EBM News Kannada
Leading News Portal in Kannada

ಕೇಂದ್ರದ ಯೋಜನೆಯಡಿ ಗೃಹಜ್ಯೋತಿ ಯೋಜನೆಗೆ ವಿದ್ಯುತ್​ ಪೂರೈಕೆ: ಪ್ರಲ್ಹಾದ್ ಜೋಶಿ – Kannada News | Power supply to Gruha Jyothi scheme under Centre’s One Grid One Nation scheme says Union minister Pralhad Joshi in Hubballi

0


ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಇದೀಗ, ಕೇಂದ್ರದ ಒನ್​ ಗ್ರಿಡ್​​ ಒನ್​ ನೇಷನ್​ ಯೋಜನೆಯಡಿಯೇ ಗೃಹಜ್ಯೋತಿ ಯೋಜನೆಗೆ ವಿದ್ಯುತ್​ ಪೊರೈಕೆಯಾಗುತ್ತಿದೆ ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ, ಆಗಸ್ಟ್ 5: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗೃಹಜ್ಯೋತಿ ಯೋಜನೆಗೆ (Gruha Jyothi Scheme) ಕೇಂದ್ರ ಬಿಜೆಪಿ ಸರ್ಕಾರದ ಒನ್​ ಗ್ರಿಡ್​​ ಒನ್​ ನೇಷನ್​ ಯೋಜನೆಯಡಿ ವಿದ್ಯುತ್​ ಪೊರೈಕೆಯಾಗುತ್ತಿದೆ ಎಂದು ಕೇಂದ್ರ ಗಣಿ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಯೋಜನೆಯಡಿ ವಿದ್ಯುತ್ ಪಡೆದು ನಾವೇ ವಿದ್ಯುತ್ ಕೊಡುತ್ತಿದ್ದೇವೆಂದು ಕಾಂಗ್ರೆಸ್ (Congress) ನಾಯಕರು ದುರಂಹಕಾರದಿಂದ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿರುವುದು​ ಜನ ವಿರೋಧಿ, ಸುಳ್ಳು ಹೇಳುವ ಸರ್ಕಾರ. ಗೃಹಜ್ಯೋತಿ ಯೋಜನೆ ಜಾರಿಗೂ ಮೊದಲೇ ವಿದ್ಯುತ್​ ದರ ಹೆಚ್ಚಿಸಿದೆ ಎಂದು ಆರೋಪಿಸಿದ ಪ್ರಲ್ಹಾದ್ ಜೋಶಿ, ಕಾಂಗ್ರೆಸ್​ ಸರ್ಕಾರದಿಂದ ಅಭಿವೃದ್ಧಿ ಮರೀಚಿಕೆಯಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್​ಗೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಇದಕ್ಕೂ ಮುನ್ನ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದರು. ರಾಜ್ಯ ಸರ್ಕಾರದ ಪ್ರತಿಯೊಂದು ಹುದ್ದೆಯನ್ನೂ ಹರಾಜು ಹಾಕಲಾಗುತ್ತಿದ್ದು, ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ಪೋಸ್ಟಿಂಗ್ ನೀಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿರುವ ಕಾರಣದಿಂದಲೇ ಸ್ವಪಕ್ಷದ ಶಾಸಕರು ಬಂಡಾಯ ಏಳುತ್ತಿದ್ದಾರೆ ಎಂದಿದ್ದರು.

ಬಸ್​ನಲ್ಲಿ ಉಚಿತ ಪ್ರಯಾಣ ನೀಡುತ್ತಿದ್ದೇವೆ ಎನ್ನುತ್ತಿದ್ದಾರೆ. ಬಸ್​ ಓಡಾಡಲು ಉತ್ತಮ ರಸ್ತೆ ಬೇಕು. ಆದರೆ ಮಳೆಯಿಂದಾಗಿ ರಸ್ತೆಗಳು ಹಾನಿಗೊಳಗಾಗಿದ್ದರೂ ದುರಸ್ತಿಗೆ ಅನುದಾನ ಕೊಡುತ್ತಿಲ್ಲ. ರಸ್ತೆ ಅಭಿವೃದ್ಧಿ ಮಾತ್ರವಲ್ಲದೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಶಾಸಕರಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಜೋಶಿ ಆರೋಪಿಸಿದ್ದರು.

ತಾಜಾ ಸುದ್ದಿ

Leave A Reply

Your email address will not be published.