EBM News Kannada
Leading News Portal in Kannada

‘ಪವರ್’ ಕಳೆದುಕೊಂಡ ಡಿಕೆಶಿ: ಎಚ್.ಡಿ ರೇವಣ್ಣ ಮಡಿಲಿಗೆ ಇಂಧನ ಖಾತೆ!

0

ಬೆಂಗಳೂರು: ಮೇ 19 ರಂದು ಬಿಜೆಪಿ ಮುಖಂಡ ಬಿ,ಎಸ್ ಯಡಿಯೂರಪ್ಪ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ವಿಫಲವಾದರು.
ಆ ಸಮಯದಲ್ಲಿ ಡಿಕೆ ಶಿವಕುಮಾರ್ ಕಾಂಗ್ರೆಸ್ ನ ಹೀರೋ ಆಗಿದ್ದರು. ಜೊತೆಗೆ ಟ್ರಬಲ್ ಶೂಟರ್ ಎಂದೇ ಪರಿಗಣಿಸಲ್ಪಟ್ಟಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಒಕ್ಕಲಿಗರ ಪ್ರಬಲ ಮುಖಂಡರಾಗಿರುವ ಡಿಕೆ ಶಿವಕುಮಾರ್ ಬಲಹೀನರಾದಂತೆ ಕಾಣುತ್ತಿದ್ದಾರೆ.

ಬಿಜೆಪಿಯ ಕುದುರೆ ವ್ಯಾಪಾರದಿಂದ ಕಾಂಗ್ರೆಸ್ ಶಾಸಕರನ್ನು ರಕ್ಷಿಸಲು ಡಿ,ಕೆ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಹೀಗಿದ್ದರು ಸಮ್ಮಿಶ್ರ ಸರ್ಕಾರದಲ್ಲಿ ಅವರಿಗೆ ಇಂಧನ ಖಾತೆ ನೀಡಲು ನಿರಾಕರಿಸಲಾಗಿದೆ. ಇಂಧನ ಖಾತೆ ಮರಳಿ ಪಡೆಯಲು ಶಿವಕುಮಾರ್ ಪಟ್ಟ ಪ್ರಯತ್ನ ವ್ಯರ್ಥವಾಗಿದೆ. ಇಂಧನ ಖಾತೆ ಜೆಡಿಎಸ್ ಪಾಲಾಗಿದ್ದು, ಮುಖ್ಯಮಂತ್ರಿ ಕುಮಾರ ಸ್ವಾಮಿ ಸಹೋದರ ಎಚ್.ಡಿ ರೇವಣ್ಣ ಆ ಖಾತೆ ವಹಿಸಿಕೊಳ್ಳುವ ಸಾಧ್ಯತೆಯಿದೆ.

ಇಂಧನ ಖಾತೆಗಾಗಿ ಕಳೆದ ಕೆಲವು ದಿನಗಳಿಂದ ರೇವಣ್ಣ ಮತ್ತು ಡಿಕೆಶಿ ಲಾಬಿ ನಡೆಸಿದ್ದರು. ಆದರೆ ತಾವು ಯಾವುದೇ ಸ್ಥಾನಕ್ಕಾಗಿ ಲಾಬಿ ನಡೆಸಿಲ್ಲ ಎಂದು ಡಿಕೆಶಿ ಹೇಳಿದ್ದಾರೆ, ಆಧರೆ ಅವರು ಇಂಧನ ಖಾತೆ ಪಡೆಯಲು ಹಲವು ರೀತಿಯ ಪ್ರಯತ್ನ ಪಟ್ಟಿದ್ದರು ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.

ಹಣಕಾಸು ಖಾತೆ ಜೆಡಿಎಸ್ ಗೆ ಎಂದು ತೀರ್ಮಾನವಾಗಿತ್ತು, ಆದರೆ ಶುಕ್ರವಾರ ಮಧ್ಯಾಹ್ನದವರೆಗೂ ಇಂಧನ ಖಾತೆ ಯಾರಿಗೆ ಎಂಬ ಗೊಂದಲವಿತ್ತು, ಆದರೆ ಅಂತಿಮವಾಗಿ ರಾಹುಲ್ ಗಾಂಧಿ ಮಧ್ಯಸ್ಥಿಕೆಯಿಂದ ಸಮಸ್ಯೆ ಬಗೆಹರಿದಿದೆ.

ಇಂಧನ ಖಾತೆ ಸಿಗದಿದ್ದಕ್ಕೆ ಶಿವಕುಮಾರ್ ಮುಖದಲ್ಲಿ ಅಸಮಾಧಾನ ಎದ್ದು ಕಾಣುತ್ತಿತ್ತು. ಮಾಧ್ಯಮದವರು ಈ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರು ಅದನ್ನು ನಿಬಾಯಿಸುವುದಾಗಿ ತಿಳಿಸಿದ್ದಾರೆ,ತಮ್ಮ ಅಸಮಾಧಾನವನ್ನು ಪಕ್ಷದ ಹಿರಿಯ ಮುಖಂಜಡರಿಗೆ ರವಾನಿಸಿದ್ದಾರೆ ಎನ್ನಲಾಗಿದೆ,
ಇನ್ನೂ ಡಿಕೆ ಶಿವಕುಮಾರ್ ಗೃಹ ಖಾತೆ ಅಥವಾ ಜಲ ಸಂಪನ್ಮೂಲ ಖಾತೆ ಪಡೆಯಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.