ಮಾರುಕಟ್ಟೆಗೆ IPhone SE ಲಗ್ಗೆ ಇಟ್ಟ ಹಿನ್ನೆಲೆ; 8 ಸೀರಿಸ್ ಸ್ಥಗಿತಗೊಳಿಸಿದ ಆ್ಯಪಲ್!
ಆ್ಯಪಲ್ ಎಸ್ಇ (2020) ಅನ್ನು ಲಾಂಚ್ ಮಾಡಿದೆ. ಈ ಮೊಬೈಲ್ ದರ ಭಾರತದಲ್ಲಿ 42 ಸಾವಿರ ರೂಪಾಯಿ ಇದೆ. ಈ ಹಿನ್ನೆಲೆಯಲ್ಲಿ ಐಫೋನ್ ತನ್ನ 8 ಸೀರೀಸ್ಅನ್ನು ಸ್ಥಗಿತಗೊಳಿಸಲು ಮುಂದಾಗಿದೆ.
ಹೌದು, ಈಗಾಗಲೇ ಭಾರತದಲ್ಲಿ ಆ್ಯಪಲ್ ಎಸ್ಇ (2020) ಲಾಂಚ್ ಮಾಡಿದೆ. ಹೆಚ್ಚು ಫೀಚರ್ಗಳೊಂದಿಗೆ ಈ ಮೊಬೈಲ್ ಮಾರುಕಟ್ಟೆ ಪ್ರವೇಶಿಸಿದೆ. ಐಫೋನ್ 11ನಲ್ಲಿರುವ ಎ13 ಪ್ರೊಸೆಸರ್ ಈ ಮೊಬೈಲ್ಗೆ ನೀಡಲಾಗಿದೆ. ಹೀಗಾಗಿ ಮೊಬೈಲ್ ವೇಗವಾಗಿ ಕೆಲಸ ಮಾಡಲಿದೆ.
64 ಜಿಬಿ, 128 ಜಿಬಿ ಹಾಗೂ 256 ಜಿಬಿ ಇಂಟರ್ನಲ್ ಸ್ಟೋರೆಜ್ಗಳೊಂದಿಗೆ ಐಫೋನ್ ಎಸ್ಇ ಗ್ರಾಹಕರಿಗೆ ಲಭ್ಯವಿದೆ. ಮೊಬೈಲ್ ರ್ಯಾಮ್ ಬಗ್ಗೆ ಸಂಸ್ಥೆ ಅಧಿಕೃತ ಘೋಷಣೆ ಮಾಡಿಲ್ಲ. ಮೂಲಗಳ ಪ್ರಕಾರ 3 ಜಿಬಿ ರ್ಯಾಮ್ ಅನ್ನು ಎಸ್ಇ ಹೊಂದಿರಲಿದೆ ಎನ್ನಲಾಗಿದೆ.
ಗ್ರಾಹಕರು ಐಫೋನ್ ಎಸ್ಇ ಕೊಂಡುಕೊಳ್ಳಲು ಉತ್ಸುಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಐಫೋನ್-8 ಎಡಿಷನ್ ಅನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ. ಇನ್ನು, ಐಫೋನ್-8 ಪ್ಲಸ್ ಮಾರಾಟ ಸಂಪೂರ್ಣ ಸ್ಥಗಿತಗೊಳಿಸಿಲ್ಲ ಎನ್ನಲಾಗಿದೆ. ಹೀಗಾಗಿ ಕೆಲ ಅಂಗಡಿಗಳಲ್ಲಿ ಇನ್ನೂ ಐಫೋನ್ ಪ್ಲಸ್ ಮಾರಾಟಕ್ಕೆ ಲಭ್ಯವಿದೆ. ಈ ಮೊದಲು ಐಫೋನ್-11 ಬಂದಾಗ ಐಫೋನ್ 7 ಸೀರಿಸ್ ಮಾರಾಟ ನಿಲ್ಲಿಸಿತ್ತು.