EBM News Kannada
Leading News Portal in Kannada

ಬದಲಾದ ಹವಾಮಾನ; ನಗರದಲ್ಲಿ ಭೀತಿ ಹುಟ್ಟಿಸುತ್ತಿದೆ ‘ವೈರಲ್ ಜ್ವರ’ ಪ್ರಕರಣಗಳು

0

ಬೆಂಗಳೂರು; ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ಹವಾಮಾನ ಬದಲಾಗಿದ್ದು, ಈ ನಡುವಲ್ಲೇ ವೈರಲ್ ಜ್ವರಗಳು ನಗರದಲ್ಲಿ ವೈರಲ್ ಆಗುತ್ತಿದೆ.

ಹವಾಮಾನ ಬದಲಾದ ಹಿನ್ನಲೆಯಲ್ಲಿ ಮಳೆಯಿಂದಾಗಿ ಜ್ವರ ಬರುತ್ತಿರುವುದು ಸಾಮಾನ್ಯವಾಗಿ ಹೋಗಿದೆ. ವೈರಲ್ ಜ್ವರಗಳು ಇತ್ತೀಚೆಗೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜನರಲ್ಲಿ ಭೀತಿಗಳೂ ಹೆಚ್ಚಾಗಿದೆ.

ಹೃದಯ ತಜ್ಞ ಡಾ.ರಮಣ ರಾವ್ ಅವರು ಮಾತನಾಡಿ, ಬದಲಾದ ಹವಾಮಾನ ವೈರಸ್ ಗಳನ್ನು ಹೊತ್ತು ತರುತ್ತವೆ. ಹವಾಮಾನ ಬದಲಾಗುತ್ತಿದ್ದಂತೆಯೇ ವೈರಲ್ ಸೋಂಕುಗಳು ಹೆಚ್ಚಾಗುವುದನ್ನು ನಾವು ನೋಡುತ್ತೇನೆ. ಈ ವೈರಸ್ ಗಳು ಶ್ವಾಸಕೋಶಗಳ ಮೇಲೆ ಪರಿಣಾಮ ಬೀರುವುದು ಹೆಚ್ಚಾಗಿರುತ್ತದೆ. ಪ್ರತೀ ವರ್ಷ ಮಾನವನ ದೇಹದಲ್ಲಿ ವಿವಿಧ ರೀತಿಯ ವೈರಸ್ ಗಳನ್ನು ನೋಡುತ್ತೇವೆ.

ಇದರಲ್ಲಿ ಕೆಲವು ಅತ್ಯಂತ ಅಪಾಯಕಾರಿಯಾಗಿರುತ್ತವೆ. ಕೆಲವು ಅಂತಹ ಅಪಾಯಗಳೇನೂ ಇರುವುದಿಲ್ಲ. ಇಂತಹ ವೈರಸ್ ಗಳು ಪ್ರಮುಖವಾಗಿ ವಯಸ್ಸಾದವರು ಹಾಗೂ ಮಕ್ಕಳ ಮೇಲೆಯೇ ಹೆಚ್ಚು ಪರಿಣಾಮ ಬೀರುವುದುಂಟು ಎಂದು ಹೇಳಿದ್ದಾರೆ.

ಸೋಂಕುಶಾಸ್ತ್ರಜ್ಞ ಡಾ. ಸಂಜಯ್ ಕಾಂತ್ ಅವರು ಮಾತನಾಡಿ, ಅತಿಯಾದ ಕೆಮ್ಮು ಕ್ಷಯರೋಗವನ್ನುಂಟು ಮಾಡಬಹುದು. ಶ್ವಾಸಕೋಶ ಸೋಂಕುಗಳು ಇತ್ತೀಚೆಗೆ ಸಾಮಾನ್ಯವಾಗಿ ಹೋಗಿದೆ. ಹವಾಮಾನ ಬದಲಾದ ಸಂದರ್ಭದಲ್ಲಿ ಬಿಸಿ ನೀರನ್ನು ಕುಡಿಯುವುದು ಉತ್ತಮ. ಮನೆಯಲ್ಲಿ ಅಥವಾ ಶುದ್ಧತೆ ಕಾಪಾಡುವ ಪ್ರದೇಶಗಳಲ್ಲಿ ಆಹಾರವನ್ನು ಸೇವನೆ ಮಾಡಬೇಕು. ಜ್ವರ ಬಂದವರ ಹತ್ತಿರ ಸಾಧ್ಯವಾದಷ್ಟು ದೂರವಿರುವುದು ಒಳಿತು. ಪ್ರಮುಖವಾಗಿ ಮಕ್ಕಳು ಎಂದು ಹೇಳಿದ್ದಾರೆ.

ಶ್ವಾಸಕೋಶಶಾಸ್ತ್ರ ತಜ್ಞೆ ಪದ್ಮ ಸುಂದರಂ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ವೈರಲ್ ಸೋಂಕುಗಳು ಹೆಚ್ಚಾಗಬಹುದು. ಅಸ್ತಮಾ ಸೇರಿ ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿರುವವರು ದೇಹದಲ್ಲಾಗುವ ಬದಲಾವಣೆಗಳನ್ನು ಗಮನಿಸುತ್ತಿರಬೇಕು ಎಂದು ತಿಳಿಸಿದ್ದಾರೆ.

Leave A Reply

Your email address will not be published.