Shivrajkumar: ಲಾಕ್ಡೌನ್ನಲ್ಲೂ ಮನೆಯಲ್ಲಿ ಏನೆಲ್ಲ ಮಾಡ್ತಾರೆ ಗೊತ್ತಾ ಶಿವಣ್ಣ..!
ಆನಂದ್‘ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಶಿವಣ್ಣ 1986 ರಿಂದ ಇಲ್ಲಿಯವರೆಗೆ ಸುಮಾರು 120ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆ ಮಾತ್ರವಲ್ಲದೆ ನಿರ್ಮಾಪಕರಾಗಿ, ನಿರೂಪಕರಾಗಿ, ಹಿನ್ನೆಲೆ ಗಾಯಕನಾಗಿಯೂ ಗುರುತಿಸಿಕೊಂಡಿದ್ದಾರೆ.
ವಯಸ್ಸು 55ರ ಗಡಿ ದಾಟಿದರೂ ಶಿವಣ್ಣನ ಫಿಟ್ನೆಸ್ ಮಾತ್ರ ಯುವಕರನ್ನು ನಾಚಿಸುವಂತಿದೆ. ಈಗಲೂ ಎಂಥಾ ಫಾಸ್ಟ್ ಬೀಟ್ ಆದರೂ ಸಾಕು ಶಿವರಾಜ್ ಕುಮಾರ್ ಮೈಯಲ್ಲಿ ಮಿಂಚು ಹರಿದಂತೆ ಡ್ಯಾನ್ಸ್ ಮಾಡುತ್ತಾರೆ.
ಶಿವಣ್ಣ ಶೂಟಿಂಗ್ ಇರಲಿ -ಬಿಡಲಿ ಫಿಟ್ನೆಸ್ ಮಾತ್ರ ತುಂಬಾ ಚೆನ್ನಾಗಿ ಕಾಯ್ದುಕೊಂಡಿದ್ದಾರೆ. ಈ ವಯಸ್ಸಿನಲ್ಲೂ ಅವರ ಎನರ್ಜಿ ಹಾಗೂ ಫಿಟ್ನೆಸ್ ಗುಟ್ಟು ಏನು ಅನ್ನೋದು ತುಂಬಾ ಜನರ ಪ್ರಶ್ನೆ. ಅದಕ್ಕೆ ಪುಟ್ಟ ಉದಾಹರಣೆ ಇಲ್ಲಿದೆ ನೋಡಿ.
ನಿತ್ಯ ವ್ಯಾಯಾಮ ಮಾಡಿದರೆ ಮಾತ್ರ ಆರೋಗ್ಯ ಎನ್ನುವ ಶಿವಣ್ಣ, ಲಾಕ್ಡೌನ್ನಲ್ಲೂ ಮನೆಯಲ್ಲೇ ವ್ಯಾಯಾಮ ಮಾಡುತ್ತಿದ್ದಾರೆ. ಅವರು ಮನೆಯಂಗಳದಲ್ಲಿ ಸೈಕಲ್ ತುಳಿಯುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.