EBM News Kannada
Leading News Portal in Kannada

‘ಜೈಲರ್​’ ಬಿಡುಗಡೆ ಪ್ರಯುಕ್ತ ಆ.10ರಂದು ರಜೆ ಘೋಷಿಸಿದ ಖಾಸಗಿ ಕಂಪನಿಗಳು; ಅಬ್ಬಬ್ಬಾ ಇದು ರಜನಿಕಾಂತ್​ ಹವಾ – Kannada News | Private company in Chennai and Bengaluru declares holiday on 10th August due to Jailer movie release

0


Jailer Movie: ಬಹುದಿನಗಳ ಬಳಿಕ ರಜನಿಕಾಂತ್​ ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಆ ಕಾರಣದಿಂದ ‘ಜೈಲರ್​’ ಸಿನಿಮಾ ಮೇಲೆ ನಿರೀಕ್ಷೆ ಜೋರಾಗಿದೆ. ಈ ಚಿತ್ರದ ರಿಲೀಸ್​ ಪ್ರಯುಕ್ತ ಕೆಲವು ಖಾಸಗಿ ಕಂಪನಿಗಳು ರಜೆ ಘೋಷಿಸಿವೆ.

‘ಜೈಲರ್​’ ಬಿಡುಗಡೆ ಪ್ರಯುಕ್ತ ಆ.10ರಂದು ರಜೆ ಘೋಷಿಸಿದ ಖಾಸಗಿ ಕಂಪನಿಗಳು; ಅಬ್ಬಬ್ಬಾ ಇದು ರಜನಿಕಾಂತ್​ ಹವಾ

ರಜನಿಕಾಂತ್​

ನಟ ರಜನಿಕಾಂತ್​ (Rajinikanth) ಅವರಿಗೆ ಇರುವ ಅಭಿಮಾನಿ ಬಳಗದ ಬಗ್ಗೆ ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಬಾಲಕರಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ರಜನಿಕಾಂತ್​ ನಟನೆಯ ಸಿನಿಮಾಗಳನ್ನು ಇಷ್ಟಪಡುತ್ತಾರೆ. ಅವರ ಪ್ರತಿ ಸಿನಿಮಾಗಳು ಬಿಡುಗಡೆ ಆದಾಗಲೂ ಹಬ್ಬದ ವಾತಾವರಣ ನಿರ್ಮಾಣ ಆಗುತ್ತದೆ. ಹಬ್ಬ ಎಂದಮೇಲೆ ರಜೆ ಇಲ್ಲದಿದ್ದರೆ ಹೇಗೆ? ಖಂಡಿತ ಇರಲೇಬೇಕು. ಆಗಸ್ಟ್​ 10ರಂದು ರಜನಿಕಾಂತ್​ ನಟನೆಯ ‘ಜೈಲರ್​’ ಸಿನಿಮಾ (Jailer Movie) ಬಿಡುಗಡೆ ಆಗುತ್ತಿದೆ. ಈ ಪ್ರಯುಕ್ತ ಕೆಲವು ಖಾಸಗಿ ಕಂಪನಿಗಳು ರಜೆ ಘೋಷಣೆ ಮಾಡಿವೆ. ರಜನಿಕಾಂತ್​ ಅವರ ಸಿನಿಮಾಗಳಿಂದ ಮಾತ್ರ ಈ ರೀತಿ ಹವಾ ಸೃಷ್ಟಿಸಲು ಸಾಧ್ಯ ಎಂದು ಫ್ಯಾನ್ಸ್​ ಹಿರಿಹಿರಿ ಹಿಗ್ಗುತ್ತಿದ್ದಾರೆ. ಬಹುನಿರೀಕ್ಷಿತ ‘ಜೈಲರ್​’ ಸಿನಿಮಾದಲ್ಲಿ ಶಿವರಾಜ್​ಕುಮಾರ್​ (Shivarajkumar) ಕೂಡ ನಟಿಸಿದ್ದಾರೆ. ಹಾಗಾಗಿ ಕರ್ನಾಟಕದಲ್ಲೂ ಈ ಸಿನಿಮಾದ ಬಗ್ಗೆ ಹೈಪ್​ ಹೆಚ್ಚಿದೆ.

ಖಾಸಗಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ರಜೆ ನೀಡಿರುವ ಆದೇಶ ಪತ್ರದ ಫೋಟೋ ವೈರಲ್​ ಆಗಿದೆ. ‘ಆಗಸ್ಟ್​ 10ರಂದು ರಜನಿಕಾಂತ್​ ಅಭಿನಯದ ಜೈಲರ್​ ಸಿನಿಮಾ ಬಿಡುಗಡೆ ಪ್ರಯುಕ್ತ ನಾವು ರಜೆ ಘೋಷಿಸಿದ್ದೇವೆ. ಉಚಿತ ಟಿಕೆಟ್​ ಕೂಡ ನೀಡುತ್ತಿದ್ದೇವೆ. ನಮ್ಮ ತಾತನ ಕಾಲಕ್ಕೆ, ತಂದೆಯ ಕಾಲಕ್ಕೆ, ನಮ್ಮ ಕಾಲಕ್ಕೆ, ನಮ್ಮ ಮಕ್ಕಳ ಮತ್ತು ಮೊಮ್ಮಕ್ಕಳ ಕಾಲಕ್ಕೆ ಒಬ್ಬರೇ ಸೂಪರ್​ ಸ್ಟಾರ್​’ ಎಂದು ಬರೆದಿರುವ ನೋಟೀಸ್​ ವೈರಲ್​ ಆಗಿದೆ. ಈ ಕಂಪನಿಯ ಚೆನೈ, ಬೆಂಗಳೂರು ಮುಂತಾದ ಪ್ರದೇಶಗಳ ಶಾಖೆಗಳಿಗೂ ರಜೆ ಅನ್ವಯ ಆಗುತ್ತದೆ ಎಂದು ಈ ನೋಟೀಸ್​ನಲ್ಲಿ ತಿಳಿಸಲಾಗಿದೆ.

ಬಹುದಿನಗಳ ಬಳಿಕ ರಜನಿಕಾಂತ್​ ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ನಟಿಸಿದ ‘ಅಣ್ಣಾತೆ’ ಸಿನಿಮಾ 2021ರ ನವೆಂಬರ್​ನಲ್ಲಿ ತೆರೆಕಂಡಿತ್ತು. ಆ ಬಳಿಕ ಬಿಡುಗಡೆ ಆಗುತ್ತಿರುವ ಚಿತ್ರವೇ ‘ಜೈಲರ್​’. ಹಾಗಾಗಿ ನಿರೀಕ್ಷೆ ಜೋರಾಗಿದೆ. ಈ ಸಿನಿಮಾದ ‘ಕಾವಾಲಾ..’ ಹಾಡು ಈಗಾಗಲೇ ಸೂಪರ್​ ಹಿಟ್​ ಆಗಿದೆ. ಈ ಹಾಡಿನಲ್ಲಿ ರಜನಿಕಾಂತ್​ ಜೊತೆ ತಮನ್ನಾ ಭಾಟಿಯಾ ಅವರು ಬಿಂದಾಸ್​ ಆಗಿ ಕುಣಿಸಿದ್ದಾರೆ. ಯೂಟ್ಯೂಬ್​ನಲ್ಲಿ ಈ ಹಾಡು ಕೋಟ್ಯಂತರ ಬಾರಿ ವೀಕ್ಷಣೆ ಕಂಡಿದೆ.

ನೆಲ್ಸನ್​ ಅವರು ‘ಜೈಲರ್​’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸನ್​ ಪಿಕ್ಚರ್ಸ್​ ಮೂಲಕ ಅದ್ದೂರಿಯಾಗಿ ಈ ಸಿನಿಮಾ ನಿರ್ಮಾಣ ಆಗಿದೆ. ಅನಿರುದ್ಧ್​ ರವಿಚಂದರ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ರಮ್ಯಾ ಕೃಷ್ಣನ್​, ಜಾಕಿ ಶ್ರಾಫ್​, ಮೋಹನ್​ಲಾಲ್​, ಶಿವರಾಜ್​ಕುಮಾರ್​ ಮುಂತಾದ ಘಟಾನುಘಟಿಗಳು ಈ ಚಿತ್ರದಲ್ಲಿ ನಟಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಬುಕಿಂಗ್​ ಓಪನ್ ಆಗಿದ್ದು, ಅನೇಕ ಶೋಗಳ ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ



Leave A Reply

Your email address will not be published.