ನೆಟ್ಟಿಗರ ಮನ ಗೆಲ್ಲುತ್ತಿವೆ ಮಹೇಶ್ ಬಾಬು ಮಗಳು ಸಿತಾರಾಳ ಮುದ್ದಾದ ಹಳೇ ವಿಡಿಯೋಗಳು..!
ಮಹೇಶ್ ಬಾಬು ಹಾಗೂ ನಮ್ರತಾ ಶಿರೋಡ್ಕರ್ ಮಗಳು ಸಿತಾರಾ ಲೈಮ್ಲೈಟ್ನಲ್ಲಿರುವ ಸ್ಟಾರ್ ಕಿಡ್. ತನ್ನದೇ ಆದ ಯೂಟ್ಯೂಬ್ ಚಾನಲ್ ಮೂಲಕ ಈಗಾಗಲೇ ಮನೆ ಮಾತಾಗಿದ್ದಾರೆ ಸಿತಾರಾ.
ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್ ಅವರ ಮಗಳೊಂದಿಗೆ ಸೇರಿ ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಸೆಲೆಬ್ರಿಟಿಗಳ ಸಂದರ್ಶನ ಮಾಡುತ್ತಾ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮಹೇಶ್ ಬಾಬು ಮಗಳ ಒಂದು ಫೋಟೋ ಅಥವಾ ವಿಡಿಯೋ ಪೋಸ್ಟ್ ಮಾಡಿದರೆ ಸಾಕು ಅದು ವೈರಲ್ ಆಗುತ್ತದೆ.