EBM News Kannada
Leading News Portal in Kannada

ಬ್ಯಾಟ್​ನಲ್ಲಿ ಕತ್ತಿವರಸೆ ಮಾಡಿದ್ದ ಜಡ್ಡು ರಿಯಲ್ ಆಗಿ ಮಾಡಿದ್ರೆ ಹೇಗಿರುತ್ತೆ?; ಇಲ್ಲಿದೆ ನೋಡಿ ವಿಡಿಯೋ

0

ಟೀಂ ಇಂಡಿಯಾ ಆಲ್​ರೌಂಡರ್ ರವೀಂದ್ರ ಜಡೇಜಾ ಮೈದಾನದಲ್ಲಿ ಅರ್ಧಶತಕ ಸಿಡಿಸಿದ ವೇಳೆ ಅವರು ಸಂಭ್ರಮಿಸುವ ಪರಿ ಎಲ್ಲರೂ ನೋಡಿರುತ್ತೀರಿ. ಬ್ಯಾಟ್ ಹಿಡಿದು ಕತ್ತಿ ಜಳಪಿಸುವಂತೆ ತಿರುಗಿಸಿ ವಿಶಿಷ್ಠವಾಗಿ ಸಂಭ್ರಮಾರಣೆ ಮಾಡುತ್ತಾರೆ.

ಇತ್ತೀಚೆಗಷ್ಟೆ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಜಡೇಜಾ ಅವರ ಈ ಶೈಲಿಯನ್ನು ಅನುಕರಿಸಿ ವಿಡಿಯೋ ಹಂಚಿಕೊಂಡಿದ್ದರು. ಇದಕ್ಕೆ ಜಡ್ಡು ಹಾಗೂ ವಿರಾಟ್ ಕೊಹ್ಲಿ ಕಮೆಂಟ್ ಕೂಡ ಮಾಡಿದ್ದರು.

ಸದ್ಯ ಜಡೇಜಾ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಇದರಲ್ಲಿ ನಿಜವಾದ ಕತ್ತಿಯನ್ನೇ ಕ್ಷತ್ರಿಯನಂತೆ ತಿರುಗಿಸಿ ಎಲ್ಲರ ಮನ ಗೆದ್ದಿದ್ದಾರೆ. ಈ ಕತ್ತಿ ಹೊಳಪನ್ನು ಕಳೆದುಕೊಂಡಿರುವಬಹುದು, ಆದರೆ ತನ್ನ ಮಾಸ್ಟರ್​​ಗೆ ಯಾವತ್ತಿಗೂ ನಿಮತ್ತಾಗಿ ಇರುತ್ತದೆ ಎಂದು ಬರೆದುಕೊಂಡಿದ್ದಾರೆ.

Leave A Reply

Your email address will not be published.