EBM News Kannada
Leading News Portal in Kannada

ಕೊರೋನಾ ಚಿಕಿತ್ಸೆಗೆ ಈ ಔಷಧವೇ ಸದ್ಯಕ್ಕೆ ಬೆಸ್ಟ್ ಎನ್ನುತ್ತಿದೆ ವಿಶ್ವ ಆರೋಗ್ಯ ಸಂಸ್ಥೆ

0

ನವದೆಹಲಿ: ಕೊರೋನಾ ವೈರಸ್ ಸೋಂಕು ಹರಡದಂತೆ ವಿಶ್ವಾದ್ಯಂತ ದೊಡ್ಡ ಸರ್ಕಸ್ ಮಾಡಲಾಗುತ್ತಿದೆ. ಔಷಧ ಕಂಡು ಹಿಡಿಯಲು ವಿಶ್ವದ ಅನೇಕ ಸಂಸ್ಥೆಗಳು ಅವಿರತವಾಗಿ ಸಂಶೋಧನೆಗಳಲ್ಲಿ ತೊಡಗಿವೆ. ಸದ್ಯಕ್ಕೆ ಕೆಲ ಔಷಧಗಳ ಕಾಂಬಿನೇಶನ್​ಗಳನ್ನು ಪ್ರಯೋಗಾತ್ಮಕವಾಗಿ ಕೊರೋನಾ ಸೊಂಕಿತರಿಗೆ ನೀಡಲಾಗುತ್ತಿದೆ. ಕೆಲವು ಯಶಸ್ವಿಯಾದರೆ, ಮತ್ತೆ ಕೆಲವು ವಿಫಲವಾಗುತ್ತಿವೆ. ಭಾರತದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಬಳಸುವಂತೆ ಸೂಚಿಸಲಾಗಿದೆ. ಕೆಲ ರಾಷ್ಟ್ರಗಳಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿತ್ರೋಮೈಸಿನ್ ಈ ಎರಡೂ ಔಷಧಗಳನ್ನ ಒಟ್ಟಿಗೆ ನೀಡಲಾಗುತ್ತಿದೆ. ಇದೆ ವೇಳೆ, ವಿಶ್ವ ಆರೋಗ್ಯ ಸಂಸ್ಥೆಯ ಆಯೋಗವೊಂದು ಕೊರೋನಾಗೆ ಮದ್ದಾಗಿ ಸದ್ಯಕ್ಕೆ ಇದ್ದುದರಲ್ಲಿ ರೆಮ್​ಡೆಸಿವಿರ್ (Remdesivir) ಔಷಧವೇ ಉತ್ತಮ ಎಂದು ಶಿಫಾರಸು ಮಾಡಿರುವುದು ತಿಳಿದುಬಂದಿದೆ. ಯಾವುದಿದು RemdesIvir?

ಇದು ಅಪರೂಪದ ಸೋಂಕುಗಳಿಗೆ ಬಳಕೆಯಾಗುವ ಔಷಧ. ಇಬೋಲಾ ಚಿಕಿತ್ಸೆಗೆಂದು ಇದನ್ನು ಸಿದ್ಧಪಡಿಸಲಾಗಿತ್ತು. ಕಾಂಗೋ ದೇಶದ ಇಬೋಲಾ ರೋಗಿಗಳ ಮೇಲೆ ಇದರ ಪ್ರಯೋಗ ನಡೆದಿತ್ತು. ಅದಾದ ಬಳಿಕ ಇದು ವ್ಯಾಪಕವಾಗಿ ಬಳಕೆಯಾಗುತ್ತಿಲ್ಲ.

Leave A Reply

Your email address will not be published.