EBM News Kannada
Leading News Portal in Kannada

ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಆಕಾಶ್ ದೀಪ್‌ಗೆ ಬ್ಯಾಟ್ ಉಡುಗೊರೆ ನೀಡಿದ ವಿರಾಟ್ ಕೊಹ್ಲಿ

0


ಹೊಸದಿಲ್ಲಿ : ಇಂಗ್ಲೆಂಡ್ ವಿರುದ್ಧ ಕಳೆದ ಫೆಬ್ರವರಿಯಲ್ಲಿ ನಡೆದ ಸ್ವದೇಶಿ ಸರಣಿಯ ವೇಳೆ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದ ಟೀಮ್ ಇಂಡಿಯಾದ ವೇಗದ ಬೌಲರ್ ಆಕಾಶ್ ದೀಪ್ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗಿಂತ ಮೊದಲು ಭಾರತದ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವರಿಂದ ಅಮೂಲ್ಯ ಉಡುಗೊರೆಯೊಂದನ್ನು ಸ್ವೀಕರಿಸಿದ್ದಾರೆ.

ಭಾರತದ ಮಾಜಿ ನಾಯಕ ಕೊಹ್ಲಿ ಅವರು ಆಕಾಶ್ ದೀಪ್‌ಗೆ ಬ್ಯಾಟ್‌ವೊಂದನ್ನು ಉಡುಗೊರೆಯಾಗಿ ನೀಡಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕಾಶ್ ದೀಪ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಥಾಂಕ್ಯೂ ಭಯ್ಯಾ, ವಿರಾಟ್ ಕೊಹ್ಲಿ ಎಂಬ ಶೀರ್ಷಿಕೆಯೊಂದಿಗೆ ಆಕಾಶ್ ಅವರು ತಮ್ಮ ವೃತ್ತಿಜೀವನದ ವಿಶೇಷ ಕ್ಷಣವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಮೈದಾನದ ಒಳಗೆ ಹಾಗೂ ಮೈದಾನದ ಹೊರಗೆ ತನ್ನ ನಾಯಕತ್ವದಿಂದ ಖ್ಯಾತಿ ಪಡೆದಿರುವ ಕೊಹ್ಲಿ ಈ ಹಿಂದೆ ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆಯರಿಗೆ ಬ್ಯಾಟ್‌ಗಳನ್ನು ಉಡುಗೊರೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಈ ಮೊದಲು ಯುವ ಬ್ಯಾಟರ್ ರಿಂಕು ಸಿಂಗ್ ಕೂಡ ಕೊಹ್ಲಿ ಅವರಿಂದ ಬ್ಯಾಟ್ ಸ್ವೀಕರಿಸಿದ್ದರು.

ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳದ ಪರ ಸ್ಥಿರ ಪ್ರದರ್ಶನ ನೀಡುವ ಮೂಲಕ ಆಕಾಶ್ ದೀಪ್ ಸುದ್ದಿಯಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಸರಣಿಗಾಗಿ ಭಾರತದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ದೇಶೀಯ ಕ್ರಿಕೆಟ್‌ನಿಂದ ರಾಷ್ಟ್ರೀಯ ತಂಡದವರೆಗಿನ ಆಕಾಶ್ ಯಶಸ್ಸಿನ ಪಯಣ ಗಮನೀಯವಾಗಿದೆ. 2022-23ರ ಋತುವಿನ ರಣಜಿ ಟ್ರೋಫಿಯಲ್ಲಿ ಬಂಗಾಳದ ಪರ 41 ವಿಕೆಟ್‌ಗಳನ್ನು ಪಡೆದು ಮೊದಲಿಗೆ ಎಲ್ಲರ ಗಮನ ತನ್ನತ್ತ ಸೆಳೆದಿದ್ದರು. ತನ್ನ ತಂಡ ಫೈನಲ್‌ಗೆ ತಲುಪುವಲ್ಲಿ ನೆರವಾಗಿದ್ದರು.

Leave A Reply

Your email address will not be published.