Shilpa Shetty: ಮಗಳ ಮೊದಲ ವಿಡಿಯೋ ಜೊತೆಗೆ ಗುಟ್ಟೊಂದನ್ನು ರಟ್ಟು ಮಾಡಿ ಶಿಲ್ಪಾ ಶೆಟ್ಟಿ..!
ಬಾಲಿವುಡ್ನ ಫಿಟ್ನೆಸ್ ಫ್ರೀಕ್ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುತ್ತಾರೆ. ನಿತ್ಯ ಒಂದಲ್ಲಾ ಒಂದು ವಿಡಿಯೋ ಅಥವಾ ಫಿಟ್ನೆಸ್ ಸಂಬಂಧಿತ ಪೋಸ್ಟ್ಗಳನ್ನು ಮಾಡುತ್ತಲೇ ಇರುತ್ತಾರೆ.
ನಿನ್ನೆಯಷ್ಟೆ ಶಿಲ್ಪಾ ಶೆಟ್ಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದೂ ಸಹ ಅವರ ಮಗಳ ವಿಡಿಯೋ. ಈ ಹಿಂದೆ ಮಗಳ ಜೊತೆ ಮೊದಲ ಚಿತ್ರವನ್ನು ಹಂಚಿಕೊಂಡಿದ್ದ ಶಿಲ್ಪಾ ಈಗ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಜೊತೆಗೆ ಅವರು ಒಂದು ಗುಟ್ಟನ್ನು ರಟ್ಟು ಮಾಡಿದ್ದಾರೆ. ಹೌದು, ಶಿಲ್ಪಾಶೆಟ್ಟಿಗೆ ನಂ 15 ತುಂಬಾ ಲಕ್ಕಿಯಂತೆ. ಅದು ಯಾವ ಕಾರಣಕ್ಕೆ ಗೊತ್ತಾ..? ಮಗಳು ಸಮಿಶಾ ಶೆಟ್ಟಿ ಹುಟ್ಟಿದೂ ಫೆ. 15ಕ್ಕೆ, ಏ. 15ಕ್ಕೆ ಅವಳಿಗೆ ಎರಡು ತಿಂಗಳು ತುಂಬಿದೆ ಹಾಗೂ ಏ.15ರಂದೇ ಟಿಕ್ಟಾಕ್ನಲ್ಲಿ ಶಿಲ್ಪಾಗೆ 15 ಮಿಲಿಯನ್ ಹಿಂಬಾಲಕರಾಗಿದ್ದಾರೆ.