EBM News Kannada
Leading News Portal in Kannada

ಆಸ್ಕರ್ ಪ್ರಶಸ್ತಿ ಮೇಲೂ ಕಾಳ್ಗಿಚ್ಚಿನ ಕರಿ ಛಾಯೆ: ನಾಮನಿರ್ದೇಶನ ಮತ್ತೆ ಮುಂದೂಡಿಕೆ

0



ಲಾಸ್ ಏಂಜಲೀಸ್: ಲಾಸ್ ಏಂಜಲೀಸ್ ಪ್ರದೇಶದ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿರುವ ವಿನಾಶಕಾರಿ ಕಾಳ್ಗಿಚ್ಚು, ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ಮೇಲೂ ಕರಿನೆರಳು ಬೀರಿದ್ದು, ಕಾಳ್ಗಿಚ್ಚಿನ ಕಾರಣದಿಂದ ಆಸ್ಕರ್ ಪ್ರಶಸ್ತಿಗೆ ಚಿತ್ರಗಳ ನಾಮನಿರ್ದೇಶನ ಮಾಡುವ ಪ್ರಕ್ರಿಯೆಯನ್ನು ದಿಢೀರನೇ ಹತ್ತು ದಿನಗಳ ಕಾಲ ಮುಂದೂಡಲಾಗಿದೆ.

ಸತತ ಎರಡನೇ ಬಾರಿಗೆ ಚಿತ್ರಗಳ ನಾಮನಿರ್ದೇಶನ ಘೋಷಣೆಯ ದಿನಾಂಕವನ್ನು ಮುಂದೂಡಲಾಗಿದೆ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ & ಸೈನ್ಸ್ ಸೋಮವಾರ ಹೇಳಿಕೆ ನೀಡಿದೆ. ಚಿತ್ರ ಜಗತ್ತಿನ ಅತ್ಯಂತ ಶ್ರೇಷ್ಠ ಪ್ರಶಸ್ತಿಗೆ ಜನವರಿ 23ರಂದು ನಾಮನಿರ್ದೇಶನ ಘೋಷಿಸಲಾಗುವುದು ಎಂದು ಆಯೋಜರು ಹೇಳಿದ್ದಾರೆ. ಈ ಮೊದಲು ನಾಮನಿರ್ದೇಶನಗೊಂಡ ಚಿತ್ರಗಳ ಪಟ್ಟಿಯನ್ನು ಜವರಿ 19ರಂದು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿತ್ತು.

“ಇನ್ನೂ ಭಯಾನಕವಾಗಿ ಮುಂದುವರಿದಿರುವ ಕಾಳ್ಗಿಚ್ಚಿನ ಪರಿಣಾಮವಾಗಿ, ನಾಮನಿರ್ದೇಶನದ ಅವಧಿಯನ್ನು ಮತ್ತಷ್ಟು ವಿಸ್ತರಿಸುವುದು ಅಗತ್ಯ ಎಂಬ ಭಾವನೆ ನಮ್ಮದು. ಆದ್ದರಿಂದ ನಮ್ಮ ಸದಸ್ಯರಿಗೆ ನಾಮನಿರ್ದೇಶನಗಳನ್ನು ಘೋಷಿಸಲು ಹೆಚ್ಚವರಿ ಸಯಮಾವಕಾಶ ಅಗತ್ಯ” ಎಂದು ಅಕಾಡೆಮಿ ಸಿಇಓ ಬಿಲ್ ಕ್ರಾಮರ್ ಮತ್ತು ಅಧ್ಯ್ಷ ಜನೆಟ್ ಯಂಗ್ ಹೇಳಿದ್ದಾರೆ.

Leave A Reply

Your email address will not be published.