EBM News Kannada
Leading News Portal in Kannada

Shivrajkumar: ಲಾಕ್​ಡೌನ್​ನಲ್ಲೂ ಮನೆಯಲ್ಲಿ ಏನೆಲ್ಲ ಮಾಡ್ತಾರೆ ಗೊತ್ತಾ ಶಿವಣ್ಣ..!

0

ಆನಂದ್‘ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಶಿವಣ್ಣ 1986 ರಿಂದ ಇಲ್ಲಿಯವರೆಗೆ ಸುಮಾರು 120ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆ ಮಾತ್ರವಲ್ಲದೆ ನಿರ್ಮಾಪಕರಾಗಿ, ನಿರೂಪಕರಾಗಿ, ಹಿನ್ನೆಲೆ ಗಾಯಕನಾಗಿಯೂ ಗುರುತಿಸಿಕೊಂಡಿದ್ದಾರೆ.

ವಯಸ್ಸು 55ರ ಗಡಿ ದಾಟಿದರೂ ಶಿವಣ್ಣನ ಫಿಟ್ನೆಸ್​ ಮಾತ್ರ ಯುವಕರನ್ನು ನಾಚಿಸುವಂತಿದೆ. ಈಗಲೂ ಎಂಥಾ ಫಾಸ್ಟ್ ಬೀಟ್​ ಆದರೂ ಸಾಕು ಶಿವರಾಜ್​ ಕುಮಾರ್​ ಮೈಯಲ್ಲಿ ಮಿಂಚು ಹರಿದಂತೆ ಡ್ಯಾನ್ಸ್​ ಮಾಡುತ್ತಾರೆ.

ಶಿವಣ್ಣ ಶೂಟಿಂಗ್​ ಇರಲಿ -ಬಿಡಲಿ ಫಿಟ್ನೆಸ್​ ಮಾತ್ರ ತುಂಬಾ ಚೆನ್ನಾಗಿ ಕಾಯ್ದುಕೊಂಡಿದ್ದಾರೆ. ಈ ವಯಸ್ಸಿನಲ್ಲೂ ಅವರ ಎನರ್ಜಿ ಹಾಗೂ ಫಿಟ್ನೆಸ್​ ಗುಟ್ಟು ಏನು ಅನ್ನೋದು ತುಂಬಾ ಜನರ ಪ್ರಶ್ನೆ. ಅದಕ್ಕೆ ಪುಟ್ಟ ಉದಾಹರಣೆ ಇಲ್ಲಿದೆ ನೋಡಿ.

ನಿತ್ಯ ವ್ಯಾಯಾಮ ಮಾಡಿದರೆ ಮಾತ್ರ ಆರೋಗ್ಯ ಎನ್ನುವ ಶಿವಣ್ಣ, ಲಾಕ್​ಡೌನ್​ನಲ್ಲೂ ಮನೆಯಲ್ಲೇ ವ್ಯಾಯಾಮ ಮಾಡುತ್ತಿದ್ದಾರೆ. ಅವರು ಮನೆಯಂಗಳದಲ್ಲಿ ಸೈಕಲ್​ ತುಳಿಯುತ್ತಿರುವ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Leave A Reply

Your email address will not be published.