SBI 2020: ಕ್ಲರ್ಕ್ ಹುದ್ದೆಗಳ ಪ್ರಮುಖ ಪರೀಕ್ಷೆ ಮುಂದೂಡಿಕೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ಲರ್ಕ್ ಹುದ್ದೆಗಳ ನೇಮಕಾತಿಗಾಗಿ ಏಪ್ರಿಲ್ 19,2020ರಂದು ನಡೆಯಬೇಕಿದ್ದ ಆನ್ಲೈನ್ ಪ್ರಮುಖ ಪರೀಕ್ಷೆಯನ್ನು ಮುಂದೂಡಿದೆ. ದೇಶದೆಲ್ಲೆಡೆ ಕೋವಿಡ್-19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಎಸ್ಬಿಐ ತಿಳಿಸಿದೆ.
ಎಸ್ಬಿಐ ಪ್ರಿಲಿಮಿನರಿ ಪರೀಕ್ಷಾ ದಿನಾಂಕ ಮತ್ತು ಪ್ರಮುಖ ಆನ್ಲೈನ್ ಪರೀಕ್ಷಾ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಅದಕ್ಕಾಗಿ ಅಧಿಕೃತ ವೆಬ್ಸೈಟ್ https://www.sbi.co.in/web/careers ಅನ್ನು ಪರಿಶೀಲಿಸುತ್ತಿರಿ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಅಭ್ಯರ್ಥಿಗಳು ಪರೀಕ್ಷೆ ಮುಂದೂಡಲಾಗಿರುವ ಬಗೆಗೆ ಪ್ರಕಟಣೆಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ