EBM News Kannada
Leading News Portal in Kannada

ಶಿವಸೇನೆ ಜತೆ ಕಾಂಗ್ರೆಸ್ ಹೋದ್ರೆ ಕೋಮುವಾದಿ ಅಲ್ಲ, ಬಿಜೆಪಿ ಜತೆ ಜೆಡಿಎಸ್ ಹೋದ್ರೆ ತಪ್ಪಾ…? | Kannada Dunia | Kannada News | Karnataka News

0


ಶಿವಸೇನೆ ಜತೆ ಸೇರಿ ಕಾಂಗ್ರೆಸ್ ಸರ್ಕಾರ ಮಾಡಿದರೆ ಕೋಮುವಾದಿ ಅಲ್ಲ, ಆದರೆ, ಬಿಜೆಪಿ ಜತೆ ಜೆಡಿಎಸ್ ಹೋದರೆ ಅದು ತಪ್ಪಾ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪುರ ಪ್ರಶ್ನಿಸಿದ್ದಾರೆ.

ಚಿಕ್ಕನಾಯಕನಹಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ಪಕ್ಷದ ಹಿತ ದೃಷ್ಟಿಯಿಂದ ಮೈತ್ರಿ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೋಲಿಸುವುದೇ ಜೆಡಿಎಸ್ ಗುರಿಯಾಗಿದೆ. ನಾವು ಯಾವತ್ತೂ ಜಾತ್ಯತೀತರೇ. ಜಾತ್ಯತೀತ ಬಿಟ್ಟು ಬೇರೆ ಕಡೆ ಹೋಗಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಹಿಷ್ಕರಿಸಿದ್ದಾರೆ. 135 ಸೀಟು ಬಂದಿದ್ದಕ್ಕೆ ಇಲ್ಲಿ ಅವರ ಗತ್ತು ನಡವಳಿಕೆ ಬದಲಾಗಿದೆ. ಒಳ್ಳೆಯ ಆಡಳಿತ ಕೊಡುವುದನ್ನು ಬಿಟ್ಟು ಬೇರೆ ಕಡೆ ಗಮನ ಕೊಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜನರು ಸರಿಯಾದ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.

Leave A Reply

Your email address will not be published.