2011ರ ಫೈನಲ್‌ನ ಫೈನಲ್ ಆ ಪ್ರಮುಖ ನಿರ್ಧಾರ ತೆಗದುಕೊಂಡಿದ್ದು ಧೋನಿಯಲ್ಲ!
ಮೊನ್ನೆಯಷ್ಟೇ ಟೀಮ್ ಇಂಡಿಯಾ ವಿಶ್ವಕಪ್ ಗೆಲುವಿಗೆ 9 ವರ್ಷವಾಯಿತು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಗೆಲುವಿಗೆ ಕಾರಣರಾದ ಎಲ್ಲಾ ಆಟಗಾರರನ್ನೂ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮತ್ತೊಮ್ಮೆ ಅಭಿನಂದಿಸಿ ಆನಂದಪಟ್ಟರು. ಟೀಮ್ ಇಂಡಿಯಾ ಕ್ರಿಕೆಟಿಗರು ಕೂಡ ಈ ಗೆಲುವಿನ ನೆನಪುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ 2011ರ ವಿಶ್ವಕಪ್‌ನ ಪ್ರಮುಖ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ. ಅಂದು ಐದನೇ ಕ್ರಮಾಂಕದಲ್ಲಿ ಧೋನಿ ಕಣಕ್ಕಿಳಿದ ಬಗ್ಗೆ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಆ ನಿರ್ಧಾರವನ್ನು ಧೋನಿಗೆ ಸೂಚಿಸಿದ್ದು ತಾನೇ ಎಂದು ಸಚಿನ್ ಹೇಳಿದ್ದಾರೆ. 2011ರ ವಿರ್ಶವಕಪ್ ಫೈನಲ್ ನಲ್ಲಿ ಟೀಮ್ ಇಂಡಿಯಾ ಮೂರನೇ ವಿಕೆಟ್ ಕಳೆದುಕೊಂಡಿತ್ತು. ಐದನೇ ಕ್ರಮಾಂಕದಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದ ಯುವರಾಜ್ ಸಿಂಗ್ ಕ್ರೀಸ್‌ಗೆ ಇಳಿಯಬೇಕಾಗಿತ್ತು. ಆದರೆ ಆ ಸಂದರ್ಭದಲ್ಲಿ ಸ್ವತಃ ಧೋನಿ ಕಣಕ್ಕಿಳಿಯಬೇಕು ಎಂದು ಸಚಿನ್ ತೆಂಡೂಲ್ಕರ್ ಧೋನಿಗೆ ಸೂಚನೆಯನ್ನು ನೀಡಿದ್ದರಂತೆ.
ಅಂತೆಯೇ ವಿರಾಟ್ ಕೊಹ್ಲಿ ಫೈನಲ್ ವಿಕೆಟ್ ನೀಡಿ ನಿರ್ಗಮಿಸಿದ ಸಂದರ್ಭದಲ್ಲಿ ಧೋನಿ ಕಣಕ್ಕಿಳಿದರು. ಗಂಭೀಊರ್ ಜೊತೆಗೆ ಅದ್ಭುತವಾಗಿ ಇನ್ನಿಂಗ್ಸ್ ಮುಂದುವರಿಸಿದ ಬಳಿಕ ಯುವರಾಜ್ ಜೊತೆಯಾದರು. ಅಂತಿಮವಾಗಿ ಈ ಪಂದ್ಯದಲ್ಲಿ ಧೋನಿ ಅಜೇಯ 91 ರನ್ ಗಳಿಸಿ ಗೆಲುವಿಗೆ ಮಹತ್ವದ ಕೊಡುಗೆಯನ್ನು ನೀಡಿದ್ದರು. ಈ ಅದ್ಭುತ ಆಟಕ್ಕೆ ಧೋನಿ ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ಪಡೆದುಕೊಂಡರು.