ವಿಲನ್ ಪಾತ್ರಕ್ಕೆ ಸಹಿ ಹಾಕಿದ್ರಾ ಕಿಯಾರಾ? ‘ಡಾನ್ 3’ ಚಿತ್ರದಲ್ಲಿ ವಿಶೇಷ ರೋಲ್ – Kannada News | Kiara Advani To Do A Negative Character In Ranveer Singh Upcoming Movie Don 3
ಪ್ರಿಯಾಂಕಾ ಚೋಪ್ರಾ ಅವರು ಸದ್ಯ ಹಾಲಿವುಡ್ನಲ್ಲಿ ಸೆಟಲ್ ಆಗಿದ್ದಾರೆ. ಅವರು ಸದ್ಯಕ್ಕಂತೂ ಬಾಲಿವುಡ್ಗೆ ಮರಳುವುದು ಅನುಮಾನವೇ. ಹೀಗಾಗಿ, ಅವರು ಮಾಡಿದ್ದ ರೋಮಾ ಪಾತ್ರಕ್ಕೆ ಮತ್ತೊಬ್ಬರ ಆಯ್ಕೆ ನಡೆಯಬೇಕಿದೆ. ಈಗ ಕಿಯಾರಾ ಮಾಡುತ್ತಿರುವುದು ರೋಮಾ ಪಾತ್ರ ಅಲ್ಲ ಎನ್ನಲಾಗುತ್ತಿದೆ.
ನಟಿ ಕಿಯಾರಾ ಅಡ್ವಾಣಿ (Kiara Advani) ಅವರು ಬಾಲಿವುಡ್ನಲ್ಲಿ ಸಖತ್ ಬೇಡಿಕೆ ಹೊಂದಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲಿಕೆ ಆಗುತ್ತದೆ. ಈಗ ಕಿಯಾರಾ ಅವರು ‘ಡಾನ್ 3’ (Don 3 Movie) ಚಿತ್ರದಲ್ಲಿ ನಟಿಸೋಕೆ ರೆಡಿ ಆಗಿದ್ದಾರೆ ಎಂದು ವರದಿ ಆಗಿದೆ. ಈ ಚಿತ್ರದಲ್ಲಿ ಅವರು ಮಾಡ್ತಿರೋದು ನೆಗೆಟಿವ್ ಶೇಡ್ನ ಪಾತ್ರ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಕಿಯಾರಾ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇಷ್ಟು ದಿನ ಗ್ಲಾಮರ್ ಪಾತ್ರಗಳ ಮೂಲಕ ಗಮನ ಸೆಳೆದ ಅವರು ನೆಗೆಟಿವ್ ರೋಲ್ನ ಹೇಗೆ ನಿರ್ವಹಿಸುತ್ತಾರೆ ಎಂದು ಕಾದು ನೋಡಬೇಕಿದೆ.
‘ಡಾನ್ 2’ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಪೊಲೀಸ್ ಪಾತ್ರ ಮಾಡಿದರೆ ಶಾರುಖ್ ಖಾನ್ ಅವರು ಡಾನ್ ಪಾತ್ರದಲ್ಲಿ ಗಮನ ಸೆಳೆದಿದ್ದರು. ‘ಡಾನ್ 3’ ಚಿತ್ರದಲ್ಲಿ ಪಾತ್ರವರ್ಗ ಬದಲಾಗುತ್ತಿದೆ. ಶಾರುಖ್ ಖಾನ್ ಬದಲು ರಣವೀರ್ ಸಿಂಗ್ಗೆ ಮಣೆ ಹಾಕಲಾಗಿದೆ. ಈ ಚಿತ್ರದಲ್ಲಿ ಕಿಯಾರಾಗೆ ಪ್ರಮುಖ ಪಾತ್ರವೊಂದನ್ನು ನೀಡಲಾಗುತ್ತಿದೆ ಎನ್ನುತ್ತಿವೆ ಮೂಲಗಳು.
ಪ್ರಿಯಾಂಕಾ ಚೋಪ್ರಾ ಅವರು ಸದ್ಯ ಹಾಲಿವುಡ್ನಲ್ಲಿ ಸೆಟಲ್ ಆಗಿದ್ದಾರೆ. ಅವರು ಸದ್ಯಕ್ಕಂತೂ ಬಾಲಿವುಡ್ಗೆ ಮರಳುವುದು ಅನುಮಾನವೇ. ಹೀಗಾಗಿ, ಅವರು ಮಾಡಿದ್ದ ರೋಮಾ ಪಾತ್ರಕ್ಕೆ ಮತ್ತೊಬ್ಬರ ಆಯ್ಕೆ ನಡೆಯಬೇಕಿದೆ. ಈಗ ಕಿಯಾರಾ ಮಾಡುತ್ತಿರುವುದು ರೋಮಾ ಪಾತ್ರ ಅಲ್ಲ ಎನ್ನಲಾಗುತ್ತಿದೆ. ಈ ಎಲ್ಲಾ ವಿಚಾರಗಳಿಗೆ ಚಿತ್ರತಂಡದಿಂದಲೇ ಸ್ಪಷ್ಟನೆ ಸಿಗಬೇಕಿದೆ.
ಕಿಯಾರಾ ಅಡ್ವಾಣಿ ಅವರು ಗ್ಲಾಮರ್ ಲುಕ್ನಲ್ಲಿ ಪಡ್ಡೆಗಳ ಗಮನ ಸೆಳೆದವರು. ಅವರು ವಿಲನ್ ರೀತಿಯ ಪಾತ್ರಗಳನ್ನು ಈವರೆಗೆ ನಿರ್ವಹಿಸಿಲ್ಲ. ಹೀಗಾಗಿ, ಅವರು ಈ ಪಾತ್ರ ಒಪ್ಪಿಕೊಂಡಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಸೃಷ್ಟಿ ಆಗಿದೆ. ಅವರು ಈ ಚಿತ್ರದ ಮೂಲಕ ಹೊಸ ರೀತಿಯಲ್ಲಿ ಪ್ರೇಕ್ಷಕರ ಎದುರು ಬರಲು ರೆಡಿ ಆಗುತ್ತಿದ್ದಾರೆ ಎನ್ನಲಾಗುತ್ತಿದೆ.
‘ಡಾನ್ 3’ ಚಿತ್ರದಿಂದ ಶಾರುಖ್ ಖಾನ್ ಹೊರನಡೆದಿದ್ದಾರೆ ಎಂಬ ವಿಚಾರ ಈ ಮೊದಲೇ ವರದಿ ಆಗಿತ್ತು. ಆದರೆ, ಇದನ್ನು ಚಿತ್ರತಂಡದವರು ಅಧಿಕೃತ ಮಾಡಿರಲಿಲ್ಲ. ಇತ್ತೀಚೆಗೆ ಹೊಸ ವಿಡಿಯೋ ಹಂಚಿಕೊಂಡು ಈ ವಿಚಾರವನ್ನು ಖಚಿತಪಡಿಸಲಾಗಿದೆ. ಶಾರುಖ್ ಖಾನ್ ಜಾಗಕ್ಕೆ ರಣವೀರ್ ಸಿಂಗ ಅವರನ್ನು ಕರೆತರಲಾಗಿದೆ. ‘ಡಾನ್’ ಹಾಗೂ ‘ಡಾನ್ 2’ ಚಿತ್ರಗಳನ್ನು ನಿರ್ದೇಶಿಸಿ ಫೇಮಸ್ ಆಗಿದ್ದಾರೆ. ಅವರು ಮೂರನೇ ಪಾರ್ಟ್ಗೂ ನಿರ್ದೇಶನ ಮಾಡಲಿದ್ದಾರೆ. ಶಾರುಖ್ ಖಾನ್ ಇಲ್ಲದ ‘ಡಾನ್’ ಸರಣಿಯನ್ನು ಅಭಿಮಾನಿಗಳು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಸದ್ಯ ಅಭಿಮಾನಿಗಳಲ್ಲಿದೆ.
2014ರಲ್ಲಿ ರಿಲೀಸ್ ಆದ ‘ಫಗ್ಲಿ’ ಚಿತ್ರದ ಮೂಲಕ ಕಿಯಾರಾ ಬಣ್ಣದ ಬದುಕು ಆರಂಭಿಸಿದರು. 9 ವರ್ಷಗಳಲ್ಲಿ ಅವರು ಸಾಕಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ಗಳನ್ನು ನೀಡಿದ್ದಾರೆ. ಅವರ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಶಂಕರ್ ನಿರ್ದೇಶನದ ಈ ಚಿತ್ರಕ್ಕೆ ರಾಮ್ ಚರಣ್ ಹೀರೋ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ