EBM News Kannada
Leading News Portal in Kannada

‘ಪ್ರಾಜೆಕ್ಟ್ ಕೆ’ ಚಿತ್ರಕ್ಕೆ ಮತ್ತೆ ಶುರುವಾಯ್ತು ಶೂಟಿಂಗ್; ಭರ್ಜರಿ ಸೆಟ್ ಹಾಕಿ ಚಿತ್ರೀಕರಣ – Kannada News | Kalki 2898 AD Movie Resume it is Shooting In Hyderabad Prabhas and Deepika Padukone Participate

0


‘ಆದಿಪುರುಷ್’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಪ್ರಭಾಸ್ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 50 ದಿನ ಅವರು ಅಮೆರಿಕದಲ್ಲಿಯೇ ಇದ್ದರು. ಈಗ ಅವರು ಭಾರತಕ್ಕೆ ಮರಳಿದ್ದಾರೆ. ಇಲ್ಲಿಗೆ ಆಗಮಿಸಿದ ಬಳಿಕ ಅವರು ಕೆಲ ದಿನ ರೆಸ್ಟ್ ಮಾಡಿದ್ದರು. ಈಗ ಪ್ರಭಾಸ್ ಶೂಟಿಂಗ್​ಗೆ ಮರಳಿದ್ದಾರೆ.

ನಟ ಪ್ರಭಾಸ್ (Prabhas) ಸಾಲು ಸಾಲಾಗಿ ಸಿನಿಮಾ ಮಾಡುತ್ತಿದ್ದಾರೆ. ‘ಬಾಹುಬಲಿ 2’ ಬಳಿಕ ಅವರ ಆಯ್ಕೆ ಬದಲಾಗಿದೆ. ಕೇವಲ ಪ್ಯಾನ್ ಇಂಡಿಯಾ ಚಿತ್ರಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಬಿಗ್ ಬಜೆಟ್ ಸಿನಿಮಾಗಳ ಪಟ್ಟಿ ದೊಡ್ಡದಿದೆ. ಪ್ರಭಾಸ್ ಇಷ್ಟು ದಿನ ‘ಸಲಾರ್’ ಸಿನಿಮಾದ ಶೂಟಿಂಗ್​​ನಲ್ಲಿ ಬ್ಯುಸಿಯಾಗಿದ್ದರು. ಇದರ ಜೊತೆ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಮತ್ತೆ ಆರಂಭ ಆಗಿದೆ. ಈ ಚಿತ್ರದ ಗ್ಲಿಂಪ್ಸ್ ಕೂಡ ಇತ್ತೀಚೆಗೆ ಬಿಡುಗಡೆಯಾಗಿದೆ.

‘ಆದಿಪುರುಷ್’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಪ್ರಭಾಸ್ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 50 ದಿನ ಅವರು ಅಮೆರಿಕದಲ್ಲಿಯೇ ಇದ್ದರು. ಈಗ ಅವರು ಭಾರತಕ್ಕೆ ಮರಳಿದ್ದಾರೆ. ಇಲ್ಲಿಗೆ ಆಗಮಿಸಿದ ಬಳಿಕ ಅವರು ಕೆಲ ದಿನ ರೆಸ್ಟ್ ಮಾಡಿದ್ದರು. ಈಗ ಪ್ರಭಾಸ್ ಶೂಟಿಂಗ್​ಗೆ ಮರಳಿದ್ದಾರೆ. ‘ಕಲ್ಕಿ 2898 ಎಡಿ’ ಚಿತ್ರದ ಶೂಟಿಂಗ್​ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿದೆ. ಆಗಸ್ಟ್ 28ರವರೆಗೆ ಚಿತ್ರತಂಡ ಇಲ್ಲಿ ಶೂಟಿಂಗ್ ಮುಂದುವರಿಸಲಿದೆ.

‘ಕಲ್ಕಿ 2898 ಎಡಿ’ ಸಿನಿಮಾಗೆ ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮೊದಲ ಗ್ಲಿಂಪ್ಸ್ ಇತ್ತೀಚೆಗೆ ಬಿಡುಗಡೆ ಆಗಿದೆ. ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಅವರ ಪಾತ್ರ ಇಲ್ಲಿ ಹೈಲೈಟ್ ಆಗಿತ್ತು. ಹೈದರಾಬಾದ್​ನಲ್ಲಿ ನಡೆಯುತ್ತಿರುವ ಶೂಟ್​ನಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತಿತರು ಭಾಗವಹಿಸುತ್ತಿದ್ದಾರೆ ಎನ್ನಲಾಗಿದೆ.

ಕಲ್ಕಿ ಅವತಾರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಈ ಚಿತ್ರದ ಕಥೆ ಭಿನ್ನವಾಗಿ ಇರಲಿದೆ ಎನ್ನಲಾಗುತ್ತಿದೆ. ಕಲ್ಕಿ ಜನಿಸಿದ ಬಳಿಕ ಕಲಿಯುಗ ಅಂತ್ಯವಾಗಿ ಸತ್ಯಯುಗ ಆರಂಭ ಆಗುತ್ತದೆ ಎನ್ನುವ ನಂಬಿಕೆ ಅನೇಕರದ್ದು. ಹೀಗಾಗಿ ಸಿನಿಮಾದ ಕಥೆ ಕಲಿಯುಗದ ಅಂತ್ಯವನ್ನು ತೋರಿಸುವ ರೀತಿಯಲ್ಲಿ ಇರಲಿದೆ ಎಂದು ಅನೇಕರು ಭಾವಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On – 2:16 pm, Wed, 9 August 23

ತಾಜಾ ಸುದ್ದಿ



Leave A Reply

Your email address will not be published.