕೆ, ಇದನ್ನು HLD 6 ಎಂದು ಕರೆಯಲಾಗಿದೆ. ಈ ನಿಗೂಢ ಸಂಶೋಧನೆಯು ಮಾನವ ಇತಿಹಾಸವನ್ನು ಪುನಃ ರಚಿಸಬಹುದು, ಆಧುನಿಕ ಮಾನವರು ಮತ್ತು ಪ್ರಾಚೀನ ಮಾನವರ ನಡುವೆ ಹೊಸ ರೀತಿಯಲ್ಲಿ ಸಂಪರ್ಕವನ್ನು ನೀಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ತಾಜಾ ಸುದ್ದಿ

Leave A Reply

Your email address will not be published.