EBM News Kannada
Leading News Portal in Kannada

ಅಮೆರಿಕಾದಲ್ಲಿ ಕೊರೋನಾ ಆರ್ಭಟ: 5 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ; 18,763 ಮಂದಿ ಸಾವು

0

ನವದೆಹಲಿ(ಏ.11): ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್​ರ್ ರೋಗವೂ ಇಡೀ ಜಗತ್ತಿನಾದ್ಯಂತ ಎಲ್ಲಾ ದೇಶಗಳಿಗೂ ವ್ಯಾಪಿಸಿದೆ. ಈ ಮಾರಕ ಕೊರೋನಾಗೆ ಚೀನಾ, ಇರಾನ್​​​, ಇರಾಕ್​​ ದೇಶಗಳಂತೆಯೇ ಅಮೆರಿಕಾ ಕೂಡ ತತ್ತರಿಸಿ ಹೋಗಿದೆ. ಇದರ ಪರಿಣಾಮ ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷಕ್ಕೇರಿಕೆಯಾಗಿದೆ. ಅಂದರೆ ಇದುವರೆಗೂ 5,04,780 ಮಂದಿಗೆ ಕೊರೋನಾ ಸೋಂಕು ಬಂದಿದ್ದು, ಸುಮಾರು 18763 ಸಾವನ್ನಪ್ಪಿದ್ದಾರೆ. ಜತೆಗೆ 1531 ಸೋಂಕಿತರು ಗುಣಮುಖರಾಗಿದ್ದಾರೆ.

ಜಗತ್ತಿನಲ್ಲೇ ಅತೀ ಹೆಚ್ಚು ಕೋವಿಡ್​​-19 ಪಾಸಿಟಿವ್​​​​ ಪ್ರಕರಣಗಳು ದಾಖಲಾಗಿರುವ ಮೊದಲ ದೇಶ ಅಮೆರಿಕಾ. ಚೀನಾದಲ್ಲೂ ಕಾಣಿಸಿಕೊಂಡರೂ ಈ ರೋಗ ಶರ ವೇಗದಲ್ಲಿ ಹರಡುತ್ತಿರುವುದು ಮಾತ್ರ ಅಮೆರಿಕಾದಲ್ಲೇ ಎಂಬುದು ವಾಸ್ತವ. ಇದಕ್ಕೆ ಸಾಕ್ಷಿಯೇ 5 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೋನಾ ಬಂದಿರುವುದು.

ಇನ್ನು, ಅಮೆರಿಕಾದ ನ್ಯೂಯಾರ್ಕ್​​ನಲ್ಲಿ ಹೆಚ್ಚು ಸೋಂಕಿತರು ಇದ್ದಾರೆ. ಸುಮಾರು 1,59,937 ಜನರಿಗೆ ನ್ಯೂಯಾರ್ಕ್​​ನಲ್ಲಿ ಪಾಸಿಟಿವ್ ಬಂದಿದೆ. ಜತೆಗೆ ನ್ಯೂ ಜರ್ಸಿ, ಕ್ಯಾಲಿಫೋರ್ನಿಯಾ, ಮಿಚಿಗನ್ ನಗರಗಳು ಹೆಚ್ಚಿನ ಸೋಂಕಿತರನ್ನು ಹೊಂದಿವೆ.

ಸದ್ಯ ಭಾರತದಲ್ಲಿ ಕೊರೋನಾ ವೈರಸ್ ದಾಳಿಯಿಂದ ಮೃತಪಟ್ಟವರ ಸಂಖ್ಯೆ 239 ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 6,761 ಕ್ಕೆ ಏರಿದೆ. ಗುರುವಾರ ಸಂಜೆ ನಂತರದ 24 ಗಂಟೆಗಳಲ್ಲಿ ಸುಮಾರು 896 ಹೊಸ ಪ್ರಕರಣಗಳು ಕಂಡುಬಂದಿವೆ. ಅಲ್ಲದೆ, ಈ ಪೈಕಿ 37 ಜನ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

Leave A Reply

Your email address will not be published.