Rajinikanth: ಮದುವೆ ಮಂಟಪವನ್ನೇ ಕೊರೋನಾ ರೋಗಿಗಳ ಚಿಕಿತ್ಸೆಗೆ ನೀಡಿದ ಸೂಪರ್ ಸ್ಟಾರ್ ರಜನಿಕಾಂತ್
ಇತ್ತೀಚೆಗೆ ತಮಿಳಿನ ಸೂಪರ್ಸ್ಟಾರ್ ರಜನಿಕಾಂತ್ ಕೊರೋನಾ ಲಾಕ್ ಡೌನ್ನಿಂದಾಗಿ ಸಂಕಷ್ಟದಲ್ಲಿರುವ ಕಾರ್ಮಿಕರ ವರ್ಗಕ್ಕೆ 50 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು. ಇದರ ಬೆನ್ನಲ್ಲೆ ಕೊರೋನಾ ವೈರಸ್ ರೋಗಿಗಳ ಚಿಕಿತ್ಸೆಗಾಗಿ ತಮ್ಮ ಒಡೆತನದ ಕಲ್ಯಾಣ ಮಂಟಪವನ್ನು ಚಿಕಿತ್ಸೆಯಾಗಿ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ತಮಿಳಿನಾಡಿನಲ್ಲಿ 859 ಜನರಲ್ಲಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 8 ಜನರು ಮಹಾಮಾರಿ ವೈರಾಣುವಿನಿಂದಾಗಿ ಸಾವನ್ನಪ್ಪಿದ್ದಾರೆ. ಹೀಗಾಗಿ ತಮ್ಮ ಒಡೆತನಲ್ಲಿರುವ ‘ರಾಘವೇಂದ್ರ ಕಲ್ಯಾಣ‘ ಮಂಟಪವನ್ನು ಕೊರೋನಾ ವೈರಸ್ ರೋಗಿಗಳ ಚಿಕಿತ್ಸೆಗಾಗಿ ನೀಡಿ ಮಾನವೀಯತೆ ಮೆರೆದ್ದಾರಂತೆ.
ಈ ಬಗ್ಗೆ ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿರುವ ನಟ ರಜನಿಕಾಂತ್ ಚೆನ್ನೈನಲ್ಲಿರುವ ಕೊಡಂಬಕ್ಕಮ್ ರಾಘವೆಂದ್ರ ಮದುವೆ ಮಂಟಪವನ್ನು ಉಚಿತವಾಗಿ ಬಳಸಿಕೊಳ್ಳಿ ಎಂದು ಪತ್ರದ ಮೂಲಕ ತಿಳಿಸಿದ್ದಾರಂತೆ.
ತಮಿಳು ನಾಡಿನ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಹೆಚ್ಚಿನ ವಾರ್ಡ್ಗಳಿಲ್ಲ. ಹೀಗಾಗಿ ಅಲ್ಲಿನ ರಾಜಕಾರಣಿಗಳು, ಸೆಲೆಬ್ರಿಟಿಗಳು ಕೊರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸುವ ಮೂಲಕ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ.
ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈಗಾಗಲೇ ದೇಶದಲ್ಲಿ 6,565 ಜನರಿಗೆ ಕೊರೋನಾ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ. ಸಾವಿನ ಸಂಕ್ಯೆ 239ಕ್ಕೆ ಏರಿದೆ. ಸರ್ಕರ ಕೂಡ ಹೆಚ್ಚಿಕ ನಿಗಾವಹಿಸುತ್ತಿದೆ. ಇತ್ತ ಸೆಲೆಬ್ರಿಟಿಗಳು, ಸಿನಿಮಾ ಸ್ಟಾರ್ ನಟರು ಕೂಡ ಕೊರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.