ಪ್ರೀತಿ ಸಿಗದೆ ಭಾರತದ ಗಡಿಯಲ್ಲಿ ಗುಂಡಿಗೆ ಬಲಿಯಾದ ಪಾಕ್ ಪ್ರಜೆ
ಜಮ್ಮು-ಕಾಶ್ಮೀರ: ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬೆಸತ್ತ ಪಾಕಿಸ್ತಾನದ ಯುವಕನೊಬ್ಬ ಭಾರತದ ಗಡಿ ಪ್ರದೇಶದಲ್ಲಿ ನಡೆದು ಬಂದು ಭದ್ರತಾ ಪಡೆಗಳು ಹಾರಿಸಿದ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.
ಮೊಹಮ್ಮದ್ ಅಸೀಫ್ (32) ಗುಂಡಿಗೆ ಬಲಿಯಾದ ಯುವಕ. ಮ್ಯಾಬೊಕ್ ಗಡಿ ಪ್ರದೇಶದಲ್ಲಿ ಬಿಎಸ್ ಎಫ್ ನ 118 ಬೆಟಲಿಯನ್ ತುಕಡಿ ಈತನನ್ನು ಗುಂಡಿಟ್ಟು ಹತ್ಯೆ ಮಾಡಿದೆ ಎಂದು ಪಿರೋಜಾಪುರ್ ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಸ್ಎಫ್ ಯೋಧರ ಗುಂಡು ತನ್ನ ಮುರಿದ ಹೃದಯದ ಆಘಾತವನ್ನು ಕೊನೆಗೊಳಿಸುತ್ತದೆ ಎಂದು ಭಾವಿಸಿ ಆಶೀಫ್ ಭಾರತೀಯ ಗಡಿಯ ಕಡೆಗೆ ನಡೆದು ಬಂದಿದ್ದಾನೆ. ಮೊದಲಿಗೆ ಆತ ನೇಣುಬಿಗಿದುಕೊಳ್ಳಲು ತೀರ್ಮಾನಿಸಿದ್ದನಂತೆ.
ಆದರೆ, ಪವಿತ್ರ ರಂಜಾನ್ ಮಾಸದ ಹಿನ್ನೆಲೆಯಲ್ಲಿ ಮನಸ್ಸು ಬದಲಾವಣೆ ಮಾಡಿದ್ದಾಗಿ ಮೃತ ಯುವಕನೇ ಬಿಎಸ್ ಎಫ್ ಅಧಿಕಾರಿಗಳೊಂದಿಗೆ ಹೇಳಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಪಾಕಿಸ್ತಾನದ ಕಸೌರ್ ಜಿಲ್ಲೆಯ ಜಲ್ಲೊಕು ಗ್ರಾಮದ ಅಸೀಪ್ ಗೆ ತನ್ನ ಅತ್ತೆಯ ಮಗಳೊಂದಿಗೆ ಪ್ರೇಮಂಕುರವಾಗಿತ್ತು. ಆದರೆ, ಆಕೆ ಮದುವೆಯಾಗಲು ಆಕೆ ಒಪ್ಪದ ಹಿನ್ನೆಲೆಯಲ್ಲಿ ಆಕೆ ಸಾಯಲು ನಿರ್ಧರಿಸಿದ್ದ ಎನ್ನಲಾಗಿದೆ.
ಇಬ್ಬರು ಪ್ರೀತಿಸುತ್ತಿದ್ದು, ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಆ ಯುವತಿಯನ್ನು ಬಲವಂತವಾಗಿ ಬೇರೊಬ್ಬರೊಂದಿಗೆ ವಿವಾಹ ಮಾಡಲಾಗಿತ್ತು. ಬಳಿಕ ಆಕೆ ವಿಚ್ಚೇದನ ಪಡೆದುಕೊಂಡಿಲ್ಲ. ಮತ್ತೆ ಆಸೀಪ್ ಮದುವೆಯಾಗಲು ಆತನ ಕುಟುಂಬ ಒಪ್ಪಿರಲಿಲ್ಲ ಎಂದು ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ.
ಭಾರತೀಯ ಪಾಸ್ ಪೋರ್ಸ್ ಕಾಯ್ದೆ ಮತ್ತು ವಿದೇಶಿಗರ ಕಾಯ್ದೆಯಡಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.