Revenue Department Recruitment 2020: 34 ಗ್ರಾಮಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ
ಹಾಸನ ಜಿಲ್ಲೆ ಕಂದಾಯ ಘಟಕದಲ್ಲಿ ಖಾಲಿ ಇರುವ 34 ಗ್ರಾಮಲೆಕ್ಕಿಗ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಧಿಯನ್ನು ವಿಸ್ತರಿಸಲಾಗಿದೆ. ಈ ಮುಂಚೆ ಅರ್ಜಿಗಳನ್ನು ಮಾರ್ಚ್ 31,2020 ರೊಳಗೆ ಆಹ್ವಾನಿಸಲಾಗಿತ್ತು ಹಾಗೂ ಶುಲ್ಕ ಪಾವತಿಸಲು ಏಪ್ರಿಲ್ 1,2020 ಕೊನೆಯ ದಿನವಾಗಿತ್ತು. ಆದರೆ ಇದೀಗ ಅವಧಿಯನ್ನು ಏಪ್ರಿಲ್ 30.2020ರ ವರೆಗೆ ವಿಸ್ತರಿಸಲಾಗಿದೆ. ಅರ್ಜಿ ಶುಲ್ಕ ಪಾವತಿಸಿ ಚಲನ್ ಅಪ್ ಲೋಡ್ ಮಾಡಲು ಮೇ 6,2020 ಕೊನೆಯ ದಿನವಾಗಿರುತ್ತದೆ. ಅಭ್ಯರ್ಥಿಗಳು ಅಧಿಕೃತ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ