‘ಸುಮ್ಮನಿರಿ.. 2 ಮಕ್ಕಳ ತಾಯಿ ಅವರು’: ನಯನತಾರಾ ಮೇಲೆ ಲವ್ ಆಯ್ತಾ ಅಂತ ಕೇಳಿದ್ದಕ್ಕೆ ಶಾರುಖ್ ಉತ್ತರ – Kannada News | Did Shah Rukh Khan fall in love with Nayanthara after working with Jawan movie
Nayanthara: ಸಿನಿಮಾದಲ್ಲಿ ಒಟ್ಟಿಗೆ ನಟಿಸಿದಾಗ ಆ ಕಲಾವಿದರ ನಡುವೆ ಆಪ್ತತೆ ಹೆಚ್ಚುತ್ತದೆ. ಕೆಲವರಿಗೆ ಪ್ರೀತಿ ಚಿಗುರುತ್ತದೆ. ‘ಜವಾನ್’ ಸಿನಿಮಾದಲ್ಲಿ ತೆರೆ ಹಂಚಿಕೊಂಡಿರುವ ನಯನತಾರಾ ಮತ್ತು ಶಾರುಖ್ ಖಾನ್ ನಡುವೆ ಅಂಥ ಪ್ರೀತಿ ಹುಟ್ಟಿಕೊಂಡಿದೆಯೇ ಎಂಬ ಗುಮಾನಿ ಕೆಲವರಿಗೆ ಇದೆ.

ಶಾರುಖ್ ಖಾನ್, ನಯನತಾರಾ
ನಟ ಶಾರುಖ್ ಖಾನ್ (Shah Rukh Khan) ಅವರು ಇತ್ತೀಚೆಗೆ ಅಭಿಮಾನಿಗಳಿಗಾಗಿ ಒಂದಷ್ಟು ಸಮಯ ಮೀಸಲಿಡುತ್ತಿದ್ದಾರೆ. ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ಕೂಡ ಅವರು ಅಭಿಮಾನಿಗಳನ್ನು ಮರೆತಿಲ್ಲ. ಸಾಧ್ಯವಾದಾಗಲೆಲ್ಲ ಸೋಶಿಯಲ್ ಮೀಡಿಯಾ ಮೂಲಕ ಫ್ಯಾನ್ಸ್ ಜೊತೆ ಪ್ರಶ್ನೋತ್ತರ ನಡೆಸುತ್ತಾರೆ. ಆಗ ಅವರಿಗೆ ಬಗೆಬಗೆಯ ಪ್ರಶ್ನೆಗಳು ಎದುರಾಗುತ್ತವೆ. ಅವುಗಳಿಗೆ ಶಾರುಖ್ ಖಾನ್ ಅವರು ತಮ್ಮದೇ ಆದ ರೀತಿಯಲ್ಲಿ ಉತ್ತರ ನೀಡುತ್ತಾರೆ. ಇತ್ತೀಚೆಗೆ ಅಭಿಮಾನಿಯೊಬ್ಬರು ಒಂದು ವಿಚಿತ್ರ ಪ್ರಶ್ನೆ ಹೇಳಿದ್ದಾರೆ. ನಯನತಾರಾ (Nayanthara) ಜೊತೆ ಶಾರುಖ್ ಖಾನ್ಗೆ ಲವ್ ಆಗಿದೆಯೇ ಎಂದು ನೇರವಾಗಿ ಕೇಳಲಾಯಿತು. ಆ ಪ್ರಶ್ನೆಯನ್ನು ಶಾರುಖ್ ಖಾನ್ ಅವರು ಕೂಡಲೇ ತಳ್ಳಿಹಾಕಿದ್ದಾರೆ. ಸದ್ಯಕ್ಕೆ ಈ ಟ್ವೀಟ್ ವೈರಲ್ ಆಗಿದೆ. ‘ಜವಾನ್’ (Jawan) ಸಿನಿಮಾದಲ್ಲಿ ಶಾರುಖ್ ಖಾನ್ ಮತ್ತು ನಯನತಾರಾ ಅವರು ಜೊತೆಯಾಗಿ ನಟಿಸಿದ್ದಾರೆ.
ಯಾವುದೇ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದಾಗ ಆ ಕಲಾವಿದರ ನಡುವೆ ಆಪ್ತತೆ ಹೆಚ್ಚುತ್ತದೆ. ಕೆಲವರಿಗೆ ಪ್ರೀತಿ ಚಿಗುರುತ್ತದೆ. ‘ಜವಾನ್’ ಸಿನಿಮಾದಲ್ಲಿ ತೆರೆ ಹಂಚಿಕೊಂಡಿರುವ ನಯನತಾರಾ ಮತ್ತು ಶಾರುಖ್ ಖಾನ್ ನಡುವೆ ಅಂಥ ಪ್ರೀತಿ ಹುಟ್ಟಿಕೊಂಡಿದೆಯೇ ಎಂಬ ಗುಮಾನಿ ಕೆಲವರಿಗೆ ಇದೆ. ಆ ಬಗ್ಗೆ ಟ್ವಿಟರ್ ಮೂಲಕ ನೇರವಾಗಿ ಪ್ರಶ್ನೆ ಕೇಳಲಾಯಿತು. ‘ನಯನತಾರಾ ಮೇಡಂ ಮೇಲೆ ನಿಮಗೆ ಪ್ರೀತಿ ಆಗಿದೆಯೋ ಅಥವಾ ಇಲ್ಲವೋ’ ಎಂದು ನೆಟ್ಟಿಗರೊಬ್ಬರು ಕೇಳಿದ್ದಾರೆ. ‘ಸುಮ್ಮನಿರಿ. ಅವರು 2 ಮಕ್ಕಳ ತಾಯಿ’ ಎಂದು ಶಾರುಖ್ ಖಾನ್ ಉತ್ತರಿಸಿದ್ದಾರೆ.
Chup karo! Doh bacchon ki maa hain woh!! Ha ha. #Jawan https://t.co/A9dujnaFCW
— Shah Rukh Khan (@iamsrk) August 10, 2023
ಎಲ್ಲ ರೀತಿಯ ಪಾತ್ರಗಳನ್ನು ಮಾಡುವ ಮೂಲಕ ನಯನತಾರಾ ಅವರು ಜನರನ್ನು ರಂಜಿಸಿದ್ದಾರೆ. ‘ಜವಾನ್’ ಸಿನಿಮಾದಲ್ಲಿ ಅವರಿಗೆ ಖಡಕ್ ಆದಂತಹ ಪಾತ್ರ ಇದೆ ಎಂಬುದಕ್ಕೆ ಪ್ರಿವ್ಯೂ ವಿಡಿಯೋದಲ್ಲಿ ಸುಳಿವು ಸಿಕ್ಕಿದೆ. ಈ ಸಿನಿಮಾದ ಶೂಟಿಂಗ್ ನಡೆಯುತ್ತಿರುವಾಗಲೇ ನಯನತಾರಾ ಅವರು ಬ್ರೇಕ್ ತೆಗೆದುಕೊಂಡು ವಿಘ್ನೇಶ್ ಶಿವನ್ ಜೊತೆ ಮದುವೆ ಆಗಿದ್ದರು. ಆ ಶುಭದಿನಕ್ಕೆ ಶಾರುಖ್ ಖಾನ್ ಕೂಡ ಸಾಕ್ಷಿ ಆಗಿದ್ದರು. ಈ ಸಿನಿಮಾ ಮೂಲಕ ಇಬ್ಬರ ನಡುವೆ ಉತ್ತಮವಾದ ಒಡನಾಟ ಬೆಳೆದಿದೆ.
ಅಟ್ಲಿ ನಿರ್ದೇಶನದ ‘ಜವಾನ್’ ಸಿನಿಮಾ ಸೆಪ್ಟೆಂಬರ್ 7ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಮತ್ತು ನಯನತಾರಾ ಜೊತೆ ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ ಮುಂತಾದವರು ಕೂಡ ನಟಿಸಿದ್ದಾರೆ. ಶಾರುಖ್ ಖಾನ್ ಅವರ ಪಾತ್ರಕ್ಕೆ ಹಲವು ಶೇಡ್ಸ್ ಇರಲಿವೆ. ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ. ಈಗಾಗಲೇ ಹಾಡು ಮತ್ತು ಪೋಸ್ಟರ್ಗಳು ಹವಾ ಕ್ರಿಯೇಟ್ ಮಾಡಿವೆ. ಈ ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.