EBM News Kannada
Leading News Portal in Kannada

ಖ್ಯಾತ ಕಿರುತೆರೆ ನಟ ರಿತುರಾಜ್ ಸಿಂಗ್ ನಿಧನ

0



ಮುಂಬೈ: ಕಿರುತೆರೆ ನಟ ರಿತುರಾಜ್ ಸಿಂಗ್ ಹೃದಯ ಸ್ತಂಭನದಿಂದ ಫೆ. 19ರಂದು ಮೃತಪಟ್ಟಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು. ಅವರ ನಿಧನದ ಸುದ್ದಿಯನ್ನು ಅವರ ಸ್ನೇಹಿತ ಹಾಗೂ ನಟ ಅಮೃತ್ ಬೆಹ್ಲ್ ದೃಢಪಡಿಸಿದ್ದಾರೆ.

ಯಕೃತ್ತಿನ ಕಾಯಿಲೆಗೆ ತುತ್ತಾಗಿದ್ದ ಅವರನ್ನು ಇತ್ತೀಚೆಗಷ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ.

ರಿತುರಾಜ್ ಸಿಂಗ್ ಹಿಂದಿ ಟಿವಿ ಪ್ರದರ್ಶನಗಳು ಹಾಗೂ ಬಾಲಿವುಡ್ ಸಿನಿಮಾಗಳಲ್ಲಿನ ತಮ್ಮ ಪಾತ್ರಗಳಿಂದ ಮನೆ ಮಾತಾಗಿದ್ದರು. ಅವರು ಖ್ಯಾತ ಟಿವಿ ಪ್ರದರ್ಶನಗಳ ಪೈಕಿ ಬನೇಗಿ ಅಪ್ನಿ ಬಾತ್, ಹಿಟ್ಲರ್ ದೀದಿ, ಶಪಥ್, ದಿಯಾ ಔರ್ ಬಾತಿ ಹಮ್, ವಾರಿಯರ್ ಹೈ ಸೇರಿವೆ. ಟಿವಿ ಪ್ರದರ್ಶನವಾದ ಲಾಡೊ 2ನಲ್ಲಿನ ಪಾತ್ರದಿಂದ ರಿತುರಾಜ್ ಸಿಂಗ್ ಭಾರಿ ಜನಪ್ರಿಯರಾಗಿದ್ದರು.

ಟಿವಿ ಪ್ರದರ್ಶನ ಹಾಗೂ ಬಾಲಿವುಡ್ ಸಿನಿಮಾ ಮಾತ್ರವಲ್ಲದೆ, ದಿ ಟೆಸ್ಟ್ ಕೇಸ್, ಬಂದಿಶ್ ಬಂದಿತ್ಸ್, ನೆವರ್ ಕಿಸ್ ಯುವರ್ ಬೆಸ್ಟ್ ಫ್ರೆಂಡ್ ಹಾಗೂ ಮೇಡ್ ಇನ್ ಹೆವನ್‌ನ ಎರಡನೆ ಆವೃತ್ತಿಯಂಥ ವೆಬ್ ಸರಣಿಗಳಲ್ಲೂ ರಿತುರಾಜ್ ಸಿಂಗ್ ನಟಿಸಿದ್ದರು.

Leave A Reply

Your email address will not be published.