EBM News Kannada
Leading News Portal in Kannada

ನೀವು ಜನರಿಗೆ ಬರೀ ಕನಸು ತೋರಿಸುತ್ತೀರಿ, ನಾವು ಅವರ ನನಸು ಮಾಡುತ್ತೇವೆ: ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ – Kannada News | Parliament No Confidence Motion You show dreams to people we make them reality says Nirmala Sitharaman

0


Parliament No-Confidence Motion: ಬಿಜೆಪಿ ಸರ್ಕಾರದ ಅಡಿಯಲ್ಲಿ ಆರ್ಥಿಕ ಬೆಳವಣಿಗೆ ಮತ್ತು “ಆಡಳಿತದ ರೂಪಾಂತರ” ವನ್ನು ಹೈಲೈಟ್ ಮಾಡಿದ ನಿರ್ಮಲಾ, ಪರಿವರ್ತನೆ ಎಂಬುದು ಜನರಿಗೆ ತಲುಪಿಸುವ ಮೂಲಕ ಬರುತ್ತದೆ. ಮಾತಿನ ಮೂಲಕ ಅಲ್ಲ. ನೀವು ಜನರಿಗೆ ಕನಸುಗಳನ್ನು ತೋರಿಸುತ್ತೀರಿ. ಅವರ ಕನಸುಗಳನ್ನು ನಾವು ನನಸು ಮಾಡುತ್ತೇವೆ.ನಾವು ಎಲ್ಲರನ್ನೂ ಸಬಲೀಕರಣಗೊಳಿಸುವುದರಲ್ಲಿ ನಂಬಿಕೆ ಇರಿಸಿದ್ದೇವೆ, ಮೆಚ್ಚಿಸುವ ಕಾರ್ಯದಲ್ಲಿ ಅಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಿರ್ಮಲಾ ಸೀತಾರಾಮನ್

ದೆಹಲಿ ಆಗಸ್ಟ್ 10: ಕೇಂದ್ರದ ವಿರುದ್ಧದ ಅವಿಶ್ವಾಸ ನಿರ್ಣಯದ (No-Confidence Motion) ಮೇಲಿನ ಚರ್ಚೆಯ ಮೂರನೇ ದಿನದ ಚರ್ಚೆಗೆ ಚಾಲನೆ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman), ವಿಪಕ್ಷಗಳುವಂಶಾಡಳಿತ ರಾಜಕೀಯ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ(BJP) ಸರ್ಕಾರದ ಅಡಿಯಲ್ಲಿ ಆರ್ಥಿಕ ಬೆಳವಣಿಗೆ ಮತ್ತು “ಆಡಳಿತದ ರೂಪಾಂತರ” ವನ್ನು ಹೈಲೈಟ್ ಮಾಡಿದ ನಿರ್ಮಲಾ, ಪರಿವರ್ತನೆ ಎಂಬುದು ಜನರಿಗೆ ತಲುಪಿಸುವ ಮೂಲಕ ಬರುತ್ತದೆ. ಮಾತಿನ ಮೂಲಕ ಅಲ್ಲ. ನೀವು ಜನರಿಗೆ ಕನಸುಗಳನ್ನು ತೋರಿಸುತ್ತೀರಿ. ಅವರ ಕನಸುಗಳನ್ನು ನಾವು ನನಸು ಮಾಡುತ್ತೇವೆ.ನಾವು ಎಲ್ಲರನ್ನೂ ಸಬಲೀಕರಣಗೊಳಿಸುವುದರಲ್ಲಿ ನಂಬಿಕೆ ಇರಿಸಿದ್ದೇವೆ, ಮೆಚ್ಚಿಸುವ ಕಾರ್ಯದಲ್ಲಿ ಅಲ್ಲ ಎಂದು ಹೇಳಿದ್ದಾರೆ.

ಗುರುವಾರ ಬೆಳಗ್ಗೆ ಕಲಾಪ ಆರಂಭಗೊಂಡಿದ್ದು, ವಿರೋಧ ಪಕ್ಷದ ಸಂಸದರ ಘೋಷಣೆಗಳು ಉಭಯ ಸದನಗಳನ್ನು ಮುಂದೂಡಲು ಕಾರಣವಾಯಿತು. ಮಣಿಪುರದ ಹಿಂಸಾಚಾರದ ಕುರಿತು ಚರ್ಚೆ ನಡೆಸುವ ನಿಯಮದ ಕುರಿತು ರಾಜ್ಯಸಭೆಯಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ ತರ್ಕವುಂಟಾಗಿದೆ. ಗದ್ದಲದ ನಡುವೆಯೇ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿಗೆ ಬರಲು ಸಾಧ್ಯವಿಲ್ಲದ ದೇವರೇ?ಎಂದು ಪ್ರಶ್ನಿಸಿದರು. ಮೇಲ್ಮನೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)

Published On – 1:44 pm, Thu, 10 August 23

ತಾಜಾ ಸುದ್ದಿ

Leave A Reply

Your email address will not be published.