EBM News Kannada
Leading News Portal in Kannada

ಮಣಿಪುರ ಹಿಂಸಾಚಾರ| 40 ಮಂದಿಯ ಬಂಧನ; ಮುಂದುವರಿದ ಕರ್ಫ್ಯೂ, ಇಂಟರ್‌ನೆಟ್‌ ಸ್ಥಗಿತ

0


Photo: ANI

ಗುವಾಹಟಿ: ಪದೇ ಪದೇ ಎಚ್ಚರಿಕೆ ನೀಡಿದ ಹೊರತಾಗಿಯೂ ಕಳೆದ ಮೂರು ದಿನಗಳಿಂದ ಪ್ರಕ್ಷುಬ್ಧ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಏಳು ಮಂದಿ ಅಪ್ರಾಪ್ತರು ಸೇರಿದಂತೆ ಕನಿಷ್ಠ 40 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಬುಧವಾರ ರಾತ್ರಿ ರಾಜ್ಯದ ವಿವಿಧ ಭಾಗಗಳಿಂದ 33 ಮಂದಿ ಪ್ರತಿಭಟನಾಕಾರರನ್ನು ಸೆರೆ ಹಿಡಿಯಲಾಗಿದ್ದು, ಸೋಮವಾರ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದ 7 ಮಂದಿ ಅಪ್ರಾಪ್ತ ಯುವಕರನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪೈಕಿ ಬಹುತೇಕ ವಿದ್ಯಾರ್ಥಿಗಳು ಸೋಮವಾರ ಮತ್ತು ಮಂಗಳವಾರ ರಾಜಭವನದ ಮೇಲೆ ಕಲ್ಲು ತೂರಾಟ ನಡೆಸಿದ್ದರು ಎಂದು ವರದಿಯಾಗಿದೆ. ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಬುಧವಾರ ಗುವಾಹಟಿಗೆ ತೆರಳಿದ್ದಾರೆ. ಆಚಾರ್ಯ ಅಸ್ಸಾಂನ ರಾಜ್ಯಪಾಲರೂ ಆಗಿದ್ದಾರೆ.

Leave A Reply

Your email address will not be published.