EBM News Kannada
Leading News Portal in Kannada

ಕೇವಲ 1 ಎಸೆತದಲ್ಲಿ 17 ರನ್ ನೀಡಿದ ಬೌಲರ್ ಬಗ್ಗೆ ನೀವು ಕೇಳಿದ್ದೀರಾ..?; ಇಲ್ಲಿದೆ ಮಾಹಿತಿ

0

ಕೊರೋನಾ ವೈರಸ್​ನಿಂದಾಗಿನ ಕ್ರಿಕೆಟ್ ಜಗತ್ತು ಸ್ತಬ್ದಗೊಂಡಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ಅರ್ಧದಲ್ಲೇ ಮೊಟಕುಗೊಂಡರೆ, ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಸ್ಥಿತಿ ತೂಗುಯ್ಯಾಲೆಯಲ್ಲಿದೆ. ಲಾಕ್​ಡೌನ್​ನಿಂದಾಗಿ ಕ್ರಿಕೆಟ್ ಆಟಗಾರರೆಲ್ಲ ಮನೆಯಲ್ಲಿಯೇ ಕುಳಿತು ಸಮಯ ಕಳೆಯುತ್ತಿದ್ದಾರೆ.

ಹೀಗಿರುವಾಗ ಈ ಹಿಂದೆ ಕ್ರಿಕೆಟ್​ನಲ್ಲಿ ನಡೆದ ವಿಚಿತ್ರ ಘಟನೆಗಳ ಕುರಿತು ಕೆಲವೊಂದು ಮಾಹಿತಿಯನ್ನು ಮೆಲುಕು ಹಾಕೋಣ. ಕ್ರಿಕೆಟ್​ ಅಂದಮೇಲೆ ಒಂದಲ್ಲಾ ಒಂದು ವಿಚಿತ್ರ ಘಟನೆಗಳು ನಡೆಯುತ್ತಲೆ ಇರುತ್ತದೆ. ಇದೇ ಸಾಲಿಗೆ ಕಳೆದ ವರ್ಷ ಹೊಸ ಸೇರ್ಪಡೆಯಾಗಿದ್ದು ಆಸ್ಟ್ರೇಲಿಯಾ ಬೌಲರ್ ಒಬ್ಬ ತನ್ನ ಒಂದೇ ಎಸೆತದಲ್ಲಿ ಬರೋಬ್ಬರಿ 17 ರನ್ ನೀಡಿರುವುದು. ಹೇಗೆ ಅಂತಿರ ಈ ಸ್ಟೋರಿ ಓದಿ..

ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್​ ಬ್ಯಾಶ್​ ಲೀಗ್ ಟೂರ್ನಿ​ನಲ್ಲಿ ಈ ಘಟನೆ ನಡೆದಿದೆ. ಹಾಬರ್ಟ್​ ಹರಿಕೇನ್ಸ್​ ತಂಡದ ಬೌಲರ್​​ ರಿಲೆ ಮೆರೆಡಿತ್ ತನ್ನ 1 ಎಸೆತದಲ್ಲಿ 17 ರನ್ ನೀಡಿದವರಾಗಿದ್ದಾರೆ. ಹಾಬರ್ಟ್​ ತಂಡದ ನೀಡಿದ್ದ 184 ರನ್​ಗಳ ಸವಾಲು ಸ್ವೀಕರಿಸಿದ ಮೆಲ್ಬೋರ್ನ್​​​ ರೆನೆಗೇಡ್ಸ್​​ ತಂಡಕ್ಕೆ ಮೊದಲ ಓವರ್​ನಲ್ಲೇ ಒಟ್ಟು 23 ರನ್ ದಕ್ಕಿತು.

ಮೊದಲ ಓವರ್​​ನ ಮೆರೆಡಿತ್ ಅವರ ಒಂದು ಹಾಗೂ ಎರಡನೇ ಎಸೆತ ಡಾಟ್ ಬಾಲ್ ಆದರೆ, ಮೂರನೇ ಎಸೆತದಲ್ಲಿ 1 ರನ್ ಬಂತು. 4ನೇ ಎಸೆತ ನೋಬಾಲ್​​​​ ಆಗಿದೆ. ಹೀಗಾಗಿ ಮತ್ತೆ 4ನೇ ಎಸೆತ ಎಸೆದಿದ್ದು​​​ ಬಾಲ್ ವೈಡ್​​ ಜೊತೆಗೆ ಬೌಂಡರಿ ಗೆರೆ ದಾಟಿದೆ. ವೈಡ್ ಆಗಿದ್ದರಿಂದ ನೋ ಬಾಲ್ ಹಾಗೆ ಉಳಿದಿದ್ದು, ಮುಂದಿನ ಎಸೆತದಲ್ಲಿ ಬ್ಯಾಟ್ಸ್​ಮನ್​​​ ಬೌಂಡರಿ ಬಾರಿಸಿದ್ದಾನೆ.

ಗ್ರಹಚಾರ ಎಂದರೆ ಈ ಎಸೆತವು ನೋ ಬಾಲ್ ಆಗಿದೆ. ಹೀಗಾಗಿ ಮತ್ತೊಂದು ನೋ ಬಾಲ್​ನಲ್ಲಿ ಬ್ಯಾಟ್ಸ್​ಮನ್​ ಚೆಂಡನ್ನು ಮತ್ತೆಮ್ಮೆ ಬೌಂಡರಿಗೆ ಅಟ್ಟಿದ್ದಾನೆ. ಈ ಮೂಲಕ ಬೌಲರ್​ನ ಒಂದು ಎಸೆತ ಮುಗಿವ ಹೊತ್ತಿಗೆ 17 ರನ್ ಮೂಡಿಬಂದಿದೆ.

Leave A Reply

Your email address will not be published.