ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ: 1 ಲಕ್ಷ 22 ಸಾವಿರ ರೂ. ಮೌಲ್ಯದ 85 ಎಣ್ಣೆ ಬಾಟಲು ಸೀಜ್
ಬೆಂಗಳೂರು(ಏ.14): ಲಾಕ್‌ಡೌನ್ ಅವಧಿಯಲ್ಲಿ ಅಕ್ರಮ ಮದ್ಯ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. 1 ಲಕ್ಷ 22 ಸಾವಿರ ಮೌಲ್ಯದ 85 ಮದ್ಯದ ಬಾಟಲ್‌ಗಳನ್ನು ಸೀಜ್ ಮಾಡಿದ್ದಾರೆ.
ಕೋವಿಡ್-19 ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಡೀ ಭಾರತದಾದ್ಯಂತ ಲಾಕ್‌ಡೌನ್ ಮಾಡಲಾಗಿದೆ. ಹಾಗಾಗಿ ಯಾವುದೇ ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ನೀಡದೆ ಎಣ್ಣೆ ಅಂಗಡಿಗಳನ್ನು ಮುಚ್ಚಲಾಗಿದೆ. ಹೀಗಿರುವಾಗ ನಗರದ ಅಮೃತಹಳ್ಳಿಯಲ್ಲಿ ಅಕ್ರಮವಾಗಿ ಮದ್ಯದ ಬಾಟಲ್‌ಗಳನ್ನು ದಾಸ್ತಾನು ಮಾಡುತ್ತಾ ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಇದನ್ನು ಪತ್ತೆಹಚ್ಚಿದ ಬೆಂಗಳೂರು ಉತ್ತರ ವಿಭಾಗದ ಅಬಕಾರಿ ಅಧಿಕಾರಿಗಳು ಏಪ್ರಿಲ್ 14ನೇ ತಾರೀಕಿನಂದು ಅಂದರೆ ಇಂದೇ ಕಾರ್ಯಾಚರಣೆ ನಡೆಸಿದ್ದಾರೆ.
ಇನ್ನು, ಪೊಲೀಸರು 1 ಲಕ್ಷ 22 ಸಾವಿರ ರೂ. ಮೌಲ್ಯದ ವಿಸ್ಕಿ, ಬಿಯರ್, ವೋಡ್ಕಾ ಬಾಟೆಲ್‌ಗಳನ್ನು ಸೀಜ್ ಮಾಡಿದ್ದಾರೆ. ಅಲ್ಲದೆ, ಅಕ್ರಮವಾಗಿ ಮದ್ಯದ ಬಾಟೆಲ್‌ಗಳನ್ನು ಇಟ್ಟುಕೊಂಡಿದ್ದ ಓರ್ವ ಮಹಿಳೆ ಸೇರಿದಂತೆ ನಾಲ್ಕು ಜನರ ಬಂಧನ ಮಾಡಲಾಗಿದೆ. ನರಸಮ್ಮ, ವಿಶ್ವನಾಥ್, ವರುಣೇಶ್ ಮತ್ತು ರಘು ಬಂಧಿತ ಆರೋಪಿಗಳು ಎಂದು ಹೇಳಲಾಗುತ್ತಿದೆ.