EBM News Kannada
Leading News Portal in Kannada

ಬಾಬರಿ ಮಸೀದಿಗೆ ಏನೂ ಆಗುವುದಿಲ್ಲ ಎಂದು ವಿಜಯ ರಾಜೇ ಸಿಂಧಿಯಾ ನರಸಿಂಹ ರಾವ್​​ಗೆ ಭರವಸೆ ನೀಡಿದ್ದರು: ಶರದ್ ಪವಾರ್ – Kannada News | BJP’s Vijaya Raje Scindia assured Narasimha Rao nothing would happen to Babri Masjid says Sharad Pawar

0


ಸಚಿವರ ಗುಂಪು ಇತ್ತು. ನಾನು ಅವರಲ್ಲಿ ಒಬ್ಬನಾಗಿದ್ದೆ. ಪ್ರಧಾನ ಮಂತ್ರಿ ಆಯಾ ಪಕ್ಷದ ನಾಯಕರ ಸಭೆಯನ್ನು ಕರೆಯಬೇಕೆಂದು ನಿರ್ಧರಿಸಲಾಯಿತು. ಆ ಸಭೆಯಲ್ಲಿ ವಿಜಯ ರಾಜೇ ಸಿಂಧಿಯಾ ಅವರು ಬಾಬರಿ ಮಸೀದಿಗೆ ಏನೂ ಆಗುವುದಿಲ್ಲ ಎಂದು ಪ್ರಧಾನಿಗೆ ಭರವಸೆ ನೀಡಿದ್ದರು. ಗೃಹ ಸಚಿವರು ಮತ್ತು ಗೃಹ ಕಾರ್ಯದರ್ಶಿ ಅವರು ಏನು ಬೇಕಾದರೂ ಆಗಬಹುದು ಎಂದು ಕಳವಳ ವ್ಯಕ್ತಪಡಿಸಿದಾಗಲೂ ರಾವ್ ಅವರು ಸಿಂಧಿಯಾ ಅವರನ್ನು ನಂಬಲು ನಿರ್ಧರಿಸಿದರು ಎಂದು ಪವಾರ್ ಹೇಳಿದ್ದಾರೆ.

ಶರದ್ ಪವಾರ್

ದೆಹಲಿ ಆಗಸ್ಟ್ 09: 1992ರಲ್ಲಿ ರಾಮ ಜನ್ಮಭೂಮಿ ಆಂದೋಲನದ (Ram Janmbhoomi movement)ಕಾವು ಹೆಚ್ಚುತ್ತಿದ್ದಂತೆ ಬಿಜೆಪಿ ನಾಯಕಿ ವಿಜಯ ರಾಜೇ ಸಿಂಧಿಯಾ (Vijaya Raje Scindia) ಅವರು ಅಂದಿನ ಪ್ರಧಾನಿ ಪಿವಿ ನರಸಿಂಹರಾವ್ ಅವರಿಗೆ (PV Narasimha Rao) ಬಾಬರಿ ಮಸೀದಿಗೆ (Babri Masjid) ಏನೂ ಆಗುವುದಿಲ್ಲ ಎಂದು ಭರವಸೆ ನೀಡಿದ್ದರು. ಅವರು ತಮ್ಮ ಮಂತ್ರಿಗಳ ಸಲಹೆಗೆ ವಿರುದ್ಧವಾಗಿ ಅವರನ್ನು ನಂಬಿದ್ದರು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮಂಗಳವಾರ ಬಹಿರಂಗಪಡಿಸಿದ್ದಾರೆ.
ಬಾಬರಿ ಮಸೀದಿ ಧ್ವಂಸದ ಸಮಯದಲ್ಲಿ ರಕ್ಷಣಾ ಸಚಿವರಾಗಿದ್ದ ಪವಾರ್, ಹಿರಿಯ ಪತ್ರಕರ್ತೆ ನೀರ್ಜಾ ಚೌಧರಿ ಅವರ ‘ಹೌ ಪ್ರೈಮ್ ಮಿನಿಸ್ಟರ್ಸ್ ಡಿಸೈಡ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದು, ಸಭೆಯಲ್ಲಿ ಅಂದಿನ ಗೃಹ ಸಚಿವರು ಮತ್ತು ಗೃಹ ಕಾರ್ಯದರ್ಶಿ ಜತೆಗಿದ್ದರು ಎಂದಿದ್ದಾರೆ.

ಸಚಿವರ ಗುಂಪು ಇತ್ತು. ನಾನು ಅವರಲ್ಲಿ ಒಬ್ಬನಾಗಿದ್ದೆ. ಪ್ರಧಾನ ಮಂತ್ರಿ ಆಯಾ ಪಕ್ಷದ ನಾಯಕರ ಸಭೆಯನ್ನು ಕರೆಯಬೇಕೆಂದು ನಿರ್ಧರಿಸಲಾಯಿತು. ಆ ಸಭೆಯಲ್ಲಿ ವಿಜಯ ರಾಜೇ ಸಿಂಧಿಯಾ ಅವರು ಬಾಬರಿ ಮಸೀದಿಗೆ ಏನೂ ಆಗುವುದಿಲ್ಲ ಎಂದು ಪ್ರಧಾನಿಗೆ ಭರವಸೆ ನೀಡಿದ್ದರು. ಗೃಹ ಸಚಿವರು ಮತ್ತು ಗೃಹ ಕಾರ್ಯದರ್ಶಿ ಅವರು ಏನು ಬೇಕಾದರೂ ಆಗಬಹುದು ಎಂದು ಕಳವಳ ವ್ಯಕ್ತಪಡಿಸಿದಾಗಲೂ ರಾವ್ ಅವರು ಸಿಂಧಿಯಾ ಅವರನ್ನು ನಂಬಲು ನಿರ್ಧರಿಸಿದರು ಎಂದು ಪವಾರ್ ಹೇಳಿದ್ದಾರೆ.

ಮಸೀದಿ ಧ್ವಂಸದ ನಂತರ ರಾವ್ ಅವರು ಕೆಲವು ಹಿರಿಯ ಪತ್ರಕರ್ತರೊಂದಿಗೆ ನಡೆಸಿದ ಸಂವಾದವನ್ನು ಚೌಧರಿ ನೆನಪಿಸಿಕೊಂಡರು. ಬಾಬರಿ ಮಸೀದಿ ಅಲ್ಲಿ ಧ್ವಂಸವಾದಾಗ ನೀವೇನು ಮಾಡುತ್ತಿದ್ದಿರಿ? ಎಂದು ಪತ್ರಕರ್ತರು ಪ್ರಧಾನಿಯವರಲ್ಲಿ ಕೇಳಿದಾಗ ರಾವ್ ಅವರು, ನಾನು ಅದನ್ನು ಸಂಭವಿಸಲು ಬಿಟ್ಟೆ. ಏಕೆಂದರೆ ಅದು ಉಲ್ಬಣಗೊಳ್ಳುವ ಹುಣ್ಣನ್ನು ಶಮನ ಮಾಡಿ ಬಿಡಬಹುದು. ಬಿಜೆಪಿ ತನ್ನ ಪ್ರಮುಖ ರಾಜಕೀಯ ಕಾರ್ಡ್ ಅನ್ನು ಕಳೆದುಕೊಳ್ಳುತ್ತದೆ ಎಂದು ನಾನು ಭಾವಿಸಿದ್ದೆ ಎಂದಿದ್ದರು.

ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕಾಂಗ್ರೆಸ್ ನಾಯಕ ಶಶಿ ತರೂರ್, ಮಾಜಿ ರೈಲ್ವೆ ಸಚಿವ ಮತ್ತು ಬಿಜೆಪಿ ನಾಯಕ ದಿನೇಶ್ ತ್ರಿವೇದಿ ಮತ್ತು ಮಹಾರಾಷ್ಟ್ರದ ಮಾಜಿ ಸಿಎಂ ಪೃಥ್ವಿರಾಜ್ ಚವಾಣ್ ಅವರೊಂದಿಗೆ ಪವಾರ್ ಅವರು ಪುಸ್ತಕವನ್ನು ಬಿಡುಗಡೆ ಮಾಡಿದರು.

ಚರ್ಚೆಯನ್ನು ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ನಿರ್ವಹಿಸಿದರು. ತ್ರಿವೇದಿ ಅವರು ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ಸಮಯ ಮತ್ತು ಅವರ ಪ್ರಮುಖ ಸಲಹೆಗಾರರಲ್ಲಿ ಒಬ್ಬರಾದ ಅರುಣ್ ನೆಹರು ಅವರ ಪಾತ್ರವನ್ನು ನೆನಪಿಸಿಕೊಂಡರು.

ಅರುಣ್ ನೆಹರು ಅವರು ಕುಟುಂಬದವರಂತೆ ಇದ್ದರು.ಅದು ಅತ್ಯುತ್ತಮ ಅವಧಿಗಳಲ್ಲಿ ಒಂದಾಗಿತ್ತು. ಇದನ್ನು ಮುಂದುವರೆಸಿದರೆ ಅದು ಭಿನ್ನವಾಗಿ ಇರುತ್ತಿತ್ತು ಎಂದು ತ್ರಿವೇದಿ ಹೇಳಿದರು.

ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದ ಪೃಥ್ವಿರಾಜ್ ಚವಾಣ್, ಅಣ್ಣಾ ಹಜಾರೆ ಚಳವಳಿಯನ್ನು ಸರಿಯಾಗಿ ನಿಭಾಯಿಸದಿರುವುದು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಅವನತಿಗೆ ಕಾರಣವಾಯಿತು ಎಂದಿದ್ದಾರೆ. ಆ ಪತನಕ್ಕೆ ಕಾರಣ ಏನೆಂದರೆ ಅದಕ್ಕೂ ಮೊದಲು ಏನಾಯಿತು ಎಂಬುದು. ಹಗರಣಗಳು, 2 ಜಿ… ನಾವು ಅಣ್ಣಾ ಹಜಾರೆಯನ್ನು ಸರಿಯಾಗಿ ನಿಭಾಯಿಸಲಿಲ್ಲ. ಅದು ಕಾಂಗ್ರೆಸ್ ಸರ್ಕಾರವನ್ನು ಕೊನೆಗೊಳಿಸಿತು ಎಂದು ಅವರು ಹೇಳಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಒಮ್ಮತ ಮೂಡಿಸುವಲ್ಲಿ ಉತ್ತಮರು ಎಂದು ಹೇಳಿದ ಅವರು ಪರಮಾಣು ಒಪ್ಪಂದವನ್ನು ಪ್ರಸ್ತಾಪಿಸಿದರು.

ಚೌಧರಿ ಅವರ ಪುಸ್ತಕವು ಐತಿಹಾಸಿಕ ಮಹತ್ವದ ಆರು ನಿರ್ಧಾರಗಳ ಮೂಲಕ ದೇಶದ ಪ್ರಧಾನ ಮಂತ್ರಿಗಳ ಕಾರ್ಯಾಚರಣೆಯ ಶೈಲಿಯನ್ನು ವಿಶ್ಲೇಷಿಸುತ್ತದೆ.

1977 ರಲ್ಲಿ ತುರ್ತು ಪರಿಸ್ಥಿತಿಯ ನಂತರದ ಹೀನಾಯ ಸೋಲಿನ ನಂತರ 1980 ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಅಧಿಕಾರಕ್ಕೆ ಮರಳಿದರು, ಶಾ ಬಾನೋ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಲ್ಲಿ ತೀರ್ಪನ್ನು ರದ್ದುಗೊಳಿಸುವ ರಾಜೀವ್ ಗಾಂಧಿಯವರ ನಿರ್ಧಾರ, ವಿ ಪಿ ಸಿಂಗ್ ಅವರ ಮಂಡಲ್ ಆಯೋಗದ ವರದಿಯ ಅನುಷ್ಠಾನ, ಬಾಬರಿ ಮಸೀದಿ ಘಟನೆಯ ಸಂದರ್ಭದಲ್ಲಿ ಪಿವಿ ನರಸಿಂಹ ರಾವ್ ಅವರ ಪ್ರಧಾನಿ ಪಾತ್ರ ಮತ್ತು ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ಬಗ್ಗೆ ಪುಸ್ತಕದಲ್ಲಿ ಬರೆಯಲಾಗಿದೆ.

ತಾಜಾ ಸುದ್ದಿ

Leave A Reply

Your email address will not be published.