EBM News Kannada
Leading News Portal in Kannada

ಶ್ರೀಲಂಕಾ: ರೊಹಿಂಗ್ಯಾ ನಿರಾಶ್ರಿತರ ಗಡೀಪಾರು ತಡೆಯಲು ಆಗ್ರಹ

0


PC : aljazeera.com

ಕೊಲಂಬೊ: ಕಳೆದ ತಿಂಗಳು ಹಿಂದೂ ಮಹಾಸಾಗರ ದ್ವೀಪದಲ್ಲಿ ರಕ್ಷಿಸಲ್ಪಟ್ಟ 100ಕ್ಕೂ ಹೆಚ್ಚು ರೊಹಿಂಗ್ಯಾ ನಿರಾಶ್ರಿತರನ್ನು ಮ್ಯಾನ್ಮಾರ್‍ಗೆ ಗಡೀಪಾರು ಮಾಡುವ ಸರಕಾರದ ನಿರ್ಧಾರಕ್ಕೆ ಶ್ರೀಲಂಕಾದ ನಾಗರಿಕ ಸಮಾಜ ಗುಂಪುಗಳು ಹಾಗೂ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

25ಕ್ಕೂ ಅಧಿಕ ಮಕ್ಕಳ ಸಹಿತ 100ಕ್ಕೂ ಅಧಿಕ ರೊಹಿಂಗ್ಯಾ ನಿರಾಶ್ರಿತರನ್ನು ಡಿಸೆಂಬರ್ 19ರಂದು ಈಶಾನ್ಯ ಶ್ರೀಲಂಕಾದ ಮುಲ್ಲೈತೀವು ಜಿಲ್ಲೆಯ ಕಡಲ ತೀರದ ಬಳಿ ಅತಂತ್ರ ಸ್ಥಿತಿಯಲ್ಲಿದ್ದ ದೋಣಿಗಳಿಂದ ರಕ್ಷಿಸಲಾಗಿತ್ತು. ಇವರನ್ನು ಮ್ಯಾನ್ಮಾರ್‍ ಗೆ ಗಡೀಪಾರು ಮಾಡಲು ನಿರ್ಧರಿಸಲಾಗಿದೆ ಎಂದು ಜನವರಿ 3ರಂದು ಶ್ರೀಲಂಕಾದ ಸಾರ್ವಜನಿಕ ಭದ್ರತೆ ಇಲಾಖೆಯ ಸಚಿವ ಆನಂದ ವಿಜೆಪಾಲ ಘೋಷಿಸಿದ್ದರು. ಸರಕಾರದ ನಿರ್ಧಾರವನ್ನು ವಿರೋಧಿಸಿ ದೇಶದಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿದೆ.

Leave A Reply

Your email address will not be published.