EBM News Kannada
Leading News Portal in Kannada

ಬಿಡುಗಡೆಗೆ ಮುನ್ನ ಹಾಕಿದ ಬಂಡವಾಳ ವಾಪಸ್ ಪಡೆಯಿತಾ ‘ಜೈಲರ್’ – Kannada News | Rajinikanth’s Upcoming Movie Jailer Pre Release Business Report

0


Jailer: ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾ ಆಗಸ್ಟ್ 10ರಂದು ಬಿಡುಗಡೆ ಆಗಲಿದೆ. ಸಿನಿಮಾ ಬಿಡುಗಡೆ ಆಗುವ ಮುನ್ನವೇ ಕೋಟ್ಯಂತರ ರೂಪಾಯಿ ಹಣ ಗಳಸಿದೆ.

ಬಿಡುಗಡೆಗೆ ಮುನ್ನ ಹಾಕಿದ ಬಂಡವಾಳ ವಾಪಸ್ ಪಡೆಯಿತಾ 'ಜೈಲರ್'

ರಜನೀಕಾಂತ್-ಜೈಲರ್

ರಜನೀಕಾಂತ್ (Rajinikanth) ನಟನೆಯ ‘ಜೈಲರ್‘ (Jailer) ಸಿನಿಮಾ ಇನ್ನೆರಡು ದಿನಗಳಲ್ಲಿ ಬಿಡುಗಡೆ ಆಗಲಿದೆ. ರಜನೀ ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ವಯಸ್ಸು ಹೆಚ್ಚಾದಷ್ಟು ರಜನೀಕಾಂತ್ ಕ್ರೇಜ್ ಹೆಚ್ಚಾಗುತ್ತಲೇ ಇದೆ. ರಜನೀಕಾಂತ್ ‘ಜೈಲರ್’ ಸಿನಿಮಾ ಬಿಡುಗಡೆ ದಿನ ಸಿನಿಮಾ ನೋಡಲೆಂದೇ ಚೆನ್ನೈ, ಬೆಂಗಳೂರುಗಳಲ್ಲಿ ಕೆಲವು ಸಂಸ್ಥೆಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ. ಕ್ರೇಜ್ ಸೃಷ್ಟಿಸಿರುವ ‘ಜೈಲರ್’ ಬಿಡುಗಡೆಗೆ ಮುನ್ನವೇ ದೊಡ್ಡ ಮೊತ್ತದ ಹಣವನ್ನು ಬಾಚಿಕೊಂಡಿದೆ. ‘ಜೈಲರ್’ ಸಿನಿಮಾದ ಪ್ರೀ ರಿಲೀಸ್ ಬ್ಯುಸಿನೆಸ್ ಲೆಕ್ಕಾಚಾರ ಇಲ್ಲಿದೆ.

‘ಜೈಲರ್’ ಸಿನಿಮಾಕ್ಕೆ ತಮಿಳುನಾಡು ಮಾತ್ರವೇ ಅಲ್ಲದೆ ಇತರೆ ರಾಜ್ಯಗಳಲ್ಲಿಯೂ ಒಳ್ಳೆಯ ಬೇಡಿಕೆ ಇದೆ. ಹಾಗಾಗಿ ಸಿನಿಮಾದ ವಿತರಣೆ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟವಾಗಿವೆ. ಕೆಲವು ವರದಿಗಳ ಪ್ರಕಾರ ‘ಜೈಲರ್’ ಸಿನಿಮಾದ ಭಾರತದ ವಿತರಣೆ ಹಕ್ಕು ಒಟ್ಟಾಗಿ ಸುಮಾರು 100 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ. ವಿದೇಶಿ ಬಿಡುಗಡೆ ಹಕ್ಕು 30 ಕೋಟಿಗೆ ಮಾರಾಟವಾಗಿದೆ. ಅಲ್ಲಿದೆ ಸಿನಿಮಾಕ್ಕೆ ಹಾಕಿರುವ ಒಟ್ಟು ಬಜೆಟ್​ನ ಸುಮಾರು 60-70 ಶೇಕಡ ಬಂದಂತಾಗಿದ್ದು, ಉಳಿಕೆ ಮೊತ್ತವು ಆಡಿಯೋ ಹಕ್ಕು, ಒಟಿಟಿ ಹಕ್ಕುಗಳಿಂದ ಬರಲಿದೆ. ಸಿನಿಮಾವನ್ನು ಸನ್ ನೆಟ್ವಕರ್ಸ್​​ನವರು ನಿರ್ಮಾಣ ಮಾಡಿರುವ ಕಾರಣ ಸ್ಯಾಟಲೈಟ್ ಹಕ್ಕುಗಳು ಸನ್ ಬಳಿಯೇ ಉಳಿಯಲಿವೆ.

‘ಜೈಲರ್’ ಸಿನಿಮಾದ ವಿತರಣೆ ಹಕ್ಕುಗಳು ರಾಜ್ಯವಾರು ಈ ರೀತಿ ಮಾರಾಟಗೊಂಡಿವೆ. ತಮಿಳುನಾಡಿನಲ್ಲಿ 62 ಕೋಟಿ, ಆಂಧ್ರ ಪ್ರದೇಶ 12 ಕೋಟಿ, ಕರ್ನಾಟಕ 10 ಕೋಟಿ, ಕೇರಳ 5.50 ಕೋಟಿ, ಭಾರತದ ಇತರೆ ರಾಜ್ಯಗಳಿಗೆ 3 ಕೋಟಿ, ವಿದೇಶದಲ್ಲಿ ಬಿಡುಗಡೆ ಮಾಡುವ ಹಕ್ಕು 30 ಕೋಟಿಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ಈವರೆಗೆ ಸುಮಾರು 130 ಕೋಟಿ ಹಣವನ್ನು ವಿತರಣೆಯಿಂದ ‘ಜೈಲರ್’ ಸಂಪಾದಿಸಿದ್ದಾಗಿದೆ. ಇದರ ಬಳಿಕ ಕಲೆಕ್ಷನ್​ನಲ್ಲಿ ಲಾಭಾಂಶವೂ ಬರಲಿದೆ ಸನ್ ನೆಟ್ವರ್ಕ್​​ಗೆ.

ಅನಿರುದ್ಧ್ ರವಿಚಂದ್ರ ಹಿನ್ನೆಲೆ ಸಂಗೀತ ನೀಡಿರುವ ಈ ಸಿನಿಮಾದ ಆಡಿಯೋ ಹಕ್ಕುಗಳು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಇನ್ನು ರಜನೀಕಾಂತ್ ಜೊತೆಗೆ ಇನ್ನೂ ಕೆಲವು ಸ್ಟಾರ್ ನಟರು ನಟಿಸಿರುವ ಈ ಸಿನಿಮಾಕ್ಕೆ ಒಟಿಟಿಯಲ್ಲಿ ಕನಿಷ್ಟ 40 ರಿಂದ 50 ಕೋಟಿ ರೂಪಾಯಿಯ ಮಾರುಕಟ್ಟೆ ಇದ್ದೇ ಇರಲಿದೆ. ಅಲ್ಲಿಗೆ ಸಿನಿಮಾವು ಬಿಡುಗಡೆಗೆ ಮುನ್ನವೇ ಬಂಡವಾಳ ಮೊತ್ತವನ್ನು ಮರಳಿ ಗಳಿಸಿದಂತಾಗಿದೆ.

‘ಜೈಲರ್’ ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್, ಮಲಯಾಳಂನ ಮೋಹನ್​ಲಾಲ್, ತೆಲುಗಿನ ಹಾಸ್ಯನಟ ಸುನಿಲ್, ಬಾಲಿವುಡ್​ನ ಜಾಕಿ ಶ್ರಾಫ್, ನಟಿ ರಮ್ಯಾ ಕೃಷ್ಣ ಸೇರಿದಂತೆ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾದಲ್ಲಿ ತಮನ್ನಾ ಪ್ರಮುಖ ಹಾಡೊಂದರಲ್ಲಿ ನಟಿಸಿದ್ದಾರೆ. ಸಿನಿಮಾದ ನಾಯಕಿಯೂ ಅವರೇ ಎನ್ನಲಾಗುತ್ತಿದೆ. ಆ ಬಗ್ಗೆ ಖಾತ್ರಿ ಇಲ್ಲ. ಸಿನಿಮಾವನ್ನು ನೆಲ್ಸನ್ ನಿರ್ದೇಶನ ಮಾಡಿದ್ದಾರೆ, ನಿರ್ಮಾಣ ಕಲಾನಿಧಿ ಮಾರನ್ ಅವರದ್ದು. ಸಿನಿಮಾವು ಆಗಸ್ಟ್ 10ರಂದು ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಬಿಡುಗಡೆ ಆಗಲಿದೆ.

ತಾಜಾ ಸುದ್ದಿ

Leave A Reply

Your email address will not be published.