ವಾಟ್ಸ್ಆ್ಯಪ್ನಲ್ಲಿ ನಮಗೆ ಬೇಕಾದ ಸ್ವಂತ ಸ್ಟಿಕ್ಕರ್ ತಯಾರಿಸುವುದು ಹೇಗೆ?; ಇಲ್ಲಿದೆ ಟ್ರಿಕ್ಸ್
ವಿಶ್ವದ ಜನಪ್ರಿಯ ವಾಟ್ಸ್ಆ್ಯಪ್ ಅಪ್ಲಿಕೇಷನ್ನಲ್ಲಿ ಸ್ವಂತ ಸ್ಟಿಕ್ಕರ್ ಉಪಯೋಗಿಸುವ ಆಯ್ಕೆ ತಿಳಿದಿದೆಯಾ?. ನೀವು ಬಳಸುವ ವಾಟ್ಸ್ಆ್ಯಪ್ ಅಪ್ಲಿಕೇಷನ್ನಲ್ಲಿ ನಿಮ್ಮ ನೆಚ್ಚಿನ ಫೋಟೊವನ್ನು ಸ್ಟಿಕ್ಕರ್ಗೆ ರೂಪಾಂತರಿಸಿ ಬಳಸಿಕೊಳ್ಳುವ ಆಯ್ಕೆಯಿದೆ.
ಎಮೋಜಿ, ಫೋಟೊ, ವೀಡಿಯೋ, ಜಿಫ್ ಪೈಲ್ಗಳನ್ನು ಶೇರ್ ಮಾಡುವ ಆಯ್ಕೆಯ ಜೊತೆಗೆ ವಾಟ್ಸ್ಆ್ಯಪ್ ಅಪ್ಲಿಕೇಶನ್ನಲ್ಲಿ ಸ್ವಂತ ಸ್ಟಿಕ್ಕರ್ ತಯಾರಿಸುವ ಆಯ್ಕೆ ನೀಡಲಾಗಿದೆ. ಆದರೆ, ಇದು ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಿದ್ದರೆ ವಾಟ್ಸ್ಆ್ಯಪ್ ಅಪ್ಲಿಕೇಶನ್ನಲ್ಲಿ ಸ್ವಂತ ಸ್ಟಿಕ್ಕರ್ ತಯಾರಿಸುವುದು ಹೇಗೆ? ಇಲ್ಲಿದೆ ಮಾಹಿತಿ.
ವಾಟ್ಸ್ಆ್ಯಪ್ ಜಾಲತಾಣದಲ್ಲಿ ಸ್ಟಿಕ್ಕರ್ ತಯಾರಿಸಲು ಪ್ಲೇ-ಸ್ಟೋರ್ನಲ್ಲಿ ಲಭ್ಯವಾಗುವ ಬ್ಯಾಗ್ಗ್ರೌಂಡ್ ಎರೇಸ್ ಆ್ಯಪ್ ಅನ್ನು ಡೌನ್ಲೋಡ್ ಮಾಡಬೇಕು. ಬ್ಯಾಗ್ಗ್ರೌಂಡ್ ಆ್ಯಪ್ನಲ್ಲಿರುವ ಲೋಡ್ ಎ ಫೋಟೊ ಆಯ್ಕೆ ಮಾಡಿ ನಿಮ್ಮ ಅನುಕೂಲತೆಗೆ ತಕ್ಕಂತೆ ಫೋಟೊವನ್ನು ಎಡಿಟ್ ಮಾಡಿಕೊಂಡು ಸೇವ್ ಮಾಡಿ.
ಗೂಗಲ್ನಲ್ಲಿ ದೊರೆಯುವ ಮತ್ತೊಂದು ಅಪ್ಲಿಕೇಶನ್ ‘ಪರ್ಸನಲ್ ಸ್ಟಿಕ್ಕರ್ ಫಾರ್ ವಾಟ್ಸ್ ಆ್ಯಪ್’ ಡೌನ್ ಲೋಡ್ ಮಾಡಿಕೊಳ್ಳಿ. ಇದರ ಸಹಾಯದಿಂದ ಬ್ಯಾಕ್ಗ್ರೌಂಡ್ ಆ್ಯಪ್ನಲ್ಲಿ ಎಡಿಟ್ ಆದ ಫೋಟೊವನ್ನು ಪರ್ಸನಲ್ ಸ್ಟಿಕ್ಕರ್ ಆ್ಯಪ್ ಮೂಲಕ ವಾಟ್ಸ್ ಆ್ಯಫ್ಗೆ ಶೇರ್ ಮಾಡಿಕೊಳ್ಳಬಹುದು.