EBM News Kannada
Leading News Portal in Kannada

ವೀಸಾ ನೀಡಲು ಕಡಿಮೆ ಅಪಾಯಕಾರಿ ದೇಶಗಳ ಪಟ್ಟಿ : ಭಾರತವನ್ನು ಹೊರಗಿಟ್ಟ ಬ್ರಿಟನ್ ವಿರುದ್ಧ ತೀವ್ರ ಅಸಮಾಧಾನ

0

ಲಂಡನ್: ಬ್ರಿಟನ್ ನ ವಿಶ್ವವಿದ್ಯಾನಿಲಯಗಳಿಗೆ ತೆರಳುವ ವಿದ್ಯಾರ್ಥಿಗಳ ವೀಸಾ ಅರ್ಜಿಗಳ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವುದಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಬ್ರಿಟನ್ ಸರ್ಕಾರ ಕಡಿಮೆ ಅಪಾಯಕಾರಿ ದೇಶಗಳ ಪಟ್ಟಿಯನ್ನು ತಯಾರಿಸಿದೆ. ಈ ಪಟ್ಟಿಯಲ್ಲಿ ಭಾರತವನ್ನು ಹೊರಗಿಟ್ಟಿರುವುದು ತೀವ್ರ ಅಸಮಾಧಾನಕ್ಕೆ ಗುರಿಯಾಗಿದೆ.

ವಲಸೆ ನೀತಿಯಲ್ಲಿ ಬ್ರಿಟನ್ ಹಲವು ಬದಲಾವಣೆಗೆಳನ್ನು ಮಾಡಲು ಮುಂದಾಗಿದ್ದು, ಈ ಸಂಬಂಧ ಸಂಸತ್ ನಲ್ಲಿ ಹೊಸ ನೀತಿಯನ್ನು ಮಂಡಿಸಲಾಗಿದೆ. ಸುಮಾರು 25 ರಾಷ್ಟ್ರಗಳಿಂದ ಬ್ರಿಟನ್ ಗೆ ಬರುವ ವಿದ್ಯಾರ್ಥಿಗಳಿಗಾಗಿ ಟೈರ್-4 ವಿಭಾಗದ ವೀಸಾ ನಿಯಮಗಳನ್ನು ಸಡಿಸಿಲುವುದಾಗಿ ಬ್ರಿಟನ್ ನ ಗೃಹ ಇಲಾಖೆ ತಿಳಿಸಿತ್ತು. ಅಮೆರಿಕ, ಕೆನಡಾ ಹಾಗೂ ನ್ಯೂಜಿಲ್ಯಾಂಡ್ ಸೇರಿದಂತೆ 25 ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಸುಲಭವಾಗಿ ಬ್ರಿಟನ್ ವೀಸಾ ದೊರೆಯಲಿದ್ದು, ಭಾರತವನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ.

ಬ್ರಿಟನ್ ನ ಈ ನಿರ್ಧಾರದಿಂದ ಭಾರತೀಯ ವಿದ್ಯಾರ್ಥಿಗಳ ವೀಸಾ ಅರ್ಜಿಯನ್ನು ಕಠಿಣವಾಗಿ ಪರಿಶೀಲನೆ ಮಾಡಲಾಗುತ್ತದೆ. ಬ್ರಿಟನ್ ನ ಈ ಕ್ರಮವನ್ನು ಬ್ರಿಟನ್ ನಲ್ಲಿರುವ ಭಾರತೀಯ ಮೂಲದ ಉದ್ಯಮಿ ಹಾಗೂ ಯುಕೆಸಿಐಎಸ್ಎ ಅಧ್ಯಕ್ಷ ಭಾರತಕ್ಕೆ ಮಾಡಿರುವ ಅವಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.