EBM News Kannada
Leading News Portal in Kannada

‘ಸುಮ್ಮನಿರಿ.. 2 ಮಕ್ಕಳ ತಾಯಿ ಅವರು’: ನಯನತಾರಾ ಮೇಲೆ ಲವ್​ ಆಯ್ತಾ ಅಂತ ಕೇಳಿದ್ದಕ್ಕೆ ಶಾರುಖ್​ ಉತ್ತರ – Kannada News | Did Shah Rukh Khan fall in love with Nayanthara after working with Jawan movie

0


Nayanthara: ಸಿನಿಮಾದಲ್ಲಿ ಒಟ್ಟಿಗೆ ನಟಿಸಿದಾಗ ಆ ಕಲಾವಿದರ ನಡುವೆ ಆಪ್ತತೆ ಹೆಚ್ಚುತ್ತದೆ. ಕೆಲವರಿಗೆ ಪ್ರೀತಿ ಚಿಗುರುತ್ತದೆ. ‘ಜವಾನ್​’ ಸಿನಿಮಾದಲ್ಲಿ ತೆರೆ ಹಂಚಿಕೊಂಡಿರುವ ನಯನತಾರಾ ಮತ್ತು ಶಾರುಖ್​ ಖಾನ್​ ನಡುವೆ ಅಂಥ ಪ್ರೀತಿ ಹುಟ್ಟಿಕೊಂಡಿದೆಯೇ ಎಂಬ ಗುಮಾನಿ ಕೆಲವರಿಗೆ ಇದೆ.

‘ಸುಮ್ಮನಿರಿ.. 2 ಮಕ್ಕಳ ತಾಯಿ ಅವರು’: ನಯನತಾರಾ ಮೇಲೆ ಲವ್​ ಆಯ್ತಾ ಅಂತ ಕೇಳಿದ್ದಕ್ಕೆ ಶಾರುಖ್​ ಉತ್ತರ

ಶಾರುಖ್​ ಖಾನ್​, ನಯನತಾರಾ

ನಟ ಶಾರುಖ್​ ಖಾನ್​ (Shah Rukh Khan) ಅವರು ಇತ್ತೀಚೆಗೆ ಅಭಿಮಾನಿಗಳಿಗಾಗಿ ಒಂದಷ್ಟು ಸಮಯ ಮೀಸಲಿಡುತ್ತಿದ್ದಾರೆ. ಎಷ್ಟೇ ದೊಡ್ಡ ಸ್ಟಾರ್​ ಆಗಿದ್ದರೂ ಕೂಡ ಅವರು ಅಭಿಮಾನಿಗಳನ್ನು ಮರೆತಿಲ್ಲ. ಸಾಧ್ಯವಾದಾಗಲೆಲ್ಲ ಸೋಶಿಯಲ್​ ಮೀಡಿಯಾ ಮೂಲಕ ಫ್ಯಾನ್ಸ್​ ಜೊತೆ ಪ್ರಶ್ನೋತ್ತರ ನಡೆಸುತ್ತಾರೆ. ಆಗ ಅವರಿಗೆ ಬಗೆಬಗೆಯ ಪ್ರಶ್ನೆಗಳು ಎದುರಾಗುತ್ತವೆ. ಅವುಗಳಿಗೆ ಶಾರುಖ್​ ಖಾನ್​ ಅವರು ತಮ್ಮದೇ ಆದ ರೀತಿಯಲ್ಲಿ ಉತ್ತರ ನೀಡುತ್ತಾರೆ. ಇತ್ತೀಚೆಗೆ ಅಭಿಮಾನಿಯೊಬ್ಬರು ಒಂದು ವಿಚಿತ್ರ ಪ್ರಶ್ನೆ ಹೇಳಿದ್ದಾರೆ. ನಯನತಾರಾ (Nayanthara) ಜೊತೆ ಶಾರುಖ್​ ಖಾನ್​ಗೆ ಲವ್​ ಆಗಿದೆಯೇ ಎಂದು ನೇರವಾಗಿ ಕೇಳಲಾಯಿತು. ಆ ಪ್ರಶ್ನೆಯನ್ನು ಶಾರುಖ್​ ಖಾನ್​ ಅವರು ಕೂಡಲೇ ತಳ್ಳಿಹಾಕಿದ್ದಾರೆ. ಸದ್ಯಕ್ಕೆ ಈ ಟ್ವೀಟ್​ ವೈರಲ್​ ಆಗಿದೆ. ‘ಜವಾನ್​’ (Jawan) ಸಿನಿಮಾದಲ್ಲಿ ಶಾರುಖ್​ ಖಾನ್​ ಮತ್ತು ನಯನತಾರಾ ಅವರು ಜೊತೆಯಾಗಿ ನಟಿಸಿದ್ದಾರೆ.

ಯಾವುದೇ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದಾಗ ಆ ಕಲಾವಿದರ ನಡುವೆ ಆಪ್ತತೆ ಹೆಚ್ಚುತ್ತದೆ. ಕೆಲವರಿಗೆ ಪ್ರೀತಿ ಚಿಗುರುತ್ತದೆ. ‘ಜವಾನ್​’ ಸಿನಿಮಾದಲ್ಲಿ ತೆರೆ ಹಂಚಿಕೊಂಡಿರುವ ನಯನತಾರಾ ಮತ್ತು ಶಾರುಖ್​ ಖಾನ್​ ನಡುವೆ ಅಂಥ ಪ್ರೀತಿ ಹುಟ್ಟಿಕೊಂಡಿದೆಯೇ ಎಂಬ ಗುಮಾನಿ ಕೆಲವರಿಗೆ ಇದೆ. ಆ ಬಗ್ಗೆ ಟ್ವಿಟರ್​ ಮೂಲಕ ನೇರವಾಗಿ ಪ್ರಶ್ನೆ ಕೇಳಲಾಯಿತು. ‘ನಯನತಾರಾ ಮೇಡಂ ಮೇಲೆ ನಿಮಗೆ ಪ್ರೀತಿ ಆಗಿದೆಯೋ ಅಥವಾ ಇಲ್ಲವೋ’ ಎಂದು ನೆಟ್ಟಿಗರೊಬ್ಬರು ಕೇಳಿದ್ದಾರೆ. ‘ಸುಮ್ಮನಿರಿ. ಅವರು 2 ಮಕ್ಕಳ ತಾಯಿ’ ಎಂದು ಶಾರುಖ್​ ಖಾನ್​ ಉತ್ತರಿಸಿದ್ದಾರೆ.

ಎಲ್ಲ ರೀತಿಯ ಪಾತ್ರಗಳನ್ನು ಮಾಡುವ ಮೂಲಕ ನಯನತಾರಾ ಅವರು ಜನರನ್ನು ರಂಜಿಸಿದ್ದಾರೆ. ‘ಜವಾನ್​’ ಸಿನಿಮಾದಲ್ಲಿ ಅವರಿಗೆ ಖಡಕ್​ ಆದಂತಹ ಪಾತ್ರ ಇದೆ ಎಂಬುದಕ್ಕೆ ಪ್ರಿವ್ಯೂ ವಿಡಿಯೋದಲ್ಲಿ ಸುಳಿವು ಸಿಕ್ಕಿದೆ. ಈ ಸಿನಿಮಾದ ಶೂಟಿಂಗ್​ ನಡೆಯುತ್ತಿರುವಾಗಲೇ ನಯನತಾರಾ ಅವರು ಬ್ರೇಕ್​ ತೆಗೆದುಕೊಂಡು ವಿಘ್ನೇಶ್​ ಶಿವನ್​ ಜೊತೆ ಮದುವೆ ಆಗಿದ್ದರು. ಆ ಶುಭದಿನಕ್ಕೆ ಶಾರುಖ್​ ಖಾನ್​ ಕೂಡ ಸಾಕ್ಷಿ ಆಗಿದ್ದರು. ಈ ಸಿನಿಮಾ ಮೂಲಕ ಇಬ್ಬರ ನಡುವೆ ಉತ್ತಮವಾದ ಒಡನಾಟ ಬೆಳೆದಿದೆ.

ಅಟ್ಲಿ ನಿರ್ದೇಶನದ ‘ಜವಾನ್​’ ಸಿನಿಮಾ ಸೆಪ್ಟೆಂಬರ್​ 7ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಮತ್ತು ನಯನತಾರಾ ಜೊತೆ ದೀಪಿಕಾ ಪಡುಕೋಣೆ, ವಿಜಯ್​ ಸೇತುಪತಿ ಮುಂತಾದವರು ಕೂಡ ನಟಿಸಿದ್ದಾರೆ. ಶಾರುಖ್​ ಖಾನ್​ ಅವರ ಪಾತ್ರಕ್ಕೆ ಹಲವು ಶೇಡ್ಸ್ ಇರಲಿವೆ. ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ. ಈಗಾಗಲೇ ಹಾಡು ಮತ್ತು ಪೋಸ್ಟರ್​ಗಳು ಹವಾ ಕ್ರಿಯೇಟ್​ ಮಾಡಿವೆ. ಈ ಸಿನಿಮಾದ ಬಾಕ್ಸ್​ ಆಫೀಸ್​ ಗಳಿಕೆ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ



Leave A Reply

Your email address will not be published.