EBM News Kannada
Leading News Portal in Kannada

ಶಾರುಖ್ ಖಾನ್ ಅವರ ಒಟ್ಟೂ ಆಸ್ತಿ ಎಷ್ಟು ಗೊತ್ತಾ? ಭಾರತದ ಶ್ರೀಮಂತ ನಟನ ಬಳಿ ಇದೆ ಸಾವಿರಾರು ಕೋಟಿ ರೂಪಾಯಿ ಆಸ್ತಿ – Kannada News | Shah Rukh Khan Net worth Bollywood King Khan net worth is more than 6 Thousand Crores rmd

0


ಈವರೆಗೆ ಶಾರುಖ್ ಖಾನ್ ಬಾಲಿವುಡ್​​ನಲ್ಲಿ 90ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ. 3 ದಶಕಗಳ ಕಾಲ ಚಿತ್ರರಂಗದಲ್ಲಿ ಶಾರುಖ್ ಮಿಂಚಿದ್ದಾರೆ. ಭಾರತದ ಅತ್ಯಂತ ಶ್ರೀಮಂತ ನಟ ಶಾರುಖ್ ಅನ್ನೋದು ವಿಶೇಷ.

ಜೀರೋದಿಂದ ಹೀರೋ ಆದ ಸ್ಟಾರ್​ಗಳ ಪಟ್ಟಿಯಲ್ಲಿ ಶಾರುಖ್ ಖಾನ್ (Shah Rukh Khan) ಕೂಡ ಇದ್ದಾರೆ. ಬಾಲಿವುಡ್​​ನಲ್ಲಿ ಶಾರುಖ್ ಖಾನ್​​ಗೆ ಸಖತ್ ಬೇಡಿಕೆ ಇದೆ. ಅವರು ನಟನೆಯಿಂದ ನಾಲ್ಕು ವರ್ಷ ದೂರ ಇದ್ದಿದ್ದರು. ‘ಪಠಾಣ್​’ ಸಿನಿಮಾ ಮೂಲಕ ಅವರು ಭರ್ಜರಿ ಕಂಬ್ಯಾಕ್ ಮಾಡಿದರು. ಈ ಚಿತ್ರ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈ ಚಿತ್ರಕ್ಕೆ ಶಾರುಖ್ ಖಾನ್ ಅವರು ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಇದರ ಜೊತೆಗೆ ಅವರು ಲಾಭದಲ್ಲೂ ಪಾಲು ಪಡೆದಿದ್ದಾರೆ ಎನ್ನಲಾಗಿದೆ. ಶಾರುಖ್ ಖಾನ್ ಅವರು ಒಟ್ಟೂ ಆಸ್ತಿ ಕೇಳಿದರೆ ಎಲ್ಲರಿಗೂ ಅಚ್ಚರಿ ಆಗುತ್ತದೆ.

ಈವರೆಗೆ ಶಾರುಖ್ ಖಾನ್ ಬಾಲಿವುಡ್​​ನಲ್ಲಿ 90ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ. 3 ದಶಕಗಳ ಕಾಲ ಚಿತ್ರರಂಗದಲ್ಲಿ ಶಾರುಖ್ ಮಿಂಚಿದ್ದಾರೆ. ಶಾರುಖ್​ ಖಾನ್ ಅವರ ಒಟ್ಟೂ ಆಸ್ತಿ 6300 ಕೋಟಿ ರೂಪಾಯಿ! ಭಾರತದ ಅತ್ಯಂತ ಶ್ರೀಮಂತ ನಟ ಶಾರುಖ್ ಅನ್ನೋದು ವಿಶೇಷ. ವಿಶ್ವದ ಶ್ರೀಮಂತ ನಟರ ಪೈಕಿ ಇವರಿಗೆ ನಾಲ್ಕನೇ ಸ್ಥಾನ ಇದೆ.

ಸಿನಿಮಾ ಸಂಭಾವನೆ

ಶಾರುಖ್ ಖಾನ್ ಅವರ ಚಿತ್ರಗಳು ಸಖತ್ ಮಾಸ್ ಆಗಿರುತ್ತವೆ. ಅವರು ಪ್ರತಿ ಸಿನಿಮಾಗೆ 100-150 ಕೋಟಿ ರೂಪಾಯಿ ಪಡೆಯುತ್ತಾರೆ ಎಂದು ತಿಳಿದು ಬಂದಿದೆ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಖ್ಯಾತಿ ಶಾರುಖ್​ ಖಾನ್​ಗೆ ಇದೆ.

ವರ್ಷದ ಗಳಿಕೆ 280 ಕೋಟಿ ರೂಪಾಯಿ

ಶಾರುಖ್ ಖಾನ್ ಅವರು ವರ್ಷದ ಗಳಿಕೆ 280 ಕೋಟಿ ರೂಪಾಯಿಗೂ ಅಧಿಕವಾಗಿದೆ. ಹಲವು ಬ್ರ್ಯಾಂಡ್​​ಗಳಿಗೆ ಶಾರುಖ್ ಖಾನ್ ಅವರು ಅಂಬಾಸಿಡರ್ ಆಗಿದ್ದಾರೆ. ಇದರ ಪ್ರಚಾರಕ್ಕಾಗಿ ಅವರು 4ರಿಂದ 10 ಕೋಟಿ ರೂಪಾಯಿ ಪಡೆಯುತ್ತಾರೆ ಎಂದು ತಿಳಿದು ಬಂದಿದೆ. ಪ್ರತಿ ವರ್ಷಕ್ಕೆ ಅವರಿಗೆ ಇದರಿಂದ ಸಾಕಷ್ಟು ಹಣ ಬರುತ್ತಿದೆ.

ರೆಡ್ ಚಿಲ್ಲೀಸ್ ಎಂಟರ್​ಟೇನ್​ಮೆಂಟ್

ರೆಡ್​ ಚಿಲ್ಲೀಸ್ ಎಂಟರ್​ಟೇನ್​ಮೆಂಟ್ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ ಶಾರುಖ್ ಖಾನ್. ಹಲವು ಸಕ್ಸಸ್ ಸಿನಿಮಾಗಳನ್ನು ನಿರ್ಮಿಸಲಾಗಿದೆ. ವರ್ಷಕ್ಕೆ ಇದರಿಂದ ಅವರಿಗೆ ನೂರಾರು ಕೋಟಿ ರೂಪಾಯಿ ಗಳಿಕೆ ಆಗುತ್ತದೆ.

ಐಪಿಎಲ್ ತಂಡ

ಐಪಿಎಲ್​ನಲ್ಲಿ ಶಾರುಖ್ ಖಾನ್ ಅವರು ತಮ್ಮದೇ ತಂಡ ಹೊಂದಿದ್ದಾರೆ. ‘ಕೋಲ್ಕತ್ತಾ ನೈಟ್ ರೈಡರ್ಸ್’ ತಂಡದ ಒಡೆತನವನ್ನು ಶಾರುಖ್ ಖಾನ್ ಹೊಂದಿದ್ದಾರೆ. ಇದರ ಮೌಲ್ಯ 9000 ಕೋಟಿ ರೂಪಾಯಿ ಎನ್ನಲಾಗಿದೆ.

ಕಾರ್ ಕಲೆಕ್ಷನ್

ಶಾರುಖ್ ಖಾನ್ ಅವರ ಬಳಿ ಹಲವು ಐಷಾರಾಮಿ ಕಾರುಗಳು ಇವೆ. 31 ಕೋಟಿ ರೂಪಾಯಿ ಮೌಲ್ಯದ ಕಾರನ್ನು ಶಾರುಖ್ ಖಾನ್ ಹೊಂದಿದ್ದಾರೆ. ರೋಲ್ಸ್​ ರಾಯ್ಸ್​ನಿಂದ ಹಿಡಿದು ಹಲವು ಲಕ್ಷುರಿ ಕಾರುಗಳು ಇವೆ. ಇದರ ಜೊತೆಗೆ ಅವರು ವ್ಯಾನಿಟಿ ವ್ಯಾನ್ ಹೊಂದಿದ್ದಾರೆ. ಇದರ ಬೆಲೆ 4 ಕೋಟಿ ರೂಪಾಯಿ. ಶೂಟಿಂಗ್ ಸಂದರ್ಭದಲ್ಲಿ ಇದನ್ನು ತೆಗೆದುಕೊಂಡು ಹೋಗುತ್ತಾರೆ. ಕಿಚನ್, ಟಾಯ್ಲೆಟ್ ಸೇರಿ ಹಲವು ಸೌಲಭ್ಯಗಳು ಇದರಲ್ಲಿ ಇವೆ.

ಮುಂಬರುವ ಸಿನಿಮಾ

ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಸೆಪ್ಟೆಂಬರ್​ನಲ್ಲಿ ಚಿತ್ರ ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಅಟ್ಲಿ ನಿರ್ದೇಶನ ಇದೆ. ಇದರ ಜೊತೆಗೆ ‘ಡಂಕಿ’ ಚಿತ್ರದ ಕೆಲಸದಲ್ಲೂ ಅವರು ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ರಾಜ್​ಕುಮಾರ್ ಹಿರಾನಿ ನಿರ್ದೇಶನ ಇದೆ. ಡಿಸೆಂಬರ್ ವೇಳೆಗೆ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Leave A Reply

Your email address will not be published.