EBM News Kannada
Leading News Portal in Kannada

ನೆರವು ವಿತರಣೆ ವಿಳಂಬಿಸುವುದು ಒತ್ತೆಯಾಳು ಬಿಡುಗಡೆಗೆ ಪರಿಣಾಮ ಬೀರಬಹುದು: ಹಮಾಸ್

0



ಗಾಝಾ: ಕದನ ವಿರಾಮ ಒಪ್ಪಂದದಲ್ಲಿ ಉಲ್ಲೇಖಿಸಿದಂತೆ ಗಾಝಾಕ್ಕೆ ಪ್ರಮುಖ ಮಾನವೀಯ ನೆರವು ವಿತರಣೆಯನ್ನು ಇಸ್ರೇಲ್ ವಿಳಂಬಿಸುತ್ತಿದೆ ಎಂದು ಹಮಾಸ್ ಅಧಿಕಾರಿಗಳು ಬುಧವಾರ ಆರೋಪಿಸಿದ್ದು, ಇದು ಒತ್ತೆಯಾಳುಗಳ ಬಿಡುಗಡೆ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಿದೆ.

ಪ್ರಮುಖ ನೆರವು ವಿತರಣೆಯಲ್ಲಿ ಮುಂದುವರಿದ ವಿಳಂಬಗಳು ಹಾಗೂ ಈ ಸಮಸ್ಯೆಯನ್ನು ಪರಿಹರಿಸುವಲ್ಲಿನ ವೈಫಲ್ಯವು ಒತ್ತೆಯಾಳುಗಳ ಬಿಡುಗಡೆ ಸೆರಿದಂತೆ ಒಪ್ಪಂದದ ಸಹಜ ಪ್ರಗತಿಯ ಮೇಲೆ ಪರಿಣಾಮ ಬೀರಲಿದೆ ಎಂದು ಹಮಾಸ್‍ನ ಇಬ್ಬರು ಉನ್ನತ ನಾಯಕರು ಎಚ್ಚರಿಕೆ ನೀಡಿರುವುದಾಗಿ ಎಎಫ್‍ಪಿ ಸುದ್ದಿಸಂಸ್ಥೆ ಬುಧವಾರ ವರದಿ ಮಾಡಿದೆ.

Leave A Reply

Your email address will not be published.